ಸೋಣಂದೂರು: ಭಾರಿ ಮಳೆಗೆ ಮನೆ ಸಂಪೂರ್ಣ ಹಾನಿ: ವಿಷಯ ತಿಳಿದು ಶಾಸಕರಿಂದ ತಕ್ಷಣ ಸ್ಪಂದನೆ

ಸೋಣಂದೂರು : ಸೋಣಂದೂರು ಗ್ರಾಮದ ಮುಂಡಾಡಿ ಕಿನ್ಯದಪಲ್ಕೆ ಎಂಬಲ್ಲಿನ ಕುಸುಮಾವತಿಯವರ ವಾಸದ ಮನೆಯು ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಕುಸಿದು ಬಿದ್ದು ಸಂಪೂರ್ಣ ಹಾನಿಗೊಂಡಿದ್ದು ,ಈ ವಿಷಯ ತಿಳಿದ ಶಾಸಕರು ತಕ್ಷಣವೇ ಸ್ಪಂದಿಸಿ ಆಪ್ತರ ಮುಖೇನ ಆರ್ಥಿಕ ನೆರವನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೇಬಿ ಸುಸ್ಸಾನ, ಉಪಾಧ್ಯಕ್ಷರಾದ ದಿನೇಶ್ ಕರ್ಕೇರ, ಗ್ರಾಮ ಕರಣಿಕರಾದ ಉಮೇಶ್, ಗ್ರಾಮ ಸಹಾಯಕರಾದ ಗುಣಕರ ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ತುರ್ತಾಗಿ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.