ವೇಣೂರು: ಸ್ವಚ್ಛತಾ ಅಭಿಯಾನ: ಮೂಡುಕೋಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಸ್ವಚ್ಛತಾ ಕಾರ್ಯಕ್ರಮ
ವೇಣೂರು : ವೇಣೂರು ಗ್ರಾಮಪಂಚಾಯತ್ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನದ ಅಂಗವಾಗಿ ನ 17 ರಂದು ಮೂಡುಕೋಡಿಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರ ಸಹಕಾರದೊಂದಿಗೆ ರಸ್ತೆ ಬದಿ ಬೆಳೆದಿರುವ ಗಿಡ ಪೊದರು ಕತ್ತರಿಸುವ ಕಾರ್ಯ ನಡೆಯಿತು. ಮುಂದಿನ ದಿನದಲ್ಲಿ ಹುಲ್ಲು ಕತ್ತರಿಸುವ ಯಂತ್ರ ಬಳಸಿ ಎಲ್ಲ ರಸ್ತೆ ಬದಿ ಹುಲ್ಲನ್ನು ಕತ್ತರಿಸುವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಈ ಕಾರ್ಯಕ್ರಮ ನಡೆದಿದ್ದು ಇದರ ನೇತೃತ್ವವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಮೇಲ್ವಿಚಾರಕಿ ಶಾಲಿನಿ ಯವರು, ಒಕ್ಕೂಟದ ಅಧ್ಯಕ್ಷರಾದ ಹರೀಶ್ ಹಾಗೂ ನಳಿನಾಕ್ಷಿ, ವೇಣೂರು ಸಿ ಎ ಬ್ಯಾಂಕ್ ಅಧ್ಯಕ್ಷರಾದ ಸುಂದರ ಹೆಗ್ಡೆಯವರು, ಉಪಾಧ್ಯಕ್ಷ ಉಮೇಶ್ ನಡ್ತಿಕಲ್ಲು ಹಾಗೂ ಮೂಡುಕೋಡಿ ಪಂಚಾಯತ್ ಸದಸ್ಯರಾದ ಹರೀಶ್. ಪಿ. ಎಸ್ ರವರು ವಹಿಸಿದ್ದರು. ಸುಂದರ್ ಹೆಗ್ಡೆ ಯವರು ಉಪಹಾರ ದ ವ್ಯವಸ್ಥೆ ಮಾಡಿದರು.