ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಗೈಡ್ಸ್ ಘಟಕಕ್ಕೆ ಚಾಲನೆ
ಧರ್ಮಸ್ಥಳ: ಶ್ರೀ ಧ ಮ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಸೆ.14 ರಂದು ಸ್ಕೌಟ್ ಗೈಡ್ ಘಟಕದ ಉದ್ಘಾಟನಾ ಸಮಾರಂಭ ನೆರವೇರಿತು .
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತ ಸ್ಕೌಟ್ ಮತ್ತು ಗೈಡ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಇದರ ಕಾರ್ಯದರ್ಶಿಯಾದ ಪ್ರಮೀಳ ದೀಪ ಪ್ರಜ್ವಲಿಸಿ ಸ್ಕೌಟ್ಸ್ ಗೈಡ್ಸ್ ಘಟಕಕ್ಕೆ ಚಾಲನೆ ನೀಡಿದರು. ತದನಂತರ ವಿದ್ಯಾರ್ಥಿಗಳಿಗೆ ಸ್ಕೌಟ್ ಗೈಡಿನ ಮಹತ್ವವನ್ನ ತಿಳಿಹೇಳಿದರು.
ವಿಶೇಷ ಆಹ್ವಾನಿತರಾಗಿ ಶಾಲಾ ಸಂಚಾಲಕರಾದ ಅನಂತಪದ್ಮನಾಭ ಭಟ್ ಆಗಮಿಸಿದ್ದು ಸ್ಕೌಟ್ ಗೈಡ್ನ ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು .ಹಾಗೆಯೇ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ಇವರು ಶಿಸ್ತಿನ ಕುರಿತಾದ ಹಲವಾರು ವಿಚಾರಗಳನ್ನು ತಿಳಿ ಹೇಳಿ ಮಕ್ಕಳಿಗೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಮನರಂಜಿಸಿದರು. ಆದರ್ಶ್ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ, ಧನ್ಯ ಶ್ರೀ ಸ್ವಾಗತಿಸಿ, ಮಹಿಮ ವಂದಿಸಿದರು. ಸ್ಕೌಟ್ ಮಾಸ್ಟರ್ ಶ್ರೀಮತಿ ಶಶಿಕಲಾ ಮತ್ತು ಗೈಡ್ ಕ್ಯಾಪ್ಟನ್ ಶ್ರೀಮತಿ ಗೀತಾ ಉಪಸ್ಥಿತರಿದ್ದರು.ಶಾಲಾ ಶಿಕ್ಷಕರ ವೃಂದ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.