• January 15, 2025

Tags :Darmasthala

ಚುನಾವಣೆ

ಧರ್ಮಸ್ಥಳ ಕೃಷಿಪತ್ತಿನ ಸಂಘದ ಚುನಾವಣೆ ಫಲಿತಾಂಶ: ಒಟ್ಟು 12 ಸ್ಥಾನಗಳಲ್ಲಿ ಹನ್ನೆರಡೂ ಗೆಲುವು

  ಧರ್ಮಸ್ಥಳ: ದಕ್ಷಿಣ ಕನ್ನಡದ ಮೂರನೇ ಅತೀದೊಡ್ಡ ಸೇವಾ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದಿರುವ ಧರ್ಮಸ್ಥಳ ಕೃಷಿಪತ್ತಿನ ಸಂಘದ ಚುನಾವಣೆಯ ಫಲಿತಾಂಶವು ಹೊರಬಿದ್ದಿದ್ದು ಒಟ್ಟು 12 ಸ್ಥಾನಗಳಲ್ಲಿ 12ನ್ನೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಗೆಲ್ಲುವ ಮೂಲಕ ಇತಿಹಾಸ ನಿರ್ಮಾಣವಾಗಿದೆ. ಜಯ ಗಳಿಸಿದ ಸಂತಸಕ್ಕೆ ಪಟಾಕಿ ಸಿಡಿಸುವ ಮೂಲಕ ಕಾರ್ಯಕರ್ತರು ಸಂಭ್ರಮ ಪಟ್ಟರು.Read More

ಕಾರ್ಯಕ್ರಮ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಭಾರತ ಸ್ಕೌಟ್ ಗೈಡ್ಸ್

  ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಡಿಸೆಂಬರ್ 21 ರಿಂದ 27ರವರೆಗೆ ಮೂಡಬಿದಿರೆಯಲ್ಲಿ ನಡೆಯಲಿರುವ ಸ್ಕೌಟ್ಸ್ ಗೈಡ್ಸ್ ನ ವಿಶ್ವ ಸಾಂಸ್ಕೃತಿಕೋತ್ಸವ ಜಾಂಬೂರಿಯ ಉತ್ಸವದಂಗವಾಗಿ ಮಾಹಿತಿ ಕಾರ್ಯಗಾರ ನಡೆಯಿತು. ಭಾರತ್ ಸ್ಕೌಟ್ಸ್ ಗೈಡ್ಸ್ ಸಂಘಟನಾ ಆಯುಕ್ತರಾದ ಶ್ರೀ ಭರತ್ ರಾಜ್. ಕೆ ಇವರು ಕಾರ್ಯಕ್ರಮದ ಆಗುಹೋಗುಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಜೊತೆಗೆ ಹೆತ್ತವರು ಇದ್ದಿದ್ದು ಈ ಕಾರ್ಯಕ್ರಮದ ವಿಶೇಷವಾಗಿತ್ತು. ತದನಂತರ ವಿದ್ಯಾರ್ಥಿಗಳು ತಮ್ಮ ನೃತ್ಯ ಹಾಡುಗಳ ಮೂಲಕ ಅಭ್ಯಾಗತರನ್ನು […]Read More

ಕಾರ್ಯಕ್ರಮ ಸ್ಥಳೀಯ

ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಗೈಡ್ಸ್ ಘಟಕಕ್ಕೆ ಚಾಲನೆ

  ಧರ್ಮಸ್ಥಳ: ಶ್ರೀ ಧ ಮ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಸೆ.14 ರಂದು ಸ್ಕೌಟ್ ಗೈಡ್ ಘಟಕದ ಉದ್ಘಾಟನಾ ಸಮಾರಂಭ ನೆರವೇರಿತು . ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತ ಸ್ಕೌಟ್ ಮತ್ತು ಗೈಡ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಇದರ ಕಾರ್ಯದರ್ಶಿಯಾದ ಪ್ರಮೀಳ ದೀಪ ಪ್ರಜ್ವಲಿಸಿ ಸ್ಕೌಟ್ಸ್ ಗೈಡ್ಸ್ ಘಟಕಕ್ಕೆ ಚಾಲನೆ ನೀಡಿದರು. ತದನಂತರ ವಿದ್ಯಾರ್ಥಿಗಳಿಗೆ ಸ್ಕೌಟ್ ಗೈಡಿನ ಮಹತ್ವವನ್ನ ತಿಳಿಹೇಳಿದರು. ವಿಶೇಷ ಆಹ್ವಾನಿತರಾಗಿ ಶಾಲಾ ಸಂಚಾಲಕರಾದ ಅನಂತಪದ್ಮನಾಭ ಭಟ್ ಆಗಮಿಸಿದ್ದು ಸ್ಕೌಟ್ ಗೈಡ್ನ ಮುಂದಿನ […]Read More

ಕಾರ್ಯಕ್ರಮ ಸ್ಥಳೀಯ

ದೇವಸ್ಥಾನಗಳ ಸುವ್ಯವಸ್ಥಿತ ಕಾರ್ಯನಿರ್ವಹಣೆಗೆ ದೇವಸ್ಥಾನ ಪರಿಷತ್ ಸ್ಥಾಪಿಸಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ

  ಧರ್ಮಸ್ಥಳ: ಈ ದೇಶದಲ್ಲಿ ಅನೇಕ ದೇವಸ್ಥಾನಗಳು ಹಿಂದೂ ಭಕ್ತರ ಕೈಯಲ್ಲಿದೆ. ದೇವಸ್ಥಾನಗಳ ನಿಧಿಯ ಉಪಯೋಗ, ದೇವಸ್ಥಾನದ ಕಾರ್ಯನಿರ್ವಹಣೆ, ದೇವಸ್ಥಾನದ ಪೂಜಾ ಕೈಂಕರ್ಯ ಹಾಗೂ ದೇವಸ್ಥಾನಗಳಿಂದ ಮಾಡಬೇಕಾದ ಧರ್ಮಕಾರ್ಯಗಳ ಬಗ್ಗೆ ರಾಷ್ಟ್ರಾದ್ಯಂತ ದೇವಾಲಯಗಳ ಪರಿಷತ್ ಮಾಡುವ ಉದ್ದೇಶದಿಂದ ದೇವಸ್ಥಾನಗಳ ಮುಖ್ಯಸ್ಥರಿಗಾಗಿ ಶಿಬಿರಗಳ ಆಯೋಜನೆ ಗಳನ್ನು ಮಾಡಲಾಗುತ್ತದೆ. ಈ ನಿಮಿತ್ತ ಇದರ ಚಾಲನೆಯನ್ನು ನೀಡಲು ಮತ್ತು ಮಾರ್ಗದರ್ಶನವನ್ನು ಪಡೆಯಲು ರಾಜ್ಯ ಸಭಾ ಸದಸ್ಯರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾಕ್ಟರ್ . ಡಿ ವೀರೇಂದ್ರ ಹೆಗ್ಗಡೆಯವರನ್ನು ಸನಾತನ ಸಂಸ್ಥೆಯ ವಕ್ತಾರರಾದ […]Read More

ಕಾರ್ಯಕ್ರಮ ಸ್ಥಳೀಯ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓಣಂ ಸಂಭ್ರಮ.

  ಧರ್ಮಸ್ಥಳ: ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓಣಂ ನ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಹೂಗಳ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ನಡೆಸಲಾಗಿತ್ತು. ಸುಮಾರು 25ಕ್ಕೂ ಹೆಚ್ಚು ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬಣ್ಣ ಬಣ್ಣದ ಹೂಗಳ, ಎಲೆಗಳಿಂದ ಹಾಗೂ ಸುಂದರ ದೀಪಗಳಿಂದ ಅಲಂಕೃತವಾಗಿದ್ದ ಹೂವಿನ ರಂಗೋಲಿ ಪೂಕ್ಕಲಂ ಶಾಲೆಯ ಕಾರಿಡಾರಿನ ತುಂಬಾ ಅಲಂಕಾರಗೊಂಡಿತ್ತು. ಅತ್ಯಂತ ಸುಂದರವಾಗಿ ಮೂಡಿ ಬಂದ ಈ ಸ್ಪರ್ಧೆ ಮಕ್ಕಳ ಸೃಜನಶೀಲತೆಗೆ ಹಿಡಿದ ಕೈಗನ್ನಡಿಯಾಗಿತ್ತು. […]Read More

ಧಾರ್ಮಿಕ ಸ್ಥಳೀಯ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಚಿವ ಗೋವಿಂದ ಎಂ ಕಾರಜೋಳ ಭೇಟಿ

  ಧರ್ಮಸ್ಥಳ : ಜಲ ಸಂಪನ್ಮೂಲ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಎಂ. ಕಾರಜೋಳ ಅವರು ಸೆ.1ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ರತ್ನವಮ೯ ಜೈನ್ ಮೊದಲಾದವರು ಉಪಸ್ಥಿತರಿದ್ದರು .Read More

ಕಾರ್ಯಕ್ರಮ ಸ್ಥಳೀಯ

ಸನಾತನ ಪಂಚಾಂಗ – 2023′ ರ (ಕ್ಯಾಲೆಂಡರ್) ಲೋಕಾರ್ಪಣೆಗೊಳಿಸಿದ ಡಾ||ಡಿ ವೀರೇಂದ್ರ ಹೆಗ್ಗಡೆ

  ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಆ .30 ರಂದು ‘ಸನಾತನ ಪಂಚಾಂಗ – 2023 ರ ಲೋಕಾರ್ಪಣೆಯನ್ನು ಮಾಡಿ ಪಂಚಾಂಗದ ರಚನೆಯ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರುು. ಈ ಸಂದರ್ಭದಲ್ಲಿ ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ವೇಳೆ ಉದ್ಯಮಿಗಳು ಹಾಗೂ ಹಿಂದೂ ಜಾಗರಣ ವೇದಿಕೆಯ ಪದ್ಮನಾಭ ಶೆಟ್ಟಿಗಾರ್, ವಕೀಲರಾದ ಉದಯಕುಮಾರ್ ಬಂದಾರು, ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ […]Read More

ಸ್ಥಳೀಯ

ಧರ್ಮಸ್ಥಳದಲ್ಲಿ ನಿರ್ಮಾಣವಾಗಲಿದೆ ಮಿನಿ ವಿಮಾನ ನಿಲ್ದಾಣ: ವಸತಿ ಸಚಿವ ಸೋಮಣ್ಣ

  ಬೆಳ್ತಂಗಡಿ: ಸಾವಿರಾರು ಭಕ್ತರ ಪುಣ್ಯ ಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ಈ ಕುರಿತು ಸಿಎಂ ಹಾಗೂ ಸಂಬಂಧಪಟ್ಟ ಇಲಾಖೆಗಳ ಜೊತೆ ಚರ್ಚಿಸಲಾಗುವುದು ಎಂದು ವಸತಿ ಸಚಿವ ಸೋಮಣ್ಣ ಹೇಳಿದರು. ಅವರು ಬಸವ ವಸತಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆಯ 1640 ಮಂದಿ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣ ಕಾಮಗಾರಿ ಆದೇಶ ಪತ್ರವನ್ನು ಆ.27 ರಂದು ವಿತರಿಸಿ ಮಾತನಾಡಿದರು. ಮಿನಿ ವಿಮಾನ ನಿಲ್ದಾಣ ನಿರ್ಮಿಸಲು 100 ಎಕರೆ ಜಾಗ […]Read More

ಧಾರ್ಮಿಕ ಸ್ಥಳೀಯ

ಶ್ರೀ ರಾಮ ಭಜನಾ ಮಂಡಳಿ ಹುಣ್ಸೆಕಟ್ಟೆ ವತಿಯಿಂದ ಡಾ||ಡಿ ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ

  ಧರ್ಮಸ್ಥಳ : ರಾಜ್ಯ ಸಭೆಗೆ ನಾಮ ನಿರ್ದೇಶನಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ||ಡಿ ವೀರೇಂದ್ರ ಹೆಗ್ಗಡೆಯವರಿಗೆ ಶ್ರೀ ರಾಮ ಭಜನಾ ಮಂಡಳಿ ಹುಣ್ಸೆಕಟ್ಟೆ ವತಿಯಿಂದ ಆ. 14 ರಂದು ಅಭಿನಂದನೆಯನ್ನು ತಿಳಿಸಲಾಯಿತು ಹಾಗೂ ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ಆಚರಿಸಲಾಗುವ 22 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೊತ್ಸವ ದ ಆಮಂತ್ರಣ ಪತ್ರಿಕೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀ ರಾಮ ಭಜನಾ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.Read More

ಕಾರ್ಯಕ್ರಮ ಸ್ಥಳೀಯ

ಹುಣ್ಸೆಕಟ್ಟೆ: ಶ್ರೀ.ಕ್ಷೇ.ಧ.ಗ್ರಾ.ಯೋಜನೆ ,ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವತಿಯಿಂದ ಸ್ವಚ್ಛತಾ ಕಾರ್ಯ

  ಹುಣ್ಸೆಕಟ್ಟೆ: ಶ್ರೀ.ಕ್ಷೇ.ಧ.ಗ್ರಾ.ಯೋಜನೆ ,ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹುಣ್ಸೆಕಟ್ಟೆ ಇದರ ವತಿಯಿಂದ ಆ.6 ರಂದು ಸ.ಕಿ.ಪ್ರಾ.ಶಾಲೆ ಹುಣ್ಸೆಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಹುಣ್ಸೆಕಟ್ಟೆ ಒಕ್ಕೂಟ ಅಧ್ಯಕ್ಷರು ಹಾಗೂ ವಲಯ ಅಧ್ಯಕ್ಷರಾದ ಸೀತಾರಾಮ್ ಆರ್ ಇವರು ಉದ್ಘಾಟಿಸಿ,ಸ್ವಚ್ಚತೆ ಪ್ರತಿಯೊಬ್ಬರ ಆದ್ಯ ಕರ್ತವ್ಯ.ನಮ್ಮ ಜೀವನದಲ್ಲಿ ನಮ್ಮ ದೇಹದ ಸ್ವಚ್ಚತೆ ಎಷ್ಟೂ ಮುಖ್ಯವೋ ಅಷ್ಟೇ ನಮ್ಮ ಪರಿಸರದ ಸ್ವಚ್ಚತೆಯು ಮುಖ್ಯವಾಗಿದೆ. ಸಣ್ಣ ವಯಸ್ಸಿನಲ್ಲಿ ಮಕ್ಕಳಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಬೇಕು ಎಂದೂ ಹೇಳಿ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರು […]Read More

error: Content is protected !!