• January 16, 2025

ಬಾಂಗ್ಲಾದೇಶಿ ಹಿಂದೂಗಳಿಗೆ ನ್ಯಾಯದೊರಕಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಸಲು ಭಾರತಾದ್ಯಂತ ಮೌನ ಪ್ರತಿಭಟನೆ !ಹಿಂದೂಗಳ ಮೇಲೆ ಅಮಾನವೀಯ ದಾಳಿಯನ್ನು ಖಂಡಿಸಿ, ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಆಂದೋಲನ !

 ಬಾಂಗ್ಲಾದೇಶಿ ಹಿಂದೂಗಳಿಗೆ ನ್ಯಾಯದೊರಕಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಸಲು ಭಾರತಾದ್ಯಂತ ಮೌನ ಪ್ರತಿಭಟನೆ !ಹಿಂದೂಗಳ ಮೇಲೆ ಅಮಾನವೀಯ ದಾಳಿಯನ್ನು ಖಂಡಿಸಿ, ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಆಂದೋಲನ !

 

ಬೆಳ್ತಂಗಡಿ.: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು ಇದುವರೆಗೆ 230 ಜನರು ಸಾವನ್ನಪ್ಪಿದ್ದಾರೆ. ಬಾಂಗ್ಲಾದೇಶದ 64 ಜಿಲ್ಲೆಗಳ ಪೈಕಿ 52 ಜಿಲ್ಲೆಗಳಲ್ಲಿ ಹಿಂದೂ ವಿರೋಧಿ ಹಿಂಸಾಚಾರದ ಘಟನೆಗಳು ನಡೆದಿವೆ. ಶೇಖ್ ಹಸೀನಾ ಸರಕಾರ ರಾಜೀನಾಮೆ ನೀಡಿದ ನಂತರ ಹಿಂದೂಗಳ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ, ಹಿಂದೂ ಯುವಕ, ಉತ್ಸವ್ ಮಂಡಲನನ್ನು ತಥಾಕಥಿತ ಧರ್ಮನಿಂಧನೆಯ ಆರೋಪದ ಮೇಲೆ ಜಿಹಾದಿ ಜನಸಮೂಹವು ನೇರವಾಗಿ ಪೊಲೀಸ್ ಠಾಣೆಗೆ ನುಗ್ಗಿ ಆ ಯುವಕನ ಎರಡೂ ಕಣ್ಣುಗಳನ್ನು ಕಿತ್ತು ಹಾಕಿದೆ. ಬಾಂಗ್ಲಾದೇಶದಲ್ಲಿ ಜಿಹಾದಿಗಳು ಹಿಂದೂಗಳನ್ನು ರಾಜಾರೋಷವಾಗಿ ಕೊಲ್ಲುವುದು, ಹಿಂದೂ ಮನೆಗಳನ್ನು ಸುಡುವುದು, ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡುವುದು, ಭೂಮಿಯನ್ನು ಕಬಳಿಸುವುದು, ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರವೂ ನಡೆಯುತ್ತಿದೆ.

ಬಹುಸಂಖ್ಯಾತ ಹಿಂದೂಗಳಿರುವ ಭಾರತ ದೇಶ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಮುಂದಾಗಿ ಬಾಂಗ್ಲಾದೇಶಿ ನುಸುಳುಕೋರರನ್ನು ದೇಶದಿಂದ ಹೊರಹಾಕಬೇಕು, ಬಾಂಗ್ಲಾದೇಶಿ ಉತ್ಪನ್ನಗಳನ್ನು ಬಹಿಶ್ಕರಿಸಿ, ಬಾಂಗ್ಲಾದೇಶದ ಆಕ್ರಮಣಕಾರರಿಗೆ ಸಹಾಯ ಮಾಡುವವರ ಮೇಲೆ ರಾಷ್ಟ್ರದ್ರೋಹದ ಅಪರಾಧ ದಾಖಲಿಸಬೇಕೆಂದು ಹಲವು ಫಲಕಗಳನ್ನು ಹಿಡಿದುಕೊಂಡು ಧರ್ಮಪ್ರೇಮಿಗಳು ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ .08.01.2021. ರಂದು ಶಾಂತಿಯುತವಾಗಿ …ಬೆಳ್ತಂಗಡಿ ಬಸ್ ನಿಲ್ದಾಣದ ಮುಂಭಾಗದಲ್ಲಿ .. ಪ್ಲೆಕಾರ್ಡ್ಸ್ ಹಿಡಿದು ಜನರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಸದಾಶಿವ ಶೆಟ್ಟಿ ಅರುವ, ಶ್ರೀ ಪರಮೇಶ್ವರ ಎಂ, ಶ್ರೀ ಶ್ರೀನಿವಾಸ ಸಿ, ಶ್ರೀ ಬಾಲಕೃಷ್ಣ ಗೌಡ ರೆಕ್ಯ, ಶ್ರೀ ರಾಘವೇಂದ್ರ ಕಾಮತ್ ಉಜಿರೆ, ಸೌ.ಸೌಮ್ಯ ಬಂದಾರು, ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು,ಹಾಗೂ ಧರ್ಮ ಪ್ರೇಮಿಗಳು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!