• December 6, 2024

Tags :Mundaje

ಶಾಲಾ ಚಟುವಟಿಕೆ

ಮುಂಡಾಜೆ ವಿವೇಕಾನಂದ ಪ್ರೌಢಶಾಲೆಯ ಬಾಲಕಿಯರ ವಾಲಿಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

  ಮುಂಡಾಜೆ ವಿವೇಕಾನಂದ ಪ್ರೌಢಶಾಲೆಯ 17 ರ ವಯೋಮಾನದ ಬಾಲಕಿಯರ ವಾಲಿಬಾಲ್ ತಂಡ ಸತತವಾಗಿ 14 ವರ್ಷಗಳಿಂದ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆ ಮುಂಡಾಜೆ :ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ ಮಂಗಳೂರು ಇದರ ಆಶ್ರಯದಲ್ಲಿ ಮೂಡಬಿದ್ರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ 17 ರ ವಯೋಮಾನದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿದ ವಿವೇಕಾನಂದ ಶಿಕ್ಷಣ ಸಂಸ್ಥೆ ಮುಂಡಾಜೆಯ ಪ್ರೌಢಶಾಲಾ ಬಾಲಕಿಯರ ತಂಡ […]Read More

ಕ್ರೀಡೆ ಶಾಲಾ ಚಟುವಟಿಕೆ ಸ್ಥಳೀಯ

ಮುಂಡಾಜೆ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾಭಾರತಿ ಕ್ಷೇತ್ರ ಮಟ್ಟದ ವಾಲಿಬಾಲ್ ವಿಜೇತರಾಗಿ

  ಮುಂಡಾಜೆ :ಆಂಧ್ರಪ್ರದೇಶದ ವಿಜಯವಾಡದ ವಿಜ್ಞಾನ ವಿಹಾರ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ವಿದ್ಯಾಭಾರತಿ ಕ್ಷೇತ್ರ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯದಿಂದ ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆ ಮುಂಡಾಜೆಯ ಕನ್ನಡ ಮಾಧ್ಯಮ ಪ್ರೌಢಶಾಲೆಯ 17 ರ ವಯೋಮಾನದ ಬಾಲಕಿಯರ ವಿಭಾಗದ ತಂಡ ಪ್ರತಿನಿಧಿಸಿ ಪ್ರಥಮಸ್ಥಾನ ಪಡೆದು ಪುತ್ತೂರಿನ ತೆಂಕಿಲದ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುವ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ.Read More

ಶಾಲಾ ಚಟುವಟಿಕೆ ಸ್ಥಳೀಯ

ಮುಂಡಾಜೆ ವಿವೇಕಾನಂದ ಪದವಿ ಪೂರ್ವ ಕಾಲೇಜು ಬಾಲಕಿಯರ ವಿದ್ಯಾಭಾರತಿ ಕ್ಷೇತ್ರ ಮಟ್ಟದ ವಾಲಿಬಾಲ್

  ಮುಂಡಾಜೆ :ಆಂಧ್ರಪ್ರದೇಶದ ವಿಜಯವಾಡದ ವಿಜ್ಞಾನ ವಿಹಾರ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ವಿದ್ಯಾಭಾರತಿ ಕ್ಷೇತ್ರ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯದಿಂದ ವಿವೇಕಾನಂದ ಶಿಕ್ಷಣ ಸಂಸ್ಥೆ ಮುಂಡಾಜೆಯ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದು ಪುತ್ತೂರಿನ ತೆಂಕಿಲದ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುವ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.Read More

ಕ್ರೀಡೆ ಶಾಲಾ ಚಟುವಟಿಕೆ ಸ್ಥಳೀಯ

ಬೆಳ್ತಂಗಡಿ : ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟ: ಮುಂಡಾಜೆ

  ಮುಂಡಾಜೆ :ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಪದ್ಮುಂಜ ಇದರ ಆಶ್ರಯದಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆ ಮುಂಡಾಜೆಯ ಪ್ರೌಢಶಾಲಾ ಬಾಲಕಿಯರ ತಂಡ ಭಾಗವಹಿಸಿ ಸತತ 14 ವರುಷಗಳಿಂದ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ ಆಗಿರುತ್ತದೆ. ಈ ಪಂದ್ಯಾಟದಲ್ಲಿ ಉತ್ತಮ ಹೊಡೆತಗಾರ್ತಿಯಾಗಿಕು.ಯಕ್ಷಿತ, ಉತ್ತಮ ಸೆಟ್ಟರ್ ಆಗಿ ಕು.ಸಿಂಚನ ಇವರು […]Read More

ನಿಧನ

ಮುಂಡಾಜೆ: ತಂದೆಯ ವಿಯೋಗದ ಐದನೇ ದಿನವೇ ಮಗನೂ ಮರಣ

  ಬೆಳ್ತಂಗಡಿ; ವಯೋವೃದ್ದರಾದ ತಂದೆ ನಿಧನರಾದ‌ಐದನೇ ದಿನಕ್ಕೇ ಮಗನೂ ನಿಧನರಾದ ಘಟನೆ ಮುಂಡಾಜೆ ಗ್ರಾಮದಲ್ಲಿ ನಡೆದಿದೆ. ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಪುತ್ತಾಕ ಅವರು ಮೃತರಾದ ಐದನೇ ದಿನ ಆ.16 ರಂದು ಅವರ ಮಗ ಅಬೂಬಕ್ಕರ್ ಕೂಳೂರು (50) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯಕ್ಕೊಳಗಾಗಿಕಳೆದ ನಾಲ್ಕೂವರೆ ತಿಂಗಳಿನಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲೇ ಇದ್ದ ಅಬೂಬಕ್ಕರ್ ಅವರು ಗುರುವಾರ ರಾತ್ರಿವೇಳೆ ಅಸುನೀಗಿದರು.ಅಬೂಬಕ್ಕರ್ ಅವರ ತಂದೆ ಹಿರಿಯ ಮೇಸ್ರ್ರಿಗಳಾಗಿದ್ದ ಪುತ್ತಾಕ ಕೂಳೂರು ಅವರು ಕಳೆದ […]Read More

ಸಮಸ್ಯೆ ಸ್ಥಳೀಯ

ಹೆದ್ದಾರಿ ಕಾಮಗಾರಿ ಅವಾಂತರ;ಮುಂಡಾಜೆಯ ಚಂದ್ರಶೇಖರ ಅಂಬಡ್ತ್ಯಾರು ಅವರ ಮನೆ ಅಪಾಯದಲ್ಲಿ

  ಬೆಳ್ತಂಗಡಿ; ಪುಂಜಾಲಕಟ್ಟೆ- ಚಾರ್ಮಾಡಿ ವರೆಗಿನ ಹೈವೇ ಕಾಮಗಾರಿಯಲ್ಲಿ ಗುತ್ತಿಗೆದಾರರ ಅಸಮರ್ಪಕ ಹಾಗೂ ಬೇಜವಾಬ್ಧಾರಿ ನಿರ್ವಹಣೆಯಿಂದಾಗಿ ಈಗಾಗಲೇ ಹಲವು ಅಪಘಾತ ಮತ್ತು ಪ್ರಾಣಹಾನಿ ಸಂಭವಿಸಿರುವ ಮಧ್ಯೆಯೇ ಇದೀಗ ಮುಂಡಾಜೆ ಗ್ರಾಮದ ಅಂಬಡ್ತ್ಯಾರು ಎಂಬಲ್ಲಿ ಚಂದ್ರಶೇಖರ ಅವರ ಮನೆಗೆ ಮಳೆ ನೀರು ಪ್ರವಾಹದ ರೀತಿಯಲ್ಲಿ ನುಗ್ಗಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ.ಸೋಮವಾರ ರಾತ್ರಿ ಮತ್ತು ಮಂಗಳವಾರ ಭಾರೀ ಪ್ರಮಾಣದಲ್ಲಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟ ಚರಂಡಿ ಹಾಗೂ ಕೆಲವೆಡೆ ಅರ್ಧ ಮಾಡಿಟ್ಟ ಚರಂಡಿ ಕಾಮಗಾರಿಯ ಪರಿಣಾಮ ತಗ್ಗು ಪ್ರದೇಶದಲ್ಲಿರುವ ಚಂದ್ರಶೇಖರ ಅವರ […]Read More

ಸಮಸ್ಯೆ ಸ್ಥಳೀಯ

ಮುಂಡಾಜೆ ಅಗರಿಯಲ್ಲಿ ಪ್ರಾಣಕ್ಕೆ ಕಂಟಕ ವಾಗಿರುವ ವಿದ್ಯುತ್ ತಂತಿ: ಪ್ರಾಣ ಹಾನಿಯಾಗುವ ಮೊದಲು

  ಮುಂಡಾಜೆ ಗ್ರಾಮದ ಅಗರಿ ಎಂಬ ಪರಿಸರದಲ್ಲಿ ಸುಮಾರು 50 ವರ್ಷಗಳ ಹಿಂದೆ ಹಾಕಿರುವ ವಿದ್ಯುತ್ ತಂತಿಗಳು ಬಹಳಷ್ಟು ಕ್ಷೀಣಿಸಿದ್ದು , ವರ್ಷದಲ್ಲಿ ಏಳೆಂಟು ಬಾರಿ ಈ ವಿದ್ಯುತ್ ತಂತಿ ಮಾರ್ಗಕ್ಕೆ ಕಡಿದು ಬೀಳುತ್ತಿದೆ. ಈ ಭಾಗದ ಲೈನ್ ಮ್ಯಾನ್ ದೂರು ನೀಡಿದ ತಕ್ಷಣ ಬಂದು ತಾತ್ಕಾಲಿಕವಾಗಿ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಆದರೆ ಅದೆಷ್ಟು ಬಾರಿ ಇಲಾಖೆಗೆ ಮನವಿ ಮಾಡಿದರೂ ಕೂಡಾ ಈ ಪರಿಸರದಲ್ಲಿ ಹೊಸ ತಂತಿಯನ್ನು ಅಳವಡಿಸುತ್ತಿಲ್ಲ. ಈ ಹಿಂದೆ ಮೆಸ್ಕಾಂ ಇಲಾಖೆಯ ಅದಾಲತ್ ನಲ್ಲಿ ಕೂಡ […]Read More

ಕಾರ್ಯಕ್ರಮ

ಮುಂಡಾಜೆ ಯಂಗ್ ಚಾಲೆಂಜರ್ಸ್ ನಿಂದ ಪ್ರತಿಭಾ ಪುರಸ್ಕಾರ; ಶೈಕ್ಷಣಿಕ ನಿಧಿ ವಿತರಣೆ

  ಬೆಳ್ತಂಗಡಿ; ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಹಾಗೂ ಊರ ದಾನಿಗಳ ಸಹಕಾರದಲ್ಲಿ ಮುಂಡಾಜೆಯ ವೈಸಿ ಭವನದಲ್ಲಿ ಗ್ರಾಮದ ಎಸ್ಸೆಸ್ಸೆಲ್ಸಿ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಆಯ್ದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನಿಧಿ ವಿತರಣೆ ಕಾರ್ಯಕ್ರಮ ಜೂ. 2 ರಂದು ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಪೂರ್ವಾಧ್ಯಕ್ಷ ಸುಜಿತ್ ಎಂ.ಭಿಡೆ “ನಮ್ಮನ್ನು ಗುರುತಿಸಿದವರನ್ನು ಸದಾ ಸ್ಮರಣೆಯಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಅವರಿಗೆ ನೆರವಾಗುವ ಸಂಕಲ್ಪ ಮಾಡಬೇಕು. ಸಮಾಜವನ್ನು ಕಟ್ಟುವ ಕೆಲಸಕ್ಕೆ ವಿದ್ಯಾರ್ಥಿ […]Read More

ಅಪಘಾತ

ಮುಂಡಾಜೆ: ರಾ.ಹೆದ್ದಾರಿಗೆ ಉರುಳಿಬಿದ್ದ ಭಾರೀ ಗಾತ್ರದ ಮರ: ಶೌರ್ಯ ತಂಡದಿಂದ ತೆರವು

  ಮುಂಡಾಜೆ: ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿಗೆ ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು, ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿರುವ ಘಟನೆ ಇಂದು ನಡೆದಿದೆ. ಸ್ಥಳೀಯರು ತಕ್ಷಣ ಶೌರ್ಯ ಸ್ವಯಂ ಸೇವಕರಿಗೆ ಮಾಹಿತಿ ತಿಳಿಸಿದ್ದು, ಜಗದೀಶ ನಾಯ್ಕ ಹಾಗೂ ಸಚಿನ್ ಬಿಢೆ ಕೂಡಲೇ ಕಾರ್ಯಪ್ರವೃತರಾಗಿ ಮರವನ್ನು ತೆರವುಗೊಳಿಸಲಾಗಿದೆ.Read More

ಕಾರ್ಯಕ್ರಮ

ಮುಂಡಾಜೆ ಗಾಂಧಿ ಕಟ್ಟೆಯಲ್ಲಿ ‘ಗಾಂಧಿನಮನ’ ಕಾರ್ಯಕ್ರಮ

  ಮುಂಡಾಜೆ: ಮಹಾತ್ಮಾ ಗಾಂಧೀಜಿಯವರು ಸಾರಿದ ಅಹಿಂಸಾ ತತ್ವ, ಸತ್ಯ, ತನ್ನನ್ನೇ ತಾನು ಒಡ್ಡಿಕೊಂಡು ನಡೆಸಿದ ಉಪವಾಸ ಸತ್ಯಾಗ್ರಹದಂತಹಾ ಚಳವಳಿಯ ನಡೆ, ಧರ್ಮ ಧರ್ಮಗಳ ಮಧ್ಯೆ ಸಹಿಷ್ಣುತೆಯ ಸಂದೇಶ ಅಂತಹಾ ನೆಲೆಗಟ್ಟಿನ ಭಾರತ ಮತ್ತೆ ಉದಯಿಸಬೇಕು. ಆಗ ಮಾತ್ರ ಅವರ ಜೀವನ‌ಸಂದೇಶ ಮರುಸ್ಥಾಪನೆಯಾಗುತ್ತದೆ ಎಂದು ನವೋದಯ ವಸತಿ ಶಾಲೆ ಮುಂಡಾಜೆಯ ಪ್ರಾಂಶುಪಾಲ ಮುರಳೀಧರ ಅಭಿಪ್ರಾಯಪಟ್ಟರು. ಗಾಂಧಿ‌ವಿಚಾರ ವೇದಿಕೆ ಬೆಳ್ತಂಗಡಿ, ಸೌಹಾರ್ದ ವೇದಿಕೆ ಬೆಳ್ತಂಗಡಿಯ ಮುಂಡಾಜೆ ಘಟಕ ಹಾಗೂ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಜಂಟಿ‌ ಸಹಭಾಗಿತ್ವದಲ್ಲಿ ಜ.30 […]Read More

error: Content is protected !!