• July 16, 2024

ಉಜಿರೆ: ಕ್ಲಸ್ಟರ್ ನ ಎಸ್ಡಿ ಎಂ ಸಿ ಸದಸ್ಯರಿಗೆ ಬಲವರ್ಧನಾ ಮತ್ತು ಇಲಾಖೆಗಳ ಸಮನ್ವಯತೆ ಬಗ್ಗೆ ತರಬೇತಿ

 ಉಜಿರೆ: ಕ್ಲಸ್ಟರ್ ನ ಎಸ್ಡಿ ಎಂ ಸಿ ಸದಸ್ಯರಿಗೆ ಬಲವರ್ಧನಾ ಮತ್ತು ಇಲಾಖೆಗಳ ಸಮನ್ವಯತೆ ಬಗ್ಗೆ ತರಬೇತಿ

ಬೆಳ್ತಂಗಡಿ: ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳ್ತಂಗಡಿ ಇವರ ಸಹ ಭಾಗಿತ್ವದಲ್ಲಿ ಗ್ರಾಮ ಪಂಚಾಯತ್ ಉಜಿರೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ( ಸ್ವಾಯತ್ತ ) ಕಾಲೇಜು ಉಜಿರೆ ಸಮಾಜಕಾರ್ಯ ವಿಭಾಗ ಇವರ ಸಹಕಾರದೊಂದಿಗೆ ಉಜಿರೆ ಕ್ಲಸ್ಟರ್ ನ ಎಸ್ಡಿ ಎಂ ಸಿ ಸದಸ್ಯರಿಗೆ ಬಲವರ್ಧನಾ ಮತ್ತು ಇಲಾಖೆಗಳ ಸಮನ್ವಯತೆ ಬಗ್ಗೆ ತರಬೇತಿಯು ಉಜಿರೆ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಜುಲೈ 13 ರಂದು ನಡೆಯಿತು.

ಗ್ರಾಮಪಂಚಾಯತ್ ಸದಸ್ಯೆ ಉಷಾಕಿರಣ್ ಕಾರಂತ್ ಕಾರ್ಯಕ್ರಮ ಉದ್ಘಾಟಿಸಿದರು.

ಉಜಿರೆ ಕ್ಲಸ್ಟರ್ ನ C. R. P. ಪ್ರತಿಮಾ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಶಿಕ್ಷಣ ಇಲಾಖೆಯ ಮಾಹಿತಿಯನ್ನು ನೀಡಿದರು.

ಸಂಪನ್ಮೂಲ ವ್ಯಕ್ತಿಯಾದ ನಾವೂರು ಪ್ರೌಢಶಾಲಾ ಶಿಕ್ಷಕರಾದ ಶ್ರೀ ಸುಧಾಕರ್ ಶೆಟ್ಟಿ S. D. M. C ಸದಸ್ಯರಿಗೆ ಸಮಗ್ರ ಮಾಹಿತಿಯನ್ನು ನೀಡಿದರು. ,

ಈ ಕಾರ್ಯಕ್ರಮದಲ್ಲಿ ಉಜಿರೆ ಹಳೇ ಪೇಟೆ ಸರಕಾರಿ ಪ್ರೌಢ ಶಾಲಾ ವಿಶೇಷ ಚೇತನ ವಿದ್ಯಾರ್ಥಿನಿ ಕುಮಾರಿ ಆಶಾ ಮತ್ತು ಅವರ ತಂದೆ ಹಾಗೂ ಶಾಲೆಯ ಮುಖ್ಯಶಿಕ್ಷಕಿ ಇವರನ್ನು ಅಭಿಮಾನದಿಂದ ಅಭಿನಂದನೆ ಸಲ್ಲಿಸಿ ಗ್ರಾಮಪಂಚಾಯತ್ ನ ಅಧ್ಯಕ್ಷರಾದ ಪುಷ್ಪಾ . ಆರ್. ಶೆಟ್ಟಿ. ಮತ್ತು ಉಪಾಧ್ಯಕ್ಷರಾದ ರವಿಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಛ, ಕಾರ್ಯದರ್ಶಿ ಜಯಂತ್. ಯು. ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಂಪನ್ಮೂಲದ ಅಧ್ಯಕ್ಷ ರಾದ ವಿನುತರಜತ್ ಗೌಡ ವಹಿಸಿ ಎಸ್ ಡಿ ಎಂ ಸಿ ಸದಸ್ಯರು ಜವಾಬ್ದಾರಿ ಮತ್ತು ಅಧಿಕಾರ ನಿಭಾಯಿಸಿಕೊಂಡು ಇಲಾಖೆ ಗಳೊಂದಿಗೆ ಮತ್ತು ಜನ ಪ್ರತಿ ನಿಧಿಗಳೊಂದಿಗೆ ಸಮನ್ವಯತೆ ಸಾಧಿಸುವ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಧ್ಯಾರುಗಳು ಹಾಜರಿದ್ದರು.. ಶಿಕ್ಷಣ ಸಂಪನ್ಮೂಲದ ಕಾರ್ಯ ಕಾರಿಸಮಿತಿ ಸದಸ್ಯರಾದ ಶ್ರೀಮತಿ ಸುಧಾಮಣಿ ಕಾರ್ಯ ಕ್ರಮ ನಿರೂಪಣೆ ಮಾಡಿ ಪ್ರಸ್ತಾವನೆ ಗೈದರು.

ಸಮಿತಿ ಸಂಘಟನಾ ಕಾರ್ಯದರ್ಶಿ ಸಾಂತಪ್ಪ ಸ್ವಾಗತಿಸಿ, ಕಾರ್ಯದರ್ಶಿ ಪುಷ್ಪ ಶ್ರೀನಿವಾಸ್ ಗೌಡ ಧನ್ಯವಾದ ಸಮರ್ಪಿಸಿದರು.

ಈ ಕಾರ್ಯಕ್ರಮಕ್ಕೆ ಶ್ರೀ. ಧ ಮಂ.ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ವಿದ್ಯಾರ್ಥಿಗಳು ಮತ್ತು ಪಡಿ ಮಂಗಳೂರು ಸಂಸ್ಥೆ ಸಹಕಾರ ನೀಡಿದರು.

ಸಂಪನ್ಮೂಲ ಕೇಂದ್ರದ ಕಾರ್ಯಕಾರಿ ಸಮಿತಿ ಸದಸ್ಯರಾದ ವಾಲ್ಟರ್ ಜೆ.ಪಿಂಟೋ, ಲಕ್ಷ್ಮಣ ಮುಂಡಾಜೆ, ಆನಂದ, ಪ್ರಮೀಳಾ, ನಂದಿನಿ ಶೆಟ್ಟಿ, ನಿಶ್ಮಿತ, ಮಂಜು, ರೇಷ್ಮಾ ವಿಶೇಷ ವಾಗಿ ಸಹ ಕರಿಸಿದರು..

Related post

Leave a Reply

Your email address will not be published. Required fields are marked *

error: Content is protected !!