ಚಾರ್ಮಾಡಿ ಘಾಟ್ 10 ನೇ ತಿರುವಿನಲ್ಲಿ ಕೆಟ್ಟು ನಿಂತ ಇಂಧನ ತುಂಬಿದ ಟ್ಯಾಂಕರ್ ಸಾಲುಗಟ್ಟಿ ನಿಂತ ಅಂತರ್ಜಿಲ್ಲಾ ವಾಹನ ಪ್ರಯಾಣಿಕರು:ಮಂಗಳವಾರ ರಾತ್ರಿ 8:30 ಕ್ಕೆ ಚಾರ್ಮಾಡಿ ಘಾಟ್ 10 ನೇ ತಿರುವಿನಲ್ಲಿ ಇಂಧನ ತುಂಬಿದ ಟ್ಯಾಂಕರ್ ತಾಂತ್ರಿಕ ದೋಷದಿಂದ ಮಾರ್ಗಮಧ್ಯೆ ನಿಂತು ರಾತ್ರಿ ಬೆಂಗಳೂರು ಮತ್ತಿತರ ಕಡೆ ಸಂಚರಿಸುವ ನೂರಾರು ಬಸ್ಸ್ ಗಳು ಸಾಲು ಗಟ್ಟಿ ನಿಂತವು.ಬೆಳ್ತಂಗಡಿ ಹೊಯ್ಸಳ ಕ್ಕೆ ಬಂದ ದೂರಿನಂತೆ ಕರ್ತವ್ಯ ನಿರತ ಪಿಎಸ್ ವೆಂಕಪ್ಪ ಮತ್ತು ಬಸವರಾಜ್ ಕೂಡಲೇ ಸ್ಥಳಕ್ಕೆ ಹೋಗಿ […]
ಚಿಲಿಂಬಿ: ಕರಾವಳಿ ಕರ್ನಾಟಕದ ಅತೀ ದೊಡ್ಡ ಫೇಸ್ ಬುಕ್ ಲೈವ್ ಸಿಂಗಿಂಗ್ ರಿಯಾಲಿಟಿ ಶೋ ಕರಾವಳಿ ಗಾನಕೋಗಿಲೆ ಸೀಸನ್ 1 ಇದರ ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 24 ರಂದು ಭಾನುವಾರ ಆದರ್ಶ ಫ್ರೆಂಡ್ಸ್ ಅಸೋಷಿಯೇಶನ್ ಹಾಲ್ ಚಿಲಿಂಬಿ ಯಲ್ಲಿ ನಡೆಯಲಿದೆ. 2020 ರಲ್ಲಿ ಅರವಿಂದ್ ವಿವೇಕ್ ರವರು ಅರವಿಂದ್ ವಿವೇಕ್ ಫೇಸ್ ಬುಕ್ ಪೇಜ್ ನಲ್ಲಿ ಪ್ರಾರಂಭಗೊಳಿಸಿದ ಈ ರಿಯಾಲಿಟಿ ಶೋ ದಲ್ಲಿ ಕರಾವಳಿ ಕರ್ನಾಟಕದ ಸುಮಾರು 250 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. […]Read More
ಬೆಳ್ತಂಗಡಿ: ಇಲ್ಲಿಯ ಸುಬ್ರಾಯ ಪ್ರಭು ಎಂಬವರ ಬಾವಿಯಲ್ಲಿ ಸರಿಸುಮಾರು 5 ಅಡಿ ಉದ್ದದ ನಾಗರಹಾವು ಬಿದ್ದಿದ್ದು, ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆದಿದೆ. ಮನೆಮಂದಿ ಬಾವಿಯೊಳಗೆ ಹಾವು ಇರುವುದನ್ನು ಕಂಡು ಧರ್ಮಸ್ಥಳ ಉರಗ ಪ್ರೇಮಿ ಹಾಗೂ ಉರಗ ತಜ್ಞರಾದ ಸ್ನೇಕ್ ಪ್ರಕಾಶ್ ಇವರನ್ನು ಸಂಪರ್ಕಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಉರಗ ತಜ್ಞರು , ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿದ್ದು, ಸತತ ಪ್ರಯತ್ನದಿಂದ ನಾಗರಹಾವನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.Read More
ಕಳೆಂಜ: ಮುಂದಿನ ಪೀಳಿಗೆಯ ಮಕ್ಕಳಿಗೆ ಗದ್ದೆ ಹಾಗೂ ನೇಜಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕೊಕ್ಕಡ ಕಪಿಲ ಜೇಸಿಐ ಅಧ್ಯಕ್ಷರಾದ ಜೇಸಿ ಕೆ ಶ್ರೀಧರ್ ರಾವ್ ಇವರ ಮೇದಿನಿ ಫಾರ್ಮ್ ನ ಭತ್ತದ ಗದ್ದೆಯಲ್ಲಿ ಮುಂಗಾರು ನೇಜಿ ಸಂಭ್ರಮ- 2022 ಕಾರ್ಯಕ್ರಮವು ಜು.16 ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕೊಕ್ಕಡ ನಿವೃತ್ತ ಕ್ಷೇತ್ರ ಸಮನ್ವಯ ಅಧಿಕಾರಿ ಗಣೇಶ್ ಐತಾಳ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೊಕ್ಕಡ ಕಪಿಲ ಜೇಸಿಐ ಅಧ್ಯಕ್ಷ ಜೇಸಿ ಕೆ ಶ್ರೀಧರ ರಾವ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ […]Read More
ಬೆಳ್ತಂಗಡ: ಜು.17: ಶಿಕ್ಷಣ ಎಂಬ ದಾರಿದೀವಿಗೆ ಎಲ್ಲ ಮಕ್ಕಳಿಗೂ ದಕ್ಕಿದಾಗ ಸಮಾಜದಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವಿನ ತಾರತಮ್ಯ ದೂರವಾಗಲು ಸಾಧ್ಯ. ಶೈಕ್ಷಣಿಕ ಕ್ರಾಂತಿ ಬಡತನ ಬೇಗೆಯಿಂದ ಹೊರಬರಲು ಮೂಲ ಕಾರಣ ಎಂಬುದನ್ನರಿತು ದಾನಿಗಳ ನೆರವಿನಿಂದ ಹಮ್ಮಿಕೊಂಡ ಕಾರ್ಯಕ್ರಮ ಶಿಕ್ಷಣ ಮೌಲ್ಯದ ಗರಿಮೆ ಹೆಚ್ಚಿಸಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ವಿ.ಮನೋರಮಾ ಭಟ್ ಹೇಳಿದರು. ಬದುಕು ಕಟ್ಟೋಣ ಬನ್ನಿ ತಂಡ, ಬೆಳ್ತಂಗಡಿ ರೋಟರಿ ಕ್ಲಬ್ , ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ‘ನಮ್ಮೂರ […]Read More
ವೇಣೂರು: ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಭಾಗದ ಪ.ಜಾತಿ ಮತ್ತು ಪ.ಪಂಗಡದ ಕುಟುಂಬಗಳಿಗೆ ಮಾಸಿಕ 75 ಯುನಿಟ್ಗಳವರೆಗೆ ಉಚಿತ ವಿದ್ಯುತ್ ನೀಡಲು ಸರಕಾರ ಸೂಚಿಸಿದ್ದು, ಅರ್ಜಿ ಸಲ್ಲಿಸಬಹುದು ಎಂದು ಬೆಳ್ತಂಗಡಿ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಶಂಕರ ಮಾಹಿತಿ ನೀಡಿದರು. ಆರಂಬೋಡಿ ಗ್ರಾಮ ಪಂಚಾಯತು ಸಭಾಂಗಣದಲ್ಲಿ ಜು.16 ರಂದು ಜರುಗಿದ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ಬೆಳ್ತಂಗಡಿ ಉಪವಿಭಾಗದ ಮಟ್ಟದ ವಿದ್ಯುತ್ ಅದಾಲತ್ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು. ಅರ್ಹ ಫಲಾನುಭವಿಗಳು […]Read More
ಬೆಳ್ತಂಗಡಿ: ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳ್ತಂಗಡಿ ಇವರ ಸಹ ಭಾಗಿತ್ವದಲ್ಲಿ ಗ್ರಾಮ ಪಂಚಾಯತ್ ಉಜಿರೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ( ಸ್ವಾಯತ್ತ ) ಕಾಲೇಜು ಉಜಿರೆ ಸಮಾಜಕಾರ್ಯ ವಿಭಾಗ ಇವರ ಸಹಕಾರದೊಂದಿಗೆ ಉಜಿರೆ ಕ್ಲಸ್ಟರ್ ನ ಎಸ್ಡಿ ಎಂ ಸಿ ಸದಸ್ಯರಿಗೆ ಬಲವರ್ಧನಾ ಮತ್ತು ಇಲಾಖೆಗಳ ಸಮನ್ವಯತೆ ಬಗ್ಗೆ ತರಬೇತಿಯು ಉಜಿರೆ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಜುಲೈ 13 ರಂದು ನಡೆಯಿತು. ಗ್ರಾಮಪಂಚಾಯತ್ ಸದಸ್ಯೆ […]Read More
ನೆರಿಯ ಗ್ರಾಮದ ಗಂಡಿಬಾಗಿಲುತೊಮಸ್ ರವರ ಮನೆಗೆ ಗುಡ್ಡ ಕುಸಿದುಹಾನಿಯಾಗಿದ್ದು.ಇಂದು ಘಟನಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ,ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಬೇಟಿ ನೀಡಿದರು.ಈ ಸಂದರ್ಭದಲ್ಲಿ ಗಂಡಿಬಾಗಿಲು ಚರ್ಚ್ ನ ಧರ್ಮಗುರುಗಳಾದ ಶಾಜಿ ಮ್ಯಾಥ್ಯೂ ರವರು, ಚರ್ಚಿನ ಟ್ರಸ್ಟಿಗಳಾದಸೆಭಾಸ್ಟೀನ್ ಎಮ್ ಜೆ,ಅಗಸ್ಟೀನ್ ಗ್ರಾಮ ಪಂಚಾಯತ್ ಸದಸ್ಯರಾದವಿ.ಡಿ.ತಾಮಸ್, ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪಾಧ್ಯಕ್ಷರಾದ ಲಕ್ಷಣ್ ಅಲಂಗಾಯಿ,ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ನೀಲಯ್ಯ ಸ್ಥಳೀಯರಾದಶಿಜು ಪನತಿಕಲ್,ತಂಗಚ್ಚನ್ , ಜೋಮೋ ನೀಲಯ್ಯ ಪುಷ್ಪ ನೆರಿಯ, ಹಾಗು […]Read More
ಧರ್ಮಸ್ಥಳ: ನೇತ್ರಾವತಿ ನದಿಯಲ್ಲಿ ನಾಪತ್ತೆಯಾಗಿರುವ ಅಪರಿಚಿತ ಯುವತಿ: ನೀರಿನಮಟ್ಟ ಹೆಚ್ಚಾಗಿರುವ ಕಾರಣ ಸ್ಥಗಿತಗೊಂಡ
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಅಪರಿಚಿತ ಯುವತಿ ನಾಪತ್ತೆಯಾಗಿರುವ ಘಟನೆ ಇಂದು ನಡೆದಿದೆ. ಆಕೆ ಇಂದು ಬೆಳಗ್ಗೆ ಸುಮಾರು ಆರು ಗಂಟೆಗೆ ಧರ್ಮಸ್ಥಳಕ್ಕೆ ಆಟೋದಲ್ಲಿ ಬಂದಿದ್ದು, ಬಳಿಕ ಅಲ್ಲಿಂದ ನಾಪತ್ತೆಯಾಗಿದ್ದಾಳೆ. ಯುವತಿ ಬಗ್ಗೆ ಯಾವುದೇ ವಿಳಾಸ ಮಾಹಿತಿ ಸಿಕ್ಕಿಲ್ಲ ಭಾರಿ ಮಳೆಯಿಂದ ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದರಿಂದ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ಮಾಡಲು ಅಸಾಧ್ಯವಾಗಿದೆ.Read More
ಕಡಿರುದ್ಯಾವರ: ನಿರಂತರ ಸುರಿದ ಧಾರಾಕಾರ ಮಳೆಯಿಂದಾಗಿ ಕಡಿರುದ್ಯಾವರ ಗ್ರಾಮದ ಕೊಪ್ಪದ ಗಂಡಿ ನೇತ್ರಾವತಿ ನದಿಯಲ್ಲಿ ದನ ಒಂದು ತೇಲಿ ಬಂದಿರುವ ಘಟನೆ ಇಂದು ಮುಂಜಾನೆ ವೇಳೆ ಬೆಳಕಿಗೆ ಬಂದಿದೆ. ನಿರಂತರ ಸುರಿಯುತ್ತಿರುವ ಮಳೆಗೆ ನೇತ್ರಾವತಿ ನದಿಯು ತುಂಬಿ ಹರಿಯುತ್ತಿದ್ದು, ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ದನವೊಂದು ತೇಲಿ ಬಂದು ಸೇತುವೆಯ ದಡದಲ್ಲಿ ಸಿಲುಕಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ಇಂದು ಮುಂಜಾನೆ ಸ್ಥಳೀಯರಿಗೆ ಕಂಡುಬಂದಿದ್ದು ವಾರಸುದಾರ ಯಾರೆಂದು ತಿಳಿದು ಬಂದಿಲ್ಲ.Read More