ಮಳೆಗಾಗಿ ಹೋಮ ಹವನ! ಕಾಳಿ ನದಿ ತಾತಾಸ್ತು ಅಂತಾಳ?

ಮಳೆಗಾಗಿ ಜನ ಏನೆನೆಲ್ಲಾ ಮಾಡ್ತಿದಾರೆ. ದೇವರಲ್ಲಿ ಪ್ರಾರ್ಥನೆ ಮಾಡ್ತಾ ಇದ್ದಾರೆ. ಈ ನಡುವೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಾಳಿ ನದಿ ಸಂಗಮ ಪ್ರದೇಶದಲ್ಲಿ ಹೋಮ ಹವನ ನಡೆದಿದೆ. ಬೆಂಗಳೂರಿನ ಜೋಡಿ ಮುನೇಶ್ವರ ದೇಗುಲದಿಂದ ಮಳೆಗಾಗಿ ಸಮುದ್ರದ ದಂಡೆ ಮೇಲೆ ಹಾಗೂ ಸಮುದ್ರದ ನಡುವೆ ಬೋಟ್‍ನಲ್ಲಿ ಹೋಮ ಹವನಗಳನ್ನು ಮಾಡಿದ್ದಾರೆ.
ಶಿವಶಂಕರ್ ಗುರೂಜಿ ಮತ್ತು ಅರ್ಚಕರ ತಂಡ ಜೋಡಿ ಮುನೇಶ್ವರ ದೇಗುಲದ ಜೋಡಿ ಶಿವಲಿಂಗ ಹಾಗೂ ವಿಷ್ಣು ಮೂರ್ತಿಗೆ ಪೂಜೆ ಸಲ್ಲಿಸಿ ಕೊನೆಗೆ ವೈದಿಕರ ತಂಡದೊಂದಿಗೆ ಬೋಟ್ ನಲ್ಲಿ ಯಜ್ಞ ನಡೆಯಲಾಯಿತು.
ಶಿವಶಂಕರ್ ಗುರೂಜಿ ಮತ್ತು ವೈದಿಕರ ತಂಡದವರು ಎರಡು ಬೋಟ್‍ಗಳ ಮೇಲೆ ಸಾಗಿ ಹೋಮವನ್ನು ಮಾಡಿದರು.ಮೊದಲು ಮರಳಿನಲ್ಲಿ ಶಿವಲಿಂಗವನ್ನು ಮಾಡಿ ಪೂಜೆ ಮಾಡಲಾಯಿತು ನಂತರದಲ್ಲಿ ಬೋಟ್ ನ ನಡುವೆ ಯಜ್ಞ ಕುಂಡವನ್ನು ಇರಿಸಿ ಯಜ್ಞ ಮಾಡಲಾಯಿತು. ಪೂರ್ಣಾಹುತಿ ನಂತರ ತಂಡ ಮತ್ತೆ ಬೆಂಗಳೂರಿಗೆ ಹಿಂತಿರುಗಿತು.