• July 25, 2024
ಆಯ್ಕೆ ಕಾರ್ಯಕ್ರಮ ಸ್ಥಳೀಯ

ಉಜಿರೆ ವಲಯದ ಸೂರ್ಯ ಬಜಾಜ್ ಪಾರ್ಕಿಂಗ್ ತುರ್ತು ಸಭೆ: ನೂತನ ಪದಾಧಿಕಾರಿಗಳ ಆಯ್ಕೆ

ಉಜಿರೆ ವಲಯದ ಸೂರ್ಯ ಬಜಾಜ್ ಪಾರ್ಕಿಂಗ್ ತುರ್ತು ಸಭೆಯು ಉಜಿರೆ ಶಾರದ ಮಂಟಪದಲ್ಲಿ ಜುಲೈ 24 ರಂದು ನಡೆಯಿತು. ಉಜಿರೆ ವಲಯದ ಅಧ್ಯಕ್ಷರದ ಉಮೇಶ್ ಪೂಜಾರಿ ಅತ್ತಾಜೆ ಹಾಗೂ ಉಪಾಧ್ಯಕ್ಷರಾದ ಸುಧಾಕರ್ ಗೌಡ ಉಜಿರೆ ಇವರ ಉಪಸ್ಥಿತಿಯಲ್ಲಿ ಸೂರ್ಯಪಾರ್ಕಿಂಗ್ನ ಅಧ್ಯಕ್ಷರಾಗಿ ನಾಗರಾಜ್ ಹಾಗೂ ಉಪಾಧ್ಯಕ್ಷರಾಗಿ ಚೇತನ್ ಅತ್ತಾಜೆ ಕಾರ್ಯದರ್ಶಿಯಾಗಿ ಅವಿನಾಶ್ ಸೂರ್ಯ ಇವರನ್ನು ಆಯ್ಕೆ ಮಾಡಲಾಯಿತು. ಹಾಗೂ ಪಾರ್ಕಿಂಗ್ ಎಲ್ಲ ಆಟೋ ಚಾಲಕ ಮಾಲಕರು ಉಪಸ್ಥಿತರಿದ್ದರು.Read More

ಕಾರ್ಯಕ್ರಮ ಶಾಲಾ ಚಟುವಟಿಕೆ ಸ್ಥಳೀಯ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಹಳೆ ವಿದ್ಯಾರ್ಥಿನಿಗೆ ಅಭಿನಂದನ ಕಾರ್ಯಕ್ರಮ

ಉಜಿರೆ : ಜು24 ರಂದು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಇಲ್ಲಿ 2024 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಬಿ.ಇ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಒಂಬತ್ತನೇ ರಾಂಕ್ ಪಡೆದಿರುವಶಾಲೆಯ ಹಳೆ ವಿದ್ಯಾರ್ಥಿನಿ ಕು.ಪ್ರತೀಕ್ಷಾ ಇವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಮನ್ಮೋಹನ್ ನಾಯ್ಕ್ ಕೆ.ಜಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಶಾಂಟಿ ಜಾರ್ಜ್ ಕಾರ್ಯಕ್ರಮ ನಿರೂಪಿಸಿದರು.Read More

ಆಯ್ಕೆ ಕಾರ್ಯಕ್ರಮ ಸ್ಥಳೀಯ

ದೂರದರ್ಶನದ “ಬಿ” ಗ್ರೇಡ್ ಕಲಾವಿದೆಯಾಗಿ ಮೂಡುಬಿದಿರೆಯ ಅನನ್ಯ ರಂಜನಿ ಆಯ್ಕೆ

ಮೂಡುಬಿದಿರೆ: -ದೂರದರ್ಶನ “ಬಿ” ಗ್ರೇಡ್ ಕಲಾವಿದೆಯಾಗಿಮೂಡುಬಿದಿರೆಯ ಶ್ರೀ ಮಹಾವೀರ ಹಾಗೂ ಶ್ರೀಮತಿ ಆರತಿ ರವರ ಪುತ್ರಿ ಉದಯೋನ್ಮುಖ ಭರತನಾಟ್ಯ ಕಲಾವಿದೆ ಕು. ಅನನ್ಯ ರಂಜನಿ ಆಯ್ಕೆ ಯಾಗಿದ್ದಾರೆ. ಈಕೆ ಸಪ್ತವರ್ಣದ ರಶ್ಮಿತ ಲಾಸ್ಯ ಹಾಗೂ ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್ , ವಿದುಷಿ ಶ್ರೀಲತಾ ನಾಗರಾಜ್ ಇವರ ಶಿಷ್ಯೆಯಾಗಿ, ಭರತನಾಟ್ಯದಲ್ಲಿ ಸೀನಿಯರ್ ಗ್ರೇಡ್ ಪಡೆದಿದ್ದಾರೆ. ಅನನ್ಯ ರಂಜನಿ ಪ್ರಸ್ತುತ ವಿದ್ವತ್ ಪೂರ್ವಪರೀಕ್ಷೆಯ ತಯಾರಿ ಮಾಡುತ್ತಿದ್ದು,ಉಜಿರೆಯ ಎಸ್. ಡಿ ಎಂ. ಕಾಲೇಜಿನಲ್ಲಿ ಅಂತಿಮ ವಿಜ್ಞಾನ ಪದವಿಯಲ್ಲಿ ವ್ಯಾಸಂಗ […]Read More

ಕಾರ್ಯಕ್ರಮ

ಉಜಿರೆಯಲ್ಲಿ ಮತ್ತು ದೇಶದ 70 ಕ್ಕೂ ಹೆಚ್ಚು ಸ್ಥಳಗಳಲ್ಲಿ ಭಾವಪೂರ್ಣ ವಾತಾವರಣದಲ್ಲಿ ಗುರುಪೂರ್ಣಿಮಾ

ಉಜಿರೆ : ಭಾರತದಲ್ಲಿ ಅನಾದಿಕಾಲದಿಂದಲೂ ಗುರುಶಿಷ್ಯ ಪರಂಪರೆ ನಡೆದು ಬಂದಿದೆ; ಈ ಪರಂಪರೆಯಿಂದಲೇ ನಮ್ಮ ರಾಷ್ಟ್ರವು ಇಂದಿಗೂ ವೈಭವಸಂಪನ್ನವಾಗಿದೆ. ಈ ಪರಂಪರೆಯು ಸಮಾಜಕ್ಕೆ ಅಧ್ಯಾತ್ಮದ ಜ್ಞಾನವನ್ನು ನೀಡುವುದರೊಂದಿಗೆ ಸುಸಂಸ್ಕೃತ ಆಚರಣೆಗಳನ್ನೂ ಕಲಿಸಿದೆ. ನಮ್ಮ ಆಚಾರ, ವಿಚಾರ, ಉಡುಪು, ವರ್ತನೆ ಇವೆಲ್ಲವೂ ಸುಸಂಸ್ಕೃತವಾಗಿರಲು ನಾವು ಪ್ರಯತ್ನಿಸಬೇಕಿದೆ. ಪ್ರಭು ಶ್ರೀರಾಮಚಂದ್ರ ಕೂಡ ತಮ್ಮ ಗುರುಗಳ ಆಶೀರ್ವಾದ ಪಡೆದು ಆದರ್ಶ ರಾಮರಾಜ್ಯದ ಸ್ಥಾಪನೆಯನ್ನು ಮಾಡಿದ್ದರು. ಈಗ ನಾವೂ ಇಂತಹ ಆದರ್ಶ ರಾಜ್ಯದ ಸ್ಥಾಪನೆಗಾಗಿ ಸುಸಂಸ್ಕೃತ ಆಚರಣೆಗಳೊಂದಿಗೆ ಪ್ರತಿದಿನ ಪ್ರಭು ಶ್ರೀರಾಮನಿಗೆ ಪ್ರಾರ್ಥನೆಯನ್ನು […]Read More

ಆಯ್ಕೆ ಸ್ಥಳೀಯ

ಸಾಹಿತ್ಯ ಕಿರಣ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಪಾಲ್ತಿಲದ ಸುರೇಶ್ ಕುಮಾರ್ ಜಿ

ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಪಾಲ್ತಿಲದ ಸುರೇಶ್ ಕುಮಾರ್ ಜಿ ಇವರು ಸಾಹಿತ್ಯ ಕಿರಣ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಗಾಯನ, ಸಾಹಿತ್ಯ, ಭಜನೆ, ಪುಸ್ತಕ ಓದುವುದು ಹೀಗೆ ಹಲವಾರು ಆಸಕ್ತಿಯಿರುವ ಇವರು ಸಂಗೀತ ಕಾರ್ಯಕ್ರಮಗಳಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.ಹಲವಾರು ಪ್ರಶಸ್ತಿಗಳು, ಮುಡಿಗೇರಿಸಿಕೊಂಡಿದ್ದು, ಇವರ ಕಲಾ ಸೇವೆಯನ್ನು ಪರಿಗಣಿಸಿ ಇವರಿಗೆ ಆರ್ ಪಿ ಕಲಾ ಸೇವಾ ಟ್ರಸ್ಟ್ ವತಿಯಿಂದ ಸಾಹಿತ್ಯ ಕಿರಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.Read More

ಪ್ರತಿಭಟನೆ ರಾಜಕೀಯ ಸ್ಥಳೀಯ

ಶಾಲೆಗಳಲ್ಲಿ ಹಿಂದೂ ಹಬ್ಬಗಳ ಆಚರಣೆಗೆ ರಾಜ್ಯ ಸರ್ಕಾರ ನಿರ್ಭಂಧ ಖಂಡಿಸಿ ಭಾರತೀಯ ಜನತಾ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಶಾಲೆಗಳ ಮೈದಾನಗಳಲ್ಲಿ ಅನೇಕ ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕವಾಗಿ ನಡೆಯುತ್ತ ಬಂದಿರುವ ಗಣೇಶೋತ್ಸವ, ಶಾರದೋತ್ಸವ, ಮೊಸರು ಕುಡಿಕೆ ಸಹಿತ ಹಿಂದೂ ಹಬ್ಬಗಳ ಆಚರಣೆಯನ್ನು ನಿರ್ಭಂಧಿಸುವ ಆದೇಶವನ್ನು ಹೊರಡಿಸಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಬೆಳ್ತಂಗಡಿ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಜುಲೈ 22 ರಂದು ಬೃಹತ್ ಪ್ರತಿಭಟನೆ ನಡೆಯಲಿದ್ದು, ಅತ್ಯಧಿಕ ಸಂಖ್ಯೆಯಲ್ಲಿ ಸೇರಿ ಭಜನೆಯ ಮೂಲಕ ಪ್ರತಿಭಟನಾ ಕಾರ್ಯಕ್ರಮವು ನಡೆಯಲಿರುವುದಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆRead More

ಕಾರ್ಯಕ್ರಮ ರಾಜಕೀಯ

ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲದ ಕಾರ್ಯಕಾರಣಿ ಸಭೆ

ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲದ ಕಾರ್ಯಕಾರಣಿ ಸಭೆ ಜುಲೈ 21 ಬೆಳ್ತಂಗಡಿ ಬಿಜೆಪಿ ಪಕ್ಷದ ಕಛೇರಿಯಲ್ಲಿ ನಡೆಯಿತು. ಮುಂದಿನ ಪಕ್ಷ ಕಾರ್ಯಚಟುವಟಿಕೆ, ಕಾರ್ಯಯೋಜನೆ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಮಂಡಲ ಯುವಮೋರ್ಚಾ ಮಂಡಲ ಅಧ್ಯಕ್ಷ ರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಮಂಡಲ ಯುವಮೋರ್ಚಾ ಪ್ರಭಾರಿ ಪ್ರಶಾಂತ್ ಪಾರೆಂಕಿ, ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಗಳಾದ ವಿನೀತ್ ಸಾವ್ಯ, ಜಯಪ್ರಸಾದ್ ಕಡಮ್ಮಾಜೆ, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಪ್ರಮೋದ್ ದಿಡುಪೆ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಹೇಮಂತ್ ಶೆಟ್ಟಿ, ಹಾಗೂ ಮಂಡಲ ಪದಾಧಿಕಾರಿಗಳು, […]Read More

ಆಯ್ಕೆ ರಾಜಕೀಯ ಸ್ಥಳೀಯ

ಉಜಿರೆ ಮಹಾ ಶಕ್ತಿ ಕೇಂದ್ರದ ಯುವಮೋರ್ಚಾ ನೂತನಸಂಚಾಲಕರಾಗಿಕಿರಣ್ ಒಳಸರಿ ಚಾರ್ಮಾಡಿ

ಉಜಿರೆ ಮಹಾ ಶಕ್ತಿ ಕೇಂದ್ರದ ಯುವಮೋರ್ಚಾ ನೂತನಸಂಚಾಲಕರಾಗಿ ಕಿರಣ್ ಒಳಸರಿ ಚಾರ್ಮಾಡಿ,ಸಹಸಂಚಾಲಕರಾಗಿ ದಿನೇಶ್ ಕುಂಜರ್ಪ, ಸದಸ್ಯರುಗಳಾಗಿ ಭರತ್ ಪುದುವೆಟ್ಟು,ನರೇಂದ್ರ ನೆರಿಯ,ಲೋಕೇಶ್ ಶೆಟ್ಟಿ ಕಕ್ಕಿಂಜೆ ಇವರು ನೇಮಕಗೊoಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.Read More

ಆಯ್ಕೆ ರಾಜಕೀಯ ಸ್ಥಳೀಯ

ಲಾಯಿಲ ಮಹಾಶಕ್ತಿ ಕೇಂದ್ರದ ಬಿಜೆಪಿ ಯುವ ಮೋರ್ಚಾದ ನೂತನ ಸಂಚಾಲಕರಾಗಿ ಮೇಘರಾಜ್ ಪುತ್ರಬೈಲ್

ಲಾಯಿಲ ಮಹಾಶಕ್ತಿ ಕೇಂದ್ರದ ಬಿಜೆಪಿ ಯುವ ಮೋರ್ಚಾದ ನೂತನ ಆಯ್ಕೆ ಪ್ರಕ್ರಿಯೆಯು ನಡೆದಿದ್ದು, ನೂತನ ಸಂಚಾಲಕರಾಗಿ ಮೇಘರಾಜ್ ಪುತ್ರಬೈಲ್ ನೇಮಕಗೊಂಡಿದ್ದು, ಸಹ ಸಂಚಾಲಕರಾಗಿ ರಂಜಿತ್ ಶೆಟ್ಟಿ ಕಿಲ್ಲೂರು, ಸದಸ್ಯರುಗಳಾಗಿ ತೀರ್ಥಪ್ರಸಾದ ದಿಡುಪೆ ,ಶೈಲೇಶ್ ಗೌಡ ಮನ್ನಡ್ಕ ಇಂದಬೆಟ್ಟು,ಜಯಂತ್ ಓಡಿಕಾರ್ ನಾವೂರುಇವರು ನೇಮಕಗೊಂಡಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆRead More

ಕಾರ್ಯಕ್ರಮ ಜಿಲ್ಲೆ ಧಾರ್ಮಿಕ ಸ್ಥಳೀಯ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಚೆಂಡಿನಗದ್ದೆಯಲ್ಲಿ ಸುಮಾರು 2.50 ಎಕರೆ ಗದ್ದೆಯಲ್ಲಿ 5

ಬಂಟ್ವಾಳ ಕೃಷಿ ಇಲಾಖೆ ವತಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಮುತುವರ್ಜಿಯಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಚೆಂಡಿನಗದ್ದೆಯಲ್ಲಿ ಸುಮಾರು 2.50 ಎಕರೆ ಗದ್ದೆಯಲ್ಲಿ 5 ನೇ ವರ್ಷದ ಭದ್ರತಳಿಯಯಾಂತ್ರೀಕೃತ ಭತ್ತ ನಾಟಿಗೆ ಶಾಸಕ ರಾಜೇಶ್ ಯಂತ್ರದ ಮೂಲಕ ನೇಜಿ ನೆಟ್ಟು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೃಷಿ ಇಲಾಖೆ ಹಾಗೂ ಊರಿನವರ ಸಹಕಾರದಿಂದ ಭತ್ತದ ಕೃಷಿ ನಾಟಿಯನ್ನು ಮಾಡಲಾಗಿದೆ. ಕಳೆದ ಬಾರಿ ಮಾಡಿದ ಕೃಷಿಯ ಮೂಲಕ 95 ಸಾವಿರದಷ್ಟು ದೇವಸ್ಥಾನಕ್ಕೆ […]Read More

error: Content is protected !!