ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಚಲನಚಿತ್ರ ನಟ ಶಿವರಾಜ್ ಕುಮಾರ್ ಹಾಗೂ ಕುಟುಂಬ
ಧರ್ಮಸ್ಥಳ: ಚಲನಚಿತ್ರ ನಟ ಶಿವರಾಜ್ ಕುಮಾರ್ ಹಾಗೂ ಅವರ ಕುಟುಂಬ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಡಿ.9 ರಂದು ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಹಲವು ದೇವಾಲಯಗಳಿಗೆ ಭೇಟಿ ನೀಡಿ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದರು. ಈ ವೇಳೆ ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿಯರಾದ ನಿರುಪಮ ರಾಜ್ ಕುಮಾರ್, ನಿವೇದಿತ ರಾಜ್ ಕುಮಾರ್ ಜೊತೆಗಿದ್ದರು.
ಇವರಿಗೆ ಧರ್ಮಸ್ಥಳದ ಪಾರ್ಶವನಾಥ್ಬ, ಲಕ್ಷ್ಮೀ ನಾರಾಯಣ್ ಸಹಕರಿಸಿದರು.