• January 22, 2025

ಧರ್ಮಸ್ಥಳದಲ್ಲಿ ನಿರ್ಮಾಣವಾಗಲಿದೆ ಮಿನಿ ವಿಮಾನ ನಿಲ್ದಾಣ: ವಸತಿ ಸಚಿವ ಸೋಮಣ್ಣ

 ಧರ್ಮಸ್ಥಳದಲ್ಲಿ ನಿರ್ಮಾಣವಾಗಲಿದೆ ಮಿನಿ ವಿಮಾನ ನಿಲ್ದಾಣ: ವಸತಿ ಸಚಿವ ಸೋಮಣ್ಣ

 

ಬೆಳ್ತಂಗಡಿ: ಸಾವಿರಾರು ಭಕ್ತರ ಪುಣ್ಯ ಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ಈ ಕುರಿತು ಸಿಎಂ ಹಾಗೂ ಸಂಬಂಧಪಟ್ಟ ಇಲಾಖೆಗಳ ಜೊತೆ ಚರ್ಚಿಸಲಾಗುವುದು ಎಂದು ವಸತಿ ಸಚಿವ ಸೋಮಣ್ಣ ಹೇಳಿದರು.

ಅವರು ಬಸವ ವಸತಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆಯ 1640 ಮಂದಿ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣ ಕಾಮಗಾರಿ ಆದೇಶ ಪತ್ರವನ್ನು ಆ.27 ರಂದು ವಿತರಿಸಿ ಮಾತನಾಡಿದರು.

ಮಿನಿ ವಿಮಾನ ನಿಲ್ದಾಣ ನಿರ್ಮಿಸಲು 100 ಎಕರೆ ಜಾಗ ಹೆಲಿಪ್ಯಾಡ್ ಗುರುತಿಸಲು ಮುಂದಿನ ವಾರ ಅಧಿಕಾರಿಗಳಿಗೆ ಸೂಚಿಸಲಾಗುವುದು. 100 ಕೋಟಿ ರೂ ವೆಚ್ಚದ ಈ ಲಘು ಏರ್ ಟ್ ನಲ್ಲಿ ಹೆಲಿಪ್ಯಾಡ್ ನಿರ್ಮಿಸುವ ಯೋಜನೆಯಿದೆ. ಪ್ರಥಮ ಹಂತದಲ್ಲಿ 100 ಕೋಟಿ ರೂ ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸಲಿದೆ . ರಾಜ್ಯಸಭಾ ಸದಸ್ಯರಾದ ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಾಧಿಕಾರಿಗಳಾದ ಡಾ.ಡಿ ವೀರೇಂದ್ರ ಹೆಗ್ಗಡೆ ಮತ್ತು ಶಾಸಕ ಹರೀಶ್ ಪೂಂಜರವರ ಪ್ರಸ್ತಾವಿತ ಯೋಜನೆಯನ್ನು ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ ಎಂದರು.

Related post

Leave a Reply

Your email address will not be published. Required fields are marked *

error: Content is protected !!