• July 25, 2024

ಮಳೆಯ ಆರ್ಭಟಕ್ಕೆ ಕುಸಿದು ಬಿದ್ದ ಹಟ್ಟಿ: ಸ್ಥಳದಲ್ಲೇ ಮೃತಪಟ್ಟ ಗಬ್ಬದ ದನ

 ಮಳೆಯ ಆರ್ಭಟಕ್ಕೆ ಕುಸಿದು ಬಿದ್ದ ಹಟ್ಟಿ: ಸ್ಥಳದಲ್ಲೇ ಮೃತಪಟ್ಟ ಗಬ್ಬದ ದನ
ವೇಣೂರು: ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ವೇಣೂರಿನ ಸುದೆರ್ದು ನಿವಾಸಿ ರೇವತಿ ಎಂಬವರ ಹಟ್ಟಿಯ ಮೇಲ್ಚಾವಣಿಯು ಗಬ್ಬದ ದನದ ಮೇಲೆ ಕುಸಿದು ಬಿದ್ದಿದ್ದು ಗಬ್ಬದ ದನದ ಹೊಟ್ಟೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತ ಪಟ್ಟಿರುವ ಹೃದ್ರಾವಕ ಘಟನೆ ಜು.7 ರಂದು ಮುಂಜಾನೆ ವೇಳೆ  ನಡೆದಿದೆ.ಹಟ್ಟಿಯಲ್ಲಿ 4 ದನಗಳನ್ನು ಕಟ್ಟಿಹಾಕಿದ್ದು 3 ದನಗಳು ಭಾರೀ ದುರಂತದಿಂದ ಪಾರಾಗಿದೆ.ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಉಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.   ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮೃತ ದನದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

Related post

error: Content is protected !!