ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಕಣಿಯೂರು(ರಿ) ಕಣಿಯೂರು ಕಸಬ ಹಾಗೂ ಊರವರ ಆಶ್ರಯದಲ್ಲಿ ನಡೆಯುವ 45 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಇತ್ತೀಚಿಗೆ ಕಣಿಯೂರು ಕಸಬ ಶಾಲಾ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಸದಸ್ಯರು ಗ್ರಾಮಸ್ಥರು ಹಾಗೂ ಉರಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು. ಟ್ರಸ್ಟ್ ನ ಅಧ್ಯಕ್ಷ ಯಶೋಧರ ಶೆಟ್ಟಿ ಕಣಿಯೂರು ಸ್ವಾಗತಿಸಿ ಟ್ರಸ್ಟ್ ನ ಕಾರ್ಯದರ್ಶಿ ಸುಕೇಶ್ ಬರೆಮೇಲು ಧನ್ಯವಾದ ಸಮರ್ಪಿಸಿದರು.Read More
Tags :Kaniyuru
ಬಾರ್ಯ : ಕಣಿಯೂರು ಮಹಾ ಶಕ್ತಿ ಕೇಂದ್ರದ ಬಾರ್ಯ ಗ್ರಾಮದಲ್ಲಿ ಮಾರ್ಚ್ 20 ರoದು ಯುವ ಚೌಪಾಲ್ ಕಾರ್ಯಕ್ರಮ ನಡೆಯಿತು. ನಮೋ ಯುವ ಚೌಪಾಲ್ 400 ಕುರಿತು ಮoಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಪ್ರಸಾದ್ ಕಡಮ್ಮಾಜೆ ಇವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಯುವಮೋರ್ಚಾ ಉಪಾಧ್ಯಕ್ಷರಾದ ಪ್ರಕಾಶ್ ಬಾರ್ಯ, ಬೂತ್ ಸಮಿತಿ ಅಧ್ಯಕ್ಷ, ಕಾರ್ಯದರ್ಶಿ ಪದಾಧಿಕಾರಿಗಳು,ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.Read More
ಕಣಿಯೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು, ಎ ಪಿ ಎಂ ಸಿ ಹಾಲಿ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಢಿದ್ದ ಉರುವಾಲು ಗಣೇಶ್ ಕೆರ್ಮುಣ್ಣಾಯ ರವರು ಡಿ 7 ರಂದು ಬೆಳ್ತಂಗಡಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲವು ಸಮಯಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಬೆಳ್ತಂಗಡಿ ಆಸ್ಪತ್ರೆಗೆ ಡಯಾಲಿಸೀಸ್ ಗಾಗಿ ಬರುತ್ತಿದ್ದರು ಆದರೆ ಇಂದು ಬೆಳಿಗ್ಗೆ 4 ಗಂಟೆ ವೇಳೆ ಡಯಾಲಿಸೀಸ್ ಗಾಗಿ ಬಂದಿದ್ದ ವೇಳೆ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಚಿಕಿತ್ಸೆ ನೀಡಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. […]Read More
ಕೊರಿಂಜ :10ನೇ ವರ್ಷದ ಪಾದಯಾತ್ರೆಯ ಪೂರ್ವಭಾವಿ ಸಭೆ ಕೊರಿಂಜ ಸಮುದಾಯ ಭವನದಲ್ಲಿ ನ.6 ರಂದು ನಡೆಯಿತು. ಜನ ಜಾಗೃತಿ ವೇದಿಕೆಯ ಶಿಭಿರಾಧಿಕಾರಿ ನಂದಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಭೆಯಲ್ಲಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷರಾದ ಶಾರದಾ ರೈ, ಪ್ರಗತಿ ಬಂಧು, ಸ್ವ ಸಹಾಯ ಸಂಘಗಳ ಒಕ್ಕೂಟ ಕಣಿಯೂರು, ಇದರ ವಲಯಾಧ್ಯಕ್ಷರಾದ ರಮಾನಂದ ಪೂಜಾರಿ, ಜನ ಜಾಗೃತಿ ವಲಯಾಧ್ಯಕ್ಷರಾದ ರುಕ್ಮಯ್ಯ ಪೂಜಾರಿ, ಗ್ರಾಮ ಸಮಿತಿ ಅಧ್ಯಕ್ಷರು ಶಂಕರ್ ಭಟ್, ಪ್ರಫುಲ್ಲಚಂದ್ರ ಅಡ್ಯಂತಾಯ, […]Read More
ಕಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ, ಕಣಿಯೂರು – ಪದ್ಮುಂಜ, ಜನಜಾಗೃತಿ ಗ್ರಾಮ ಸಮಿತಿ ಕಣಿಯೂರು ವಿಭಾಗ, ಶ್ರೀ ಮಹಾ ವಿಷ್ಣು ದೇವಸ್ಥಾನ ಕಣಿಯೂರು ಇದರ ಆಶ್ರಯದಲ್ಲಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ, ಗ್ರಾಮ ಸುಭೀಕ್ಷಾ ಕಾರ್ಯಕ್ರಮದಡಿಯಲ್ಲಿ ಸೀಯಾಲಾಭಿಷೇಕ ನ.3 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ, ರೈತ ಬಂಧು ಮಾಲೀಕರಾದ ಶಿವಶಂಕರ್, ಜನ ಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷರಾದ ಪ್ರಫುಲ್ಲಚಂದ್ರ ಅಡ್ಯಂತಾಯ, ವಲಯಾಧ್ಯಕ್ಷರಾದ ರಮಾನಂದ ಪೂಜಾರಿ, ಕಣಿಯೂರು […]Read More
ಶೌರ್ಯ ಶ್ರೀ ಧರ್ಮಸ್ಥಳ ಸೇವಾ ವಿಪತ್ತು ನಿರ್ವಹಣೆ ಸಮಿತಿ ಕಣಿಯೂರು ಘಟಕದ ಮಾಸಿಕ ಸಭೆ ಹಾಗೂ ನೂತನ ಸ್ವಯಂ ಸೇವಕರ ಸೇರ್ಪಡೆ ಸಭೆಯನ್ನು ಅ.14 ರಂದು ಕೊರಿಂಜ ಸಭಾಭವನದಲ್ಲಿ ನಡೆಸಲಾಯಿತು. ಈ ಸಭೆಗೆ ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ ಹಾಗೂ ಕಣಿಯೂರು ವಲಯದ ಮೇಲ್ವಿಚಾರಕರಾದ ಪ್ರೇಮಾ,ಕಣಿಯೂರು ಘಟಕದ ಸಂಯೋಜಕಿ ಶ್ರೀಮತಿ ಚಂದ್ರಕಲಾ ಹಾಗೂ ಕಣಿಯೂರು ಘಟಕದ ಎಲ್ಲಾ ಸ್ವಯಂಸೇವಕರು ಹಾಗೂ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಹೊಸದಾಗಿ 13 ಸದಸ್ಯರ ಇಳಂತಿಲ ಘಟಕವನ್ನು ರಚನೆ […]Read More
ಖಾಯಿಲೆಯಿಂದ ಬಳಲುತ್ತಿರುವ ಕಣಿಯೂರು ಗ್ರಾಮದ ಪೈರೊಟ್ಟು ನಿವಾಸಿ ರೇವತಿಯವರಿಗೆ ಬೇಕಾಗಿದೆ ನೆರವಿನ ಹಸ್ತ
ಕಣಿಯೂರು: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪೈರೊಟ್ಟು ಸುಂದರ ನಾಯ್ಕರವರಪತ್ನಿ 40 ವರ್ಷ ಪ್ರಾಯದ ರೇವತಿಯವರು ಮಾರಣಾಂತಿಕ ರೋಗವಾದ ಗಂಟಲಿನ ಕ್ಯಾನ್ಸರ್ ನಿಂದ ಕಳೆದ 8 ತಿಂಗಳಿನಿಂದ ಬಳಲುತ್ತಿದ್ದಾರೆ. ಇವರು ಮಂಗಳೂರಿನ ಸ್ಪೆಷಲಿಸ್ಟ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಇದುವರೆಗೆ ಸುಮಾರು 5 ಲಕ್ಷಕ್ಕಿಂತ ಹೆಚ್ಚು ಹಣವನ್ನು ಚಿಕಿತ್ಸೆಗಾಗಿ ವ್ಯಯಮಾಡಿದ್ದಾರೆ. ಇನ್ನು ಮುಂದಿನ ಚಿಕಿತ್ಸೆಗೆ ಅಂದಾಜು ಸುಮಾರು 10 ಲಕ್ಷ ಬೇಕಾಗಬಹುದು ವೈದ್ಯರು ತಿಳಿಸಿದ್ದಾರೆ. ಆದರೆ ಇವರ ಕುಟುಂಬವು ತೀರಾ ಬಡತನದಿಂದ ಕೂಡಿದ್ದು, 2 ಹೆಣ್ಣು ಮಕ್ಕಳು […]Read More