ಬೆಳ್ತಂಗಡಿ; ವಾಹನಗಳಲ್ಲಿ ನೋಡುಗರ ಕಣ್ಣಿಗೆ ಬೆಳಕು ಕುಕ್ಕುವ ರೀತಿಯಲ್ಲಿ ಉಪಯೋಗಿಸುವ ಎಲ್.ಇ.ಡಿ ಬಲ್ಬುಗಳನ್ನು ಬಳಸಬಾರದು ಎಂಬ ನಿಯಮವಿದ್ದು ಇಂದು ಉಜಿರೆ, ಹಳೆಪೇಟೆ ಮೊದಲಾದೆಡೆ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ಕಾರ್ಯಾಚರಣೆ ನಡೆಯಿತು. ಸ್ವತಃ ಫೀಲ್ಡಿಗಿಳಿದ ಸಂಚಾರಿ ಠಾಣೆ ಎಸ್.ಐ ಅರ್ಜುನ್ ಅವರು ರಿಕ್ಷಾ ಚಾಲಕರಲ್ಲಿ ಹಾಗೂ ಇತರ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸಿದರು. ಸದ್ರಿ ಲೈಟ್ ಉಪಯೋಗಿಸುತ್ತಿದ್ದವರ ಲೈಟ್ ಗಳನ್ನು ತೆರವುಗೊಳಿಸಿದರು. ಅದೇ ರೀತಿ ಕೆಲ ವಾಹನಗಳಲ್ಲಿ ಅನಧಿಕೃತವಾಗಿ ಬಳಸುತ್ತಿರುವ ಕರ್ಕಷ ಹಾರ್ನ್‌ಗಳನ್ನು ಸಂಚಾರಿ ಪೊಲೀಸರು […]Read More
Tags :Police
ಶಿಬಾಜೆ ಗ್ರಾಮದಲ್ಲಿ ನಡೆದ ದಲಿತ ವ್ಯಕ್ತಿಯ ಕೊಲೆ ಪ್ರಕರಣ: ಹತ್ಯೆಗೆ ಆಕೆ ಕಾರಣವಾಗಿರಬಹುದು
ಶಿಬಾಜೆ: ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎ.ಸಿ ಕುರಿಯನ್ ಅವರಿಗೆ ಸೇರಿದ ತೋಟವೊಂದರಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ದಲಿತ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಪ್ರಾರಂಭಗೊಂಡು ದಿನಗಳೇ ಕಳೆದರೂ ಆರೋಪಿಗಳ ಪತ್ತೆಯಾಗಿಲ್ಲ ಎನ್ನುವ ಬಗ್ಗೆ ಆಕ್ರೋಶವೊಂದು ಹೊರಬಿದ್ದಿದ್ದು ದಲಿತ ಸಂಘಟನೆಗಳು ಬೀದಿಗಿಳಿಯುವ ಬಗ್ಗೆ ಎಚ್ಚರಿಕೆ ನೀಡಿದೆ. ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎ.ಸಿ ಕುರಿಯನ್ ಅವರಿಗೆ ಸೇರಿದ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಶ್ರೀಧರ ಎಂಬವರಿಗೆ ನಾಲ್ವರ ತಂಡವೊಂದು ಹಲ್ಲೆಗೈದಿದ್ದರು. ಹಲ್ಲೆಯ […]Read More
ಬೆೆಳ್ತಂಗಡಿ : ಅಕ್ರಮ ಮರಳು ದಂಧೆಕೊರರ ಜೊತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಣ ಪಡೆದು ಶಾಮಿಲಾಗಿದ್ದಾರೆ ಎಂಬ ದೂರು ಮಂಗಳೂರು ಲೋಕಾಯುಕ್ತ ಇಲಾಖೆಗೆ ಬಂದ ಮೇರೆಗೆ ಲೋಕಾಯುಕ್ತ ಪೊಲೀಸರ ತಂಡ ಡಿ. 8ರಂದು ಜಿಲ್ಲೆಯ ಮೂರು ತಾಲೂಕಿನ ಮರಳು ಅಡ್ಡೆ ಮೇಲೆ ದಾಳಿ ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು, ಮೂಡಬಿದಿರೆ ತಾಲೂಕು, ಬೆಳ್ತಂಗಡಿ ತಾಲೂಕಿನಲ್ಲಿ ಮೂರು ತಂಡಗಳಾಗಿ ಮಾಡಿಕೊಂಡು ದಾಳಿ ಮಾಡಿದ್ದು ಈ ವೇಳೆ ಟಿಪ್ಪರ್, ದೋಣಿ ವಶಪಡಿಸಿಕೊಂಡು […]Read More
ಉಪ್ಪಿನಂಗಡಿ: ಇಲ್ಲಿನ ಪೋಲಿಸ್ ಠಾಣೆ ಮತ್ತು ಹಳೆ ಬಸ್ಟ್ಯಾಂಡ್ ಸಮೀಪದ ಅಂಗಡಿಗಳ ಶಟರ್ ಮುರಿದು ಕಳ್ಳರು ನಗದು ಹಣ ದೋಚಿರುವ ಘಟನೆ ಅ.12 ರಂದು ರಾತ್ರಿ ವೇಳೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪೋಲಿಸರು ಸಿಸಿ ಕ್ಯಾಮರಾ ಪರಿಶೀಲಿಸಿದ್ದು ತನಿಖೆ ಕೈಗೊಂಡಿದ್ದಾರೆ.Read More
ಹುಣ್ಸೆಕಟ್ಟೆ ಗಣಪನಿಗೆ ದುಷ್ಕರ್ಮಿಗಳಿಂದ ರಾಜಕೀಯ ಬಣ್ಣ: ಕಿಡಿಗೇಡಿಗಳಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ
ಹುಣ್ಸೆಕಟ್ಟೆ: ಶ್ರೀ ರಾಮ ಭಜನಾ ಮಂಡಳಿ ಹುಣ್ಸೆಕಟ್ಟೆ ಇದರ ವತಿಯಿಂದ ಜರುಗಿದ 22 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದು, ಕಿಡಿಗೇಡಿಗಳ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೆ.6 ರಂದು ಹುಣ್ಸೆಕಟ್ಟೆ ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮನವಿಯನ್ನು ನೀಡಿದರು. ಹುಣ್ಸೆಕಟ್ಟೆ ಇದರ ವತಿಯಿಂದ ಜರುಗಿದ 22 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವು ಎಲ್ಲರ […]Read More
ಸುರತ್ಕಲ್ :ಫಾಜಿಲ್ ಹತ್ಯೆಗೆ ಬಳಕೆಯಾಗಿದ್ದ ಕಾರನ್ನು ಪೊಲೀಸರು ಸ್ಥಳಾಂತರ ಮಾಡಿದ್ದಾರೆ, ಕಾರ್ಕಳ ತಾಲೂಕಿನ ಕಾಂಜರ ಕಟ್ಟೆ ಯ ಕಡಕುಂಜ ಎಂಬಲ್ಲಿ ಕಾರು ಪತ್ತೆ ಯಾಗಿತ್ತು ಹತ್ಯೆಗೆ ಬಳಕೆಮಾಡಿದ್ದ ಈ ಕಾರನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದರು. ಕಾರನ್ನು ಪತ್ತೆ ಹಚ್ಚಿದ ಸುರತ್ಕಲ್ ಪೊಲೀಸ್ ಇಂದು ಟೋಯಿಂಗ್ ವಾಹನದ ಮೂಲಕ ಸುರತ್ಕಲ್ ಪೊಲೀಸರು ಕಾರನ್ನು ಸ್ಥಳಾಂತರಿಸಿದ್ದಾರೆ.ಮುಂದಿನ ವಿಧಿ ವಿಜ್ಞಾನ ತಜ್ಞರನ್ನು ಸುರತ್ಕಲ್ ಪೊಲೀಸ್ ಠಾಣೆಗೆ ಕರೆಸಿಕೊಳ್ಳಲಿದ್ದುಮುಂದಿನ ತನಿಖೆಗಳ ಮೂಲಕ ಹೆಚ್ಚಿನ ಮಾಹಿತಿ ಬೆಳಕಿಗೆ ಬರಲಿದೆRead More
ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶಕ್ಕೆ ಪ್ರಮೋದ್ ಮುತಾಲಿಕ್ ಪ್ರಯತ್ನಿಸುತ್ತಿದ್ದು ಇದೀಗ ಪೊಲೀಸರು ತಡೆದು ವಶಕ್ಕೆ ಪಡೆದ ಘಟನೆ ನಡೆದಿದೆ ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದಾಗ ಉಡುಪಿ ಮಂಗಳೂರು ಗಡಿ ಭಾಗದ ಹೆಜಮಾಡಿಯಲ್ಲಿ ಪ್ರಮೋದ್ ಮುತಾಲಿಕ್ ಅವರನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಬಂಟ್ವಾಳ ಬೆಳ್ತಂಗಡಿ ,ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರವೇಶಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ […]Read More
ಪುಂಜಾಲಕಟ್ಟೆ: ಮುಂಬರುವ ಬಕ್ರೀದ್ ಹಬ್ಬದಂದು ಗೋ ಹತ್ಯೆ ನಡೆಯುವ ಪ್ರಕರಣಗಳನ್ನು ನಿಲ್ಲಿಸುವಂತೆ ಮುಂಚಿತವಾಗಿಯೇ ಎಲ್ಲಾ ಮುಸಲ್ಮಾನರಿಗೂ ಗೋ ಹತ್ಯೆ ನಡೆಯದಂತೆ ಎಚ್ಚರಿಕೆಯನ್ನು ನೀಡಬೇಕು ಎಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ರಾಮ್ ಸೇನಾ ಸಂಘಟಕರು ಮನವಿ ನೀಡಿದರು. ಈ ಸಂದರ್ಭದಲ್ಲಿ ರಾಮ್ ಸೇನಾ ಪುಂಜಾಲಕಟ್ಟೆ ಘಟಕದ ಅಧ್ಯಕ್ಷ ಯೋಗಿಶ್ ಮೂಲ್ಯ, ಕಾರ್ಯದರ್ಶಿ ಪ್ರಶಾಂತ್ ಹಾಗೂ ಘಟಕದ ಕಾರ್ಯಕರ್ತರು ಭಾಗಿಯಾಗಿದ್ದರು.Read More
ಮುಂಬರುವ ಬಕ್ರೀದ್ ಹಬ್ಬದಂದು ಗೋ ಹತ್ಯೆ ನಡೆಯುವ ಪ್ರಕರಣಗಳನ್ನು ನಿಲ್ಲಿಸುವಂತೆ ಮುಂಚಿತವಾಗಿಯೇ ಎಲ್ಲಾ ಮುಸಲ್ಮಾನರಿಗೂ ಗೋ ಹತ್ಯೆ ನಡೆಯದಂತೆ ಎಚ್ಚರಿಕೆಯನ್ನು ನೀಡಬೇಕಾಗಿ ಬಜಪೆ ಪೊಲೀಸ್ ಆಯುಕ್ತರಲ್ಲಿ ರಾಮ್ ಸೇನಾ ಸಂಘಟನೆಯಿಂದ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ರಾಮ್ ಸೇನಾ ಮಂಗಳೂರು ತಾಲೂಕಿನ ಅಧ್ಯಕ್ಷ ಚಂದ್ರಶೇಖರ್ ಸುಂಕದಕಟ್ಟೆ, ಉಪಾಧ್ಯಕ್ಷ ಸುಧೀರ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಪ್ಪೆಪದವು ಹಾಗೂ ಸಾಮಾಜಿಕ ಜಾಲತಾಣ ಪ್ರಮುಖ್ ರಾದ ಸಂಪ್ರೀತ್ ಎಕ್ಕಾರ್ ಉಪಸ್ಥಿತರಿದ್ದರು.Read More