• July 25, 2024

Tags :Dharmasthala

ಜಿಲ್ಲೆ ಶಾಲಾ ಚಟುವಟಿಕೆ ಸ್ಥಳೀಯ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಶಾಲಾ ಸಂಸತ್ತಿಗಾಗಿ ಚುನಾವಣೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಶಾಲಾ ಸಂಸತ್ತಿಗಾಗಿ ಚುನಾವಣೆ ನಡೆಸಲಾಯಿತು. ಚುನಾವಣೆಯ ವಿವಿಧ ಹಂತಗಳಾದ ನಾಮಪತ್ರ ಸಲ್ಲಿಕೆ ನಾಮಪತ್ರ ಹಿಂಪಡೆಯುವಿಕೆ ನಾಮಪತ್ರ ಪರಿಶೀಲಿಸುವಿಕೆ ಇತ್ಯಾದಿಗಳು ಕ್ರಮ ಪ್ರಕಾರವಾಗಿ ನಡೆದು ಇಂದು ಚುನಾವಣೆಯನ್ನು ನಡೆಸಲಾಯಿತು. ಈ ಬಾರಿಯ ಮತದಾನಕ್ಕಾಗಿ ಇವಿಯಂ ಮತ ಯಂತ್ರ ಬಳಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವ ಹಾಗೂ ಅದರ ವಿವಿಧ ಹಂತಗಳನ್ನು ತಿಳಿಯಲು ಈ ಮೂಲಕ ಸಹಾಯವಾಯಿತು. ಶಾಲಾ ನಾಯಕನಾಗಿ 10ನೇ ತರಗತಿ ಜಸ್ವಿನ್ ಉಪಮುಖ್ಯಮಂತ್ರಿಯಾಗಿ 9ನೇ ತರಗತಿಯ […]Read More

ಕಾರ್ಯಕ್ರಮ ಧಾರ್ಮಿಕ ಸ್ಥಳೀಯ

ಧರ್ಮಸ್ಥಳ: ನ.13 ರಂದು ನಡೆಯುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರಿಕೆ

ಧರ್ಮಸ್ಥಳ: ಪ್ರಗತಿಬಂಧು ಜ್ಞಾನ ವಿಕಾಸಗಳ ಮತ್ತು ಸ್ವ- ಸಹಾಯ ಸಂಘಗಳ ಒಕ್ಕೂಟ ಹುಣ್ಸೆಕಟ್ಟೆ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹುಣ್ಸೆಕಟ್ಟೆ ಹಾಗೂ ಶ್ರೀ ರಾಮ ಭಜನಾ ಮಂಡಳಿ ಹುಣ್ಸೆಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ನ.13 ರಂದು ನಡೆಯುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರಿಕೆಯನ್ನು ನ.2 ರಂದು ಧರ್ಮಾಧಿಕಾರಿಗಳಾದ ಡಾ|ಡಿ ವೀರೇಂದ್ರ ಹೆಗ್ಗಡೆಯವರಿಗೆ ನೀಡಿ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ವಲಯದ ಪ್ರಗತಿಬಂಧು ಜ್ಞಾನವಿಕಾಸಗಳ/ ಸ್ವಸಹಾಯ ಸಙಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ ಆರ್, […]Read More

ಕಾರ್ಯಕ್ರಮ ಜಿಲ್ಲೆ ಶಾಲಾ ಚಟುವಟಿಕೆ ಸ್ಥಳೀಯ

ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಧರ್ಮಸ್ಥಳ: ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ನ.1 ರಂದು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಧರ್ಮಸ್ಥಳ ದೇವಳದ ಮುಖ್ಯ ಲೇಖಾಧಿಕಾರಿಯಾಗಿರುವ ಪುರಂದರ ಭಟ್ ಆಗಮಿಸಿ ವಿದ್ಯಾರ್ಥಿಗಳಿಗೆ ಕರ್ನಾಟಕದ ಏಕೀಕರಣ ಕನ್ನಡ ನಾಡು ನುಡಿಯ ವೈಭವ ಕುರಿತು ವಿಸ್ತಾರವಾಗಿ ವಿವರಿಸಿದರು. ಕನ್ನಡ ಕವಿಗಳ ಸಾಹಿತ್ಯವನ್ನು ಓದುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ನೀಡಿದರು. ತದನಂತರ ವಿದ್ಯಾರ್ಥಿಗಳು ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಹಾಡು ನೃತ್ಯಗಳ ಮುಖಾಂತರ ಅನಾವರಣಗೊಳಿಸಿದರು. ಶಾಲಾ ಮುಖ್ಯ ಉಪಾಧ್ಯಾಯಿನಿ ಪರಿಮಳ […]Read More

ಚುನಾವಣೆ

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ:ಪಕ್ಷ ಬೆಂಬಲಿತ ಅಭ್ಯರ್ಥಿಗಳು ಹಾಗೂ

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯು ಅ.30 ರಂದು ಜರುಗಿತು. ಕಳೆದ ಎರಡು ದಿನಗಳಿಂದ ಚುನಾವಣೆಯ ಸುದೀರ್ಘ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ಬೆಳ್ತಂಗಡಿಯ ಮಾಜಿ ಶಾಸಕರಾದ .ಕೆ.ವಸಂತ ಬಂಗೇರರವರು ಹಾಗೂ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರಾದ ರಂಜನ್ ಜಿ.ಗೌಡರವರು ಪಕ್ಷ ಬೆಂಬಲಿತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಗ್ರಾಮೀಣ ಅಧ್ಯಕ್ಷರಾದ ರಾಯ್ ಪುದುವೆಟ್ಟು,ಗ್ರಾಮೀಣ ಬ್ಲಾಕ್ ಕಾಂಗ್ರೆಸ್ಸಿನ […]Read More

ಧಾರ್ಮಿಕ

ಧರ್ಮಸ್ಥಳ: ಅ.25 ರಂದು ಸೂರ್ಯಗ್ರಹಣ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ

ಧರ್ಮಸ್ಥಳ: ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಅ.25 ರಂದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲವೆಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ. ಸೂರ್ಯಗ್ರಹಣದ ಪ್ರಯುಕ್ತ ಮಧ್ಯಾಹ್ನ 2.30 ರಿಂದ ರಾತ್ರಿ 7.30 ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಅನ್ನಪ್ರಸಾದವು ಮಧ್ಯಾಹ್ನ 2.30 ಕ್ಕೆ ಕೊನೆಗೊಂಡು ರಾತ್ರಿ 7.30 ರ ಬಳಿಕವೆ ನಡೆಯಲಿದೆ. ಅ.25 ರಂದು ಸಂಜೆ 5.11ಕ್ಕೆ ಗ್ರಹಣ ಸ್ವರ್ಶವಾಗಲಿದ್ದು, ಸಂಜೆ 6.28ಕ್ಕೆ ಗ್ರಹಣ ಮೋಕ್ಷವಾಗಲಿದೆ. ಅ. 26 ರಿಂದ ಎಂದಿನಂತೆ ದೇವರ […]Read More

ಕಾರ್ಯಕ್ರಮ ಸ್ಥಳೀಯ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಉಜಿರೆ

ಧರ್ಮಸ್ಥಳ: ಉಜಿರೆ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ದ ಇಪ್ಪತ್ತಾರು, ಇಪ್ಪತ್ತೇಳು ಮತ್ತು ಇಪ್ಪತ್ತೆಂಟನೆಯ ಪದವಿ ಪ್ರದಾನ ಸಮಾರಂಭವು ಧರ್ಮಸ್ಥಳ ಅಮೃತ ವರ್ಷಿಣಿ  ಸಭಾಭವನದಲ್ಲಿ ಅ.8 ರಂದು ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ , ರಾಜ್ಯಸಭಾ ಸಂಸದರು ಪೂಜ್ಯ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು. ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶಿಕ್ಷಣಾಥಿ೯ಗಳಿಗೆ ಪದವಿ ಪ್ರದಾನ ಮಾಡಿದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾ.ಗಾಂ.ಆ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಡಾ|ಎಂ.ಕೆ ರಮೇಶ್, […]Read More

ಜಿಲ್ಲೆ ಸ್ಥಳೀಯ

ಶ್ರಿ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಕೃಪೆಯಿಂದ ಬದುಕುಳಿದ ಜೀವ: ಆತ್ಮಹತ್ಯೆ ಮಾಡಿಕೊಳ್ಳಲು ಬಂದ

ಧರ್ಮಸ್ಥಳ: ವಿವಾಹಿತ ಯುವಕನೊಬ್ಬ ಧರ್ಮಸ್ಥಳದ ಕಾಡಿಗೆ ಬಂದು ಸೆಲ್ಫಿ ವಿಡಿಯೋ ಮಾಡುತ್ತಾ ವಿಷ ಸೇವಿಸಿ ಕೊನೆಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮಹಿಮೆಯಿಂದ ಬದುಕಿ ಉಳಿದು ಇದೀಗ ಆರೋಗ್ಯವಾಗಿ ಮರಳಿ ಮನೆಗೆ ಸೇರುವಂತಾಗಿದೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಮಹಾತ್ಮ ಗಾಂಧಿ ವೃತ್ತದ ಪಕ್ಕದ ಗುಡ್ಡಕ್ಕೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದ ನಿವಾಸಿ ಸುನಿಲ್ ಕೆಎಲ್ ಸೆಪ್ಟೆಂಬರ್ 28ರಂದು ಮಧ್ಯಾಹ್ನ 2 ಗಂಟೆಗೆ ಹೀರೋ ಹೋಂಡಾ ಬೈಕಿನಲ್ಲಿ ಬಂದಿದ್ದಾನೆ. ದೇವರ ದರ್ಶನ ಮುಗಿಸಿ ನೇತ್ರಾವತಿ ಪಕ್ಕದಲ್ಲಿರುವ ಮಹಾತ್ಮ […]Read More

ಕಾರ್ಯಕ್ರಮ ಸ್ಥಳೀಯ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಗಾಂಧಿ ಜಯಂತಿ ಆಚರಣೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಗಾಂಧಿ ಜಯಂತಿ ಆಚರಣೆಯನ್ನು ಅ.2 ರಂದು ಆಚರಿಸಲಾಯಿತು. ಜ್ಯೋತಿ ಬೆಳಗಿಸಿ ಶಾಸ್ತ್ರೀಯ ವರ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮುಖಾಂತರ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ.ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಸರ್ವಧರ್ಮ ಪ್ರಾರ್ಥನೆ ನಡೆಯಿತು.ಶಾಲಾ ಶಿಕ್ಷಕರು ಭಜನೆಯನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯನ್ನು ಹಾಗೂ ಶಾಂತಿ ಸಾಮರಸ್ಯವನ್ನು ಬಿಂಬಿಸುವ ಹಾಡನ್ನು ಹಾಡಿದರು. ಸಹ ಶಿಕ್ಷಕಿಯಾದ ಆಶಾ ಕುಮಾರಿ ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರಿಜಿ […]Read More

ಸ್ಥಳೀಯ

ಬೆಳ್ತಂಗಡಿ: ಬಾವಿಗೆ ಬಿದ್ದ 5 ಅಡಿ ಉದ್ದದ ನಾಗರಹಾವು: ಸತತ 2 ಗಂಟೆಗಳ

ಬೆಳ್ತಂಗಡಿ: ಇಲ್ಲಿಯ ಸುಬ್ರಾಯ ಪ್ರಭು ಎಂಬವರ ಬಾವಿಯಲ್ಲಿ ಸರಿಸುಮಾರು 5 ಅಡಿ ಉದ್ದದ ನಾಗರಹಾವು ಬಿದ್ದಿದ್ದು, ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆದಿದೆ. ಮನೆಮಂದಿ ಬಾವಿಯೊಳಗೆ ಹಾವು ಇರುವುದನ್ನು ಕಂಡು ಧರ್ಮಸ್ಥಳ ಉರಗ ಪ್ರೇಮಿ ಹಾಗೂ ಉರಗ ತಜ್ಞರಾದ ಸ್ನೇಕ್ ಪ್ರಕಾಶ್ ಇವರನ್ನು ಸಂಪರ್ಕಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಉರಗ ತಜ್ಞರು , ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿದ್ದು, ಸತತ ಪ್ರಯತ್ನದಿಂದ ನಾಗರಹಾವನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.Read More

error: Content is protected !!