• October 13, 2024

Tags :Temple

ಕಾರ್ಯಕ್ರಮ ಧಾರ್ಮಿಕ

ದೇವಸ್ಥಾನ-ಸಂಸ್ಕೃತಿಯ ರಕ್ಷಣೆಗಾಗಿ ಜನವರಿ 26 ರಂದು ದಕ್ಷಿಣ ಕನ್ನಡ ‘ಜಿಲ್ಲಾಮಟ್ಟದ ದೇವಸ್ಥಾನಗಳ ಪರಿಷತ್ತು’

  ಮಂಗಳೂರು – ದೇವಸ್ಥಾನಗಳು ಹಿಂದೂ ಧರ್ಮದ ಅತ್ಯಂತ ಪವಿತ್ರ ಕ್ಷೇತ್ರಗಳು. ದೇವಸ್ಥಾನಗಳಲ್ಲಿನ ದೈವಿಚೈತನ್ಯದಿಂದಾಗಿ ಆಧುನಿಕ ಕಾಲದಲ್ಲಿಯೂ ಸಮಾಜವು ದೇವಸ್ಥಾನಗಳ ಕಡೆಗೆ ಆಕರ್ಷಿತವಾಗುತ್ತಿದೆ. ಆದರೆ ಇತ್ತೀಚೆಗೆದೇವಸ್ಥಾನಗಳ ಮೇಲೆ ವಿವಿಧ ರೀತಿಯ ಆಕ್ರಮಣಗಳು ನಡೆಯುತ್ತಿವೆ. ಉದಾಹರಣೆಗೆ ದೇವಸ್ಥಾನಗಳ ಸರಕಾರಿಕರಣ,ದೈವಸ್ಥಾನಗಳನ್ನು ಅಪವಿತ್ರಗೊಳಿಸುವುದು, ಮೂರ್ತಿಭಂಜನ, ಅನಧಿಕೃತವೆಂದು ದೇವಸ್ಥಾನಗಳನ್ನುಧ್ವಂಸಗೊಳಿಸುವುದು, ದೇವಸ್ಥಾನಗಳ ಜಮೀನುಗಳ ಲೂಟಿ, ದೇವನಿಧಿ ಅಪವ್ಯಯ, ಹೀಗೆ ಮುಂತಾದ ಸಮಸ್ಯೆಗಳುಮುಗಿಲು ಮುಟ್ಟಿದೆ. ಅದಕ್ಕಾಗಿ ದೇವಸ್ಥಾನಗಳಲ್ಲಿನ ದೇವತಾತತ್ತ್ವವನ್ನು ಕಾಪಾಡಲು, ದೇವಸ್ಥಾನಗಳಲ್ಲಿಧರ್ಮಪ್ರಸಾರ ಮಾಡಲು, ದೇವಸ್ಥಾನಗಳಲ್ಲಿ ಭಕ್ತಾಧಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು, ದೇವಸ್ಥಾನಗಳ ಸಂಘಟನೆಮಾಡಲು, ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು […]Read More

ಜಿಲ್ಲೆ ಧಾರ್ಮಿಕ

ಎರಡು ವರ್ಷದೊಳಗೆ ಸರಕಾರೀಕರಣಗೊಂಡ ದೇವಸ್ಥಾನವನ್ನು ಮರಳಿ ಭಕ್ತರಿಗೆ ಒಪ್ಪಿಸಬೇಕು ! – ನ್ಯಾಯವಾದಿ

  ಬೆಂಗಳೂರು : ದೇವಸ್ಥಾನದಲ್ಲಿ ಅವ್ಯವಹಾರ ಅಥವಾ ಜಗಳ ನಡೆದಾಗ ಅಂತಹ ದೇವಸ್ಥಾನವನ್ನು ಸರ್ಕಾರ ಸರ್ಕಾರಿಕರಣಗಳಿಸಬಹುದು ಆದರೆ ಎರಡು ವರ್ಷದೊಳಗೆ ಸಮಸ್ಯೆಗಳನ್ನೆಲ್ಲವನ್ನು ಪರಿಹರಿಸಿ ಆ ದೇವಸ್ಥಾನವನ್ನು ಮರಳಿ ಭಕ್ತರಿಗೆ ಒಪ್ಪಿಸಬೇಕೆಂಬ ಕಾನೂನು ಇದೆಯೆಂದು ನ್ಯಾಯವಾದಿ ಕಿರಣ ಬೆಟ್ಟದಪುರ ಇವರು ಹೇಳಿದರು. ಅವರು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ ೧೬ ಹಾಗೂ ೧೭ ರಂದು ಬೆಂಗಳೂರಿನ ಗಂಗಮ್ಮ ತಿಮ್ಮಯ್ಯ ಕನ್ವೆಂಷನ್ ಸೆಂಟರ್ ನಲ್ಲಿ ದೇವಸ್ಥಾನಗಳ ರಾಜ್ಯ […]Read More

ಜಿಲ್ಲೆ ಧಾರ್ಮಿಕ ಸ್ಥಳೀಯ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಚಲನಚಿತ್ರ ನಟ

  ಧರ್ಮಸ್ಥಳ: ಚಲನಚಿತ್ರ ನಟ ಶಿವರಾಜ್ ಕುಮಾರ್ ಹಾಗೂ ಅವರ ಕುಟುಂಬ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಡಿ.9 ರಂದು ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಹಲವು ದೇವಾಲಯಗಳಿಗೆ ಭೇಟಿ ನೀಡಿ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದರು. ಈ ವೇಳೆ ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿಯರಾದ ನಿರುಪಮ ರಾಜ್ ಕುಮಾರ್, ನಿವೇದಿತ ರಾಜ್ ಕುಮಾರ್ ಜೊತೆಗಿದ್ದರು. ಇವರಿಗೆ ಧರ್ಮಸ್ಥಳದ ಪಾರ್ಶವನಾಥ್ಬ, ಲಕ್ಷ್ಮೀ ನಾರಾಯಣ್ ಸಹಕರಿಸಿದರು.Read More

ಕಾರ್ಯಕ್ರಮ ಜಿಲ್ಲೆ ಸ್ಥಳೀಯ

ಧರ್ಮಸ್ಥಳ ಕ್ಷೇತ್ರದಲ್ಲಿ ಲಕ್ಷದೀಪೋತ್ಸವದ ಸಂಭ್ರಮ: ಸಾಹಿತ್ಯ ಸಮ್ಮೇಳನ

  ಧರ್ಮಸ್ಥಳ: ಲಕ್ಷದೀಪೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಂತಿಮ ದಿನದ ಸಾಹಿತ್ಯ ಸಮ್ಮೇಳನವು ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ಚಲನಚಿತ್ರ ನಿರ್ದೇಶಕ ಡಿ ಶೇಷಾದ್ರಿಯವರು ನೆರವೇರಿಸಿ ಮಾತನಾಡಿ ಯಾವ ವ್ಯಕ್ತಿ ಸರಳವಾದ ಜೀವನ ನಡೆಸುತ್ತಾನೋ ಅವನೇ ಸಾಕ್ಷಾತ್ಕಾರ. ಅಂತಹ ಸಾಕ್ಷಾತ್ಕಾರವನ್ನು ಪೂಜ್ಯ ಖಾವಂದರಲ್ಲಿ ಕಾಣಬಹುದು. ಇತ್ತೀಚೆಗೆ ಸಿನೆಮಾದಲ್ಲೂ ಸಾಹಿತ್ಯ ಕ್ಷೇತ್ರ ಹಿಂದೆ ಉಳಿದಿದೆ. ಮುಂದಿನ ದಿನಗಳಲ್ಲಿ ಧರ್ಮಸ್ಥಳ ಕ್ಷೇತ್ರದಲ್ಲಿಯು ಸಿನಿಮಾ ಕ್ಷೇತ್ರದ ಉಳಿವಿಗಾಗಿ ಚಿತ್ರೋತ್ಸವ ಸಮ್ಮೇಳನ ನಡೆಯಬೇಕು ಎಂದು ಹೇಳಿದರು. ಅಧ್ಯಕ್ಷತೆ […]Read More

ಕ್ರೈಂ ಜಿಲ್ಲೆ ಸ್ಥಳೀಯ

ವಿಟ್ಲ: ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಿಂದ ಕಾಣಿಕೆ ಡಬ್ಬಿ ಎಗರಿಸಿದ ಖದೀಮರು

  ವಿಟ್ಲ: ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ವೀರಕಂಬ ಗ್ರಾಮದ ಕೆಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದಲ್ಲಿ ನ.8ರಂದು ರಾತ್ರಿ ವೇಳೆ ಯಾರೋ ಕಿಡಿಗೇಡಿಗಳು ಕಾಣಿಕೆ ಡಬ್ಬಿ ಕಳವು ಮಾಡಿರುವ ಘಟನೆ ನಡೆದಿದೆ. ಹಲವಾರು ಐತಿಹ್ಯಗಳನ್ನು ಹೊಂದಿರುವ ಈ ಕ್ಷೇತ್ರಕ್ಕೆ ತನ್ನ ಹರಕೆಯನ್ನು ಈಡೇರಿಸಿದರೆ ಇಷ್ಟಾರ್ಥಗಳು ನೆರವೇರುತ್ತದೆ. ಅಪಾರ ಮಹಿಮೆ ಇರುವ ಈ ಸನ್ನಿಧಾನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.  ಕ್ಷೇತ್ರದ ಎದುರು ರಸ್ತೆಯ ಪಕ್ಕದಲ್ಲಿ ಇರುವ ಕಾಣಿಕೆ ಡಬ್ಬಕ್ಕೆ ಮಾರ್ಗದಿಂದ ಸಾಗುವ ಭಕ್ತರು ಕಾಣಿಕೆ ಹಾಕಿ ಹೋಗದೇ ಇರಲಾರರು . […]Read More

ಜಿಲ್ಲೆ ಧಾರ್ಮಿಕ ಸ್ಥಳೀಯ

ಆರಿಕೋಡಿ: ಚಂದ್ರಗ್ರಹಣದ ಪ್ರಯುಕ್ತ ನ.8ರಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಅಭಯದನುಡಿ ಮತ್ತು

  ಆರಿಕೋಡಿ: ನ.8ರಂದು ಚಂದ್ರಗ್ರಹಣ ಪ್ರಯುಕ್ತ  ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಅಭಯದನುಡಿ ಮತ್ತು ಪೂಜೆ ಇರುವುದಿಲ್ಲ. ನ.9 ರಂದು ಎಂದಿನಂತೆ ವಾರದಲ್ಲಿ ಮೂರು ದಿನ( ಭಾನುವಾರ, ಮಂಗಳವಾರ, ಶುಕ್ರವಾರ) ಅಭಯದ ನುಡಿ ಮತ್ತು ದೇವಿಗೆ ವಿಶೇಷ ಪೂಜೆ ನಡೆಯಲಿದೆ ಎಂದು ದೇವಸ್ಥಾನದ  ಧರ್ಮದರ್ಶಿಗಳು ಮತ್ತು ಆಡಳಿತ ಮಂಡಳಿ ತಿಳಿಸಿದ್ದಾರೆ.Read More

ಕ್ರೈಂ ಜಿಲ್ಲೆ ಸಮಸ್ಯೆ ಸ್ಥಳೀಯ

ಧರ್ಮಸ್ಥಳ: ಪಂಜುರ್ಲಿ ದೈವದ ರೀಲ್ಸ್ ಮಾಡಿ ಇನ್ ಸ್ಟಾಗ್ರಾಂ ಗೆ ಪೋಸ್ಟ್ ಮಾಡಿದ

  ಧರ್ಮಸ್ಥಳ: ಹೈದರಾಬಾದ್ ಮೂಲದ ಮೇಕಪ್ ಆರ್ಟಿಸ್ಟ್ ಶ್ವೇತಾ ಎಸ್ ರೆಡ್ಡಿ ಎಂಬಾಕೆ ಕಾಂತಾರ ಚಿತ್ರದ ಪಂಜುರ್ಲಿ ದೈವದ ರೀಲ್ಸ್ ಮಾಡಿ ಇನ್ ಸ್ಟಾಗ್ರಾಂ ನಲ್ಲಿ ಹರಿಬಿಟ್ಟಿದ್ದು, ಈ ಪೋಸ್ಟ್ ಗೆ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ತನ್ನ ತಪ್ಪಿನ ಅರಿವಾಗಿದ್ದ ಯುವತಿ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ತಪ್ಪೊಪ್ಪಿಗೆ ಕಾಣಿಕೆಯನ್ನು ಹಾಕಿದ್ದಾಳೆ. ತುಳುನಾಡಿನ ನಂಬಿಕೆಯ ದೈವ ಪಂಜುರ್ಲಿಯ ರೀಲ್ಸ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಇದೀಗ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿ ತಪ್ಪೊಪ್ಪಿಗೆ ಕಾಣಿಕೆಯನ್ನು ಹಾಕಿ, […]Read More

ಕಾರ್ಯಕ್ರಮ ಜಿಲ್ಲೆ ಧಾರ್ಮಿಕ ಸ್ಥಳೀಯ

ಕಣಿಯೂರು: ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸೀಯಾಲಾಭಿಷೇಕ

  ಕಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ, ಕಣಿಯೂರು – ಪದ್ಮುಂಜ, ಜನಜಾಗೃತಿ ಗ್ರಾಮ ಸಮಿತಿ ಕಣಿಯೂರು ವಿಭಾಗ, ಶ್ರೀ ಮಹಾ ವಿಷ್ಣು ದೇವಸ್ಥಾನ ಕಣಿಯೂರು ಇದರ ಆಶ್ರಯದಲ್ಲಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ, ಗ್ರಾಮ ಸುಭೀಕ್ಷಾ ಕಾರ್ಯಕ್ರಮದಡಿಯಲ್ಲಿ ಸೀಯಾಲಾಭಿಷೇಕ ನ.3 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ, ರೈತ ಬಂಧು ಮಾಲೀಕರಾದ ಶಿವಶಂಕರ್, ಜನ ಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷರಾದ ಪ್ರಫುಲ್ಲಚಂದ್ರ ಅಡ್ಯಂತಾಯ, ವಲಯಾಧ್ಯಕ್ಷರಾದ ರಮಾನಂದ ಪೂಜಾರಿ, […]Read More

ಜಿಲ್ಲೆ ಧಾರ್ಮಿಕ ಸ್ಥಳೀಯ

ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯ ದರುಶನ ಪಡೆದ ನಟ

  ಆರಿಕೋಡಿ:  ತುಳು ರಂಗಭೂಮಿ ಮತ್ತು ಚಲನಚಿತ್ರ ನಟ ಸುಂದರ್ ರೈ ಮಂದಾರ ಅವರು ನ.3ರಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಭೇಟಿ ನೀಡಿ ವಿಶೇಷವಾಗಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಅವರು ಗೌರವಿಸಿ ಶುಭ ಹಾರೈಸಿದರು.Read More

ಕಾರ್ಯಕ್ರಮ ಧಾರ್ಮಿಕ

ಮೊಗ್ರು: ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಗ್ರಾಮ ಸುಭೀಕ್ಷಾ ಕಾರ್ಯಕ್ರಮದಡಿಯಲ್ಲಿ ಸೀಯಾಳ ಅಭಿಷೇಕ

   ಮೊಗ್ರು:  ಪ್ರಗತಿ ಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ ಮೊಗ್ರು – ಕಾಯರ್ಪಾಡಿ ವಿಭಾಗ, ಜನ ಜಾಗೃತಿ ಗ್ರಾಮ ಸಮಿತಿ ಮೊಗ್ರು, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಆಡಳಿತ ಸಮಿತಿ ಇದರ ವತಿಯಿಂದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಗ್ರಾಮ ಸುಭೀಕ್ಷಾ ಕಾರ್ಯಕ್ರಮದಡಿಯಲ್ಲಿ ಸೀಯಾಳ ಅಭಿಷೇಕ ಮತ್ತು ಭಜನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಗತಿ ಬಂಧು ಸ್ವ ಸಹಾಯ ಸಂಘದ ಸದಸ್ಯರು, ದೇವಸ್ಥಾನ ಆಡಳಿತ ಸಮಿತಿ ಸದಸ್ಯರು, ಒಕ್ಕೂಟ ಅಧ್ಯಕ್ಷ ರಾದ ಸಂಕಪ್ಪ ಗೌಡ, […]Read More

error: Content is protected !!