• December 8, 2024

ಹುಣ್ಸೆಕಟ್ಟೆ: ಶ್ರೀ.ಕ್ಷೇ.ಧ.ಗ್ರಾ.ಯೋಜನೆ ,ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವತಿಯಿಂದ ಸ್ವಚ್ಛತಾ ಕಾರ್ಯ

 ಹುಣ್ಸೆಕಟ್ಟೆ: ಶ್ರೀ.ಕ್ಷೇ.ಧ.ಗ್ರಾ.ಯೋಜನೆ ,ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವತಿಯಿಂದ ಸ್ವಚ್ಛತಾ ಕಾರ್ಯ

 

ಹುಣ್ಸೆಕಟ್ಟೆ: ಶ್ರೀ.ಕ್ಷೇ.ಧ.ಗ್ರಾ.ಯೋಜನೆ ,ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹುಣ್ಸೆಕಟ್ಟೆ ಇದರ ವತಿಯಿಂದ ಆ.6 ರಂದು ಸ.ಕಿ.ಪ್ರಾ.ಶಾಲೆ ಹುಣ್ಸೆಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಹುಣ್ಸೆಕಟ್ಟೆ ಒಕ್ಕೂಟ ಅಧ್ಯಕ್ಷರು ಹಾಗೂ ವಲಯ ಅಧ್ಯಕ್ಷರಾದ ಸೀತಾರಾಮ್ ಆರ್ ಇವರು ಉದ್ಘಾಟಿಸಿ,ಸ್ವಚ್ಚತೆ ಪ್ರತಿಯೊಬ್ಬರ ಆದ್ಯ ಕರ್ತವ್ಯ.ನಮ್ಮ ಜೀವನದಲ್ಲಿ ನಮ್ಮ ದೇಹದ ಸ್ವಚ್ಚತೆ ಎಷ್ಟೂ ಮುಖ್ಯವೋ ಅಷ್ಟೇ ನಮ್ಮ ಪರಿಸರದ ಸ್ವಚ್ಚತೆಯು ಮುಖ್ಯವಾಗಿದೆ. ಸಣ್ಣ ವಯಸ್ಸಿನಲ್ಲಿ ಮಕ್ಕಳಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಬೇಕು ಎಂದೂ ಹೇಳಿ ಶುಭ ಹಾರೈಸಿದರು.

ಶಾಲಾ ಮುಖ್ಯೋಪಾಧ್ಯಾಯರು ಮಾತಾನಾಡಿ ಶುಭಹಾರೈಸಿ,ಒಕ್ಕೂಟದ ವತಿಯಿಂದ ಜರುಗಿದ ಈ ಶಾಲೆಯ ಪರಿಸರದ ಸ್ವಚ್ಚತೆ ಮಾಡಿರುವುದಕ್ಕೆ ಒಕ್ಕೂಟವನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಒಕ್ಕೂಟ ಉಪಾಧ್ಯಕ್ಷರಾದ ಅನಿತಾ, ಶಾಲಾ ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಭವ್ಯ,ಮುಖ್ಯೋಪಾಧ್ಯಾಯರಾದ ಕರಿಯಪ್ಪ.ಕೆ, ಮಾಜಿ ಒಕ್ಕೂಟ ಅಧ್ಯಕ್ಷರಾದ ದಯಾನಂದ ಕೋಟ್ಯಾನ್,ಸೇವಪ್ರತಿನಿಧಿ ವನಿತಾ ಹಾಗೂ ಸ್ವಸಹಾಯ ತಂಡದ ಸದಸ್ಯರು ಮತ್ತು ಶಾಲಾ ಮಕ್ಕಳು ಭಾಗಿಯಾಗಿದ್ದರು.

ಶಾಲಾ ಸುತ್ತಮುತ್ತ ಕಸದ ವಿಲೇವಾರಿ ಮಾಡಿ,ಶಾಲಾ ಕೈತೋಟದ ಸ್ವಚ್ಚತೆಯನ್ನು ಮಾಡಲಾಯಿತು.

ಸೇವಪ್ರತಿನಿಧಿ ವನಿತಾ ಧನ್ಯವಾದವನ್ನು ಇತ್ತರು.

Related post

Leave a Reply

Your email address will not be published. Required fields are marked *

error: Content is protected !!