• October 14, 2024

Tags :Arikodi

ಧಾರ್ಮಿಕ ಸ್ಥಳೀಯ

ಮಕ್ಕಳ ಭಾಗ್ಯವೇ ಇಲ್ಲದ ದಂಪತಿಗಳ ಬಾಳಲ್ಲಿ ಮದುವೆಯಾಗಿ 6 ವರ್ಷಗಳ ಬಳಿಕ ಅವಳಿ

  ಸುಳ್ಯ ತಾಲೂಕಿನ ಗುಂಡಿಯ ಮನೆ ಪ್ರವೀಣ್ ಮತ್ತು ಧನ್ಯಶ್ರೀ ಎಂಬುವವರು ಸುಮಾರು 6 ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರಲಿಲ್ಲ. ಆ ಸಂದರ್ಭದಲ್ಲಿ ಪವಿತ್ರ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಯಲ್ಲಿ ಬಂದು ದೇವಿ ಚಾಮುಂಡೇಶ್ವರಿ ಅಮ್ಮನವರ ಅಭಯದ ನುಡಿಯಲ್ಲಿ ವಿಚಾರಣೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ, ನಿಮ್ಮ ದಾಂಪತ್ಯ ಜೀವನದಲ್ಲಿ ಒಂದು ವರ್ಷಗಳ ಒಳಗಡೆ ಮಕ್ಕಳ ಭಾಗ್ಯ ಒದಗಿ ಬರುತ್ತದೆ ಎಂದು ಶ್ರೀದೇವಿ […]Read More

ಜಿಲ್ಲೆ ಧಾರ್ಮಿಕ ಸ್ಥಳೀಯ

ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ

  ಆರಿಕೋಡಿ: ಬೆಳ್ತಂಗಡಿ ತಾಲೂಕಿನ ಸುಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಬೆಳಾಲು ಗ್ರಾಮದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನಕ್ಕೆ ಇಂದು ಯಕ್ಷಗಾನದ ಹಾಸ್ಯ ಕಲಾವಿದ ದಿನೇಶ್ ಕೊಡಪದವು ಭೇಟಿ ನೀಡಿ ದೇವಿಯ ದರ್ಶನ ಪಡೆದು ಧರ್ಮದರ್ಶಿಗಳಿಂದ ಆಶೀರ್ವಾದ ಪಡೆದರುRead More

ಧಾರ್ಮಿಕ ಸಿನಿಮಾ ಸ್ಥಳೀಯ

ಜೋಡು ಜೀಟಿಗೆ ” ಎಂಬ ನಾಟಕದ ಪೋಸ್ಟರ್ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಸನ್ನಿಧಾನದಲ್ಲಿ

  ಆರಿಕೋಡಿ: ಶ್ರೀ ಶಿರಡಿ ಸಾಯಿಬಾಬಾ ಮಂದಿರ ಅಶ್ರಿತ ಸಾಯಿ ಶಕ್ತಿ ಕಲಾಬಳಗ ಉರ್ವ ಚಿಲಿಂಬಿ ಮಂಗಳೂರು ಇವರ ಈ ವರ್ಷದ ಸೂಪರ್ ಹಿಟ್ ನಾಟಕ “ಜೋಡು ಜೀಟಿಗೆ “ ಎಂಬ ನಾಟಕದ ಪೋಸ್ಟರನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿ ಅವರು ಬಿಡುಗಡೆಗೊಳಿಸಿದರು. ನಂತರ ತಂಡಕ್ಕೆ ಶುಭ ಹಾರೈಸಿದರು.Read More

ಜಿಲ್ಲೆ ಧಾರ್ಮಿಕ ಸಿನಿಮಾ ಸ್ಥಳೀಯ

ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ

  ತುಳು ರಂಗಭೂಮಿ ಮತ್ತು ಕನ್ನಡ ಚಲನಚಿತ್ರ ನಟ, ನಿರ್ಮಾಪಕ ಡಾ.ದೇವದಾಸ್ ಕಾಪಿಕಾಡ್ ಅವರು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಾನಕ್ಕೆ ಭೇಟಿ ನೀಡಿದರು. ಈ ವೇಳೆ ದೇವಿಯ ದರ್ಶನ ಪಡೆದು ಅಲ್ಲಿಯ ಧರ್ಮದರ್ಶಿಗಳಿಂದ ಆಶೀರ್ವಾದ ಪಡೆದರುRead More

ಧಾರ್ಮಿಕ

ಮಕ್ಕಳ ಭಾಗ್ಯವಿಲ್ಲದೆ ಕೊರಗಿದ ದಂಪತಿಗಳ ಮಡಿಲಿಗೆ ಕಂದಮ್ಮನನ್ನು ಕರುಣಿಸಿದ ಆರಿಕೋಡಿ ಶ್ರೀ ಚಾಮುಂಡೇಶ್ವರಿ

  ಕಾರ್ಕಳ ತಾಲೂಕಿನ ಕೇರ್ವಸೆ ಪರಿಸರದ ಸುರೇಶ್ ಮತ್ತು ಗೀತಾ ಎಂಬುವವರು ಸುಮಾರು 6 ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರಲಿಲ್ಲ. ಎಲ್ಲಾ ಪ್ರಯತ್ನ ಮಾಡಿದರೂ ಜಯ ಸಿಗಲಿಲ್ಲ. ಆ ಸಮಯದಲ್ಲಿ ಪವಿತ್ರ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು, ದೇವಿ ಚಾಮುಂಡೇಶ್ವರಿ ಅಮ್ಮನವರ “ಅಭಯ ನುಡಿ “ಯಲ್ಲಿ ವಿಚಾರಣೆ ಮಾಡಿದ್ದಾರೆ. ಆ ಸಮಯದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ ನಿಮ್ಮ ದಾಂಪತ್ಯ ಜೀವನದಲ್ಲಿ ಒಂದು ವರ್ಷದ ಒಳಗಡೆ ಮಕ್ಕಳ […]Read More

ಧಾರ್ಮಿಕ

ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿಯ ಕಾರ್ಣಿಕಜಲದ ಸಮಸ್ಯೆ ನಿವಾರಣೆ

  ಮಂಗಳೂರು ತಾಲೂಕಿನ ಮಜಿ ಬೋಳಿಯಾರು ಪರಿಸರದ ಶ್ರೀ ಜಗದೀಶ್ ಮತ್ತು ಶ್ರೀಮತಿ ರಜನಿ ಪೂಜಾರಿ ಎಂಬುವವರ ಭೂಮಿಯಲ್ಲಿ ಜಲದ ಸಮಸ್ಯೆ ಕಂಡು ಬಂದಾಗ, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ದೇವಿ ಚಾಮುಂಡೇಶ್ವರಿ ಅಮ್ಮನವರ “ಆಭಯ ನುಡಿಯಲ್ಲಿ ” ವಿಚಾರಣೆ ಮಾಡಿ ತೆಗೆದಿರುವ ಬೋರಿನಲ್ಲಿ ಸಿಕ್ಕಿರುವ ಜಲ ಇದಾಗಿದೆ. ಪವಾಡಗಳ ಮೇಲೆ ಪವಾಡ ಗಳು ಈ ಕ್ಷೇತ್ರದಲ್ಲಿ ನಡೆಯುತ್ತಲೇ ಇರುತ್ತದೆRead More

ಧಾರ್ಮಿಕ ಸಿನಿಮಾ ಸ್ಥಳೀಯ

ಚಲನಚಿತ್ರ ನಟ ಶರಣ್ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಾನಕ್ಕೆ ಭೇಟಿ

  ಕನ್ನಡ ಸಿನಿಮಾ ರಂಗದ ಖ್ಯಾತ ಹಾಸ್ಯ ನಟರಾದ ಶರಣ್ ಅವರು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು ದೇವಿ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಧರ್ಮದರ್ಶಿಯವರ ಆಶೀರ್ವಾದ ಪಡೆದರುRead More

ಧಾರ್ಮಿಕ

ಆರಿಕೋಡಿ ಶ್ರೀ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಭೇಟಿ

  ಆರಿಕೋಡಿ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು ಮಾ.24 ರಂದು ಪ್ರಸಿದ್ಧ ಕ್ಷೇತ್ರವಾದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು. ಈ ವೇಳೆ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖ ಕಾರ್ಯಕರ್ತರು ಅವರೊಂದಿಗಿದ್ದರುRead More

ಧಾರ್ಮಿಕ

ಕೊಟ್ಟ ಮಾತಿಗೆ ತಪ್ಪದೆ ಭಕ್ತರನ್ನು ಪೊರೆಯುವ ಮಹಾಶಕ್ತಿ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿ:

  ಆರಿಕೋಡಿ: ಕೊಟ್ಟ ಮಾತಿಗೆ ತಪ್ಪದೆ ಭಕ್ತರನ್ನು ಪೊರೆಯುವ ಮಹಾಶಕ್ತಿಯಾಗಿ ಆರಿಕೋಡಿ ಸನ್ನಿಧಾನದಲ್ಲಿ ನೆಲೆಯಾಗಿ ಶಕ್ತಿ ಪೀಠದಲ್ಲಿ ಕುಳಿತಿರುವ ಶ್ರೀ ಚಾಮುಂಡೇಶ್ವರಿ ತಾಯಿಯ ಕಾರ್ಣಿಕ ಪವಾಡವೇ ಅಂತಹುದು. ಏನೇ ಕಷ್ಟವಾಗಲಿ ಆ ಕಷ್ಟದಲ್ಲಿ ಇಷ್ಟಾರ್ಥ ವನ್ನು ಸಿದ್ದಿಸುತ್ತಾಳೆ ಚಾಮುಂಡೇಶ್ವರಿ ತಾಯಿ. ತಮಗೆ ಮದುವೆಯಾಗಿ 7 ವರ್ಷಗಳಾದರೂ ಮಕ್ಕಳ ಭಾಗ್ಯವಿಲ್ಲ ಎಂದು ನೊಂದ ಬಂದ ದಂಪತಿಗಳಿಗೆ ನೆರಳಾಗಿದ್ದು ಚಾಮುಂಡೇಶ್ವರಿ ತಾಯಿಯ ಅಭಯದ ನುಡಿ. ಅದೆಷ್ಟೋ ಜನರ ಬಾಳಿಗೆ ಬೆಳಕಾದ ಅಭಯದ ನುಡಿ ಇಲ್ಲಿರುವ ದಂಪತಿಗಳ ಮೊಗದಲ್ಲೂ ಮಂದಹಾಸ ಬೀರಿದೆ. […]Read More

ಧಾರ್ಮಿಕ

ಶ್ರೀ ಆರಿಕೋಡಿ ಕ್ಷೇತ್ರದಿಂದ ಕೊಲ್ಪಾಡಿ ಶಾಲೆಗೆ ಪ್ರಿಂಟರ್ ಕೊಡುಗೆ

  ಬೆಳಾಲು: ಇಲ್ಲಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಲ್ಪಾಡಿ ಇಲ್ಲಿಗೆ,ಶಾಲಾ ಕಚೇರಿಯ ಕೆಲಸಗಳಿಗೆ ಮತ್ತು ವಿದ್ಯಾರ್ಥಿಗಳ ಅನುಕೂಲವಾಗುವಂತೆ ಪ್ರಿಂಟರ್ ಖರೀದಿಸಲು ಧನಸಹಾಯವನ್ನು ನೀಡಲಾಯಿತು. ಶುಕ್ರವಾರದ ಪೂಜಾ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಮೋಕ್ತೆಸರರಾದ ಶ್ರೀ ಡೊಂಬಯ್ಯಗೌಡರು ಚೆಕ್ ಮೂಲಕ ಶಾಲೆಗೆ ಧನಸಹಾಯ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಹರೀಶ್ ಗೌಡ ಆರಿಕೋಡಿ,ಅಧ್ಯಕ್ಷರಾದ ಶ್ರೀ ವಸಂತಗೌಡ ಉಪಸ್ಥಿತರಿದ್ದರು.ಶಾಲಾ ಪರವಾಗಿ ಮುಖ್ಯೋಪಾಧ್ಯಾಯರಾದ ಸುರೇಶ್ ಮಾಚಾರ್,ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಮಾಧವ […]Read More

error: Content is protected !!