• September 21, 2024

ಬೆಳ್ತಂಗಡಿ: ಬಾವಿಗೆ ಬಿದ್ದ 5 ಅಡಿ ಉದ್ದದ ನಾಗರಹಾವು: ಸತತ 2 ಗಂಟೆಗಳ ಕಾರ್ಯಾಚರಣೆ

 ಬೆಳ್ತಂಗಡಿ: ಬಾವಿಗೆ ಬಿದ್ದ 5 ಅಡಿ ಉದ್ದದ ನಾಗರಹಾವು: ಸತತ 2 ಗಂಟೆಗಳ ಕಾರ್ಯಾಚರಣೆ

ಬೆಳ್ತಂಗಡಿ: ಇಲ್ಲಿಯ ಸುಬ್ರಾಯ ಪ್ರಭು ಎಂಬವರ ಬಾವಿಯಲ್ಲಿ ಸರಿಸುಮಾರು 5 ಅಡಿ ಉದ್ದದ ನಾಗರಹಾವು ಬಿದ್ದಿದ್ದು, ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆದಿದೆ.

ಮನೆಮಂದಿ ಬಾವಿಯೊಳಗೆ ಹಾವು ಇರುವುದನ್ನು ಕಂಡು ಧರ್ಮಸ್ಥಳ ಉರಗ ಪ್ರೇಮಿ ಹಾಗೂ ಉರಗ ತಜ್ಞರಾದ ಸ್ನೇಕ್ ಪ್ರಕಾಶ್ ಇವರನ್ನು ಸಂಪರ್ಕಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಉರಗ ತಜ್ಞರು , ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿದ್ದು, ಸತತ ಪ್ರಯತ್ನದಿಂದ ನಾಗರಹಾವನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!