ಬಂಟ್ವಾಳ: ಬಂಟ್ವಾಳ ತಾಲೂಕಿನ ಮೇಗಿನ ಕೂರಿಯಾಳ ಜಯಶೀಲ ಸದಾಶಿವ ಆಚಾರ್ಯ ದಂಪತಿಗಳ 1 ವರ್ಷ 5 ತಿಂಗಳ ಗಂಡು ಮಗು ಸಮಿತ್ ಮಲವಿಸರ್ಜನೆ ಮಾಡುವ ಅಂಗ ಮತ್ತು ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿದ್ದು ಈ ಪುಟ್ಟ ಮಗುವಿನ ಚಿಕಿತ್ಸೆಗೆ ತುಳುನಾಡಿನ ಹೆಸರಾಂತ ಸೇವಾ ಸಂಸ್ಥೆಗಳಲ್ಲಿ ಒಂದಾದ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನ ವತಿಯಿಂದ ರೂ. 35,000 ಚೆಕ್ ನ ಧನ ಸಹಾಯ ವನ್ನು ಹಸ್ತಾಂತರಿಸಲಾಯಿತು. ಅಲ್ಲದೆ ಬಂಟ್ವಾಳ ತಾಲೂಕಿನ ಕಾವಳಮೂಡೂರು ಮಿತ್ತಲಚ್ಚಿಲ್ ವಿಮಲ ಹರಿಯಪ್ಪ ನಾಯ್ಕ್ […]
ಮೊಗ್ರು:*ಜು.31 ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಅಲೆಕ್ಕಿ- ಮುಗೇರಡ್ಕ,* ಮೊಗ್ರು, ಬೆಳ್ತಂಗಡಿ ತಾಲೂಕು ಇವರ ವತಿಯಿಂದ ಮತ್ತು*ಅರಣ್ಯ ಇಲಾಖೆ, ಉಪ್ಪಿನಂಗಡಿ ವಲಯ ಇದರ* ಸಹಬಾಗಿತ್ವದಲ್ಲಿ *8 ನೇ ವರ್ಷದ ವನಮಹೋತ್ಸವ ಗಿಡ ನೆಡುವ* ಕಾರ್ಯಕ್ರಮ ಅಲೆಕ್ಕಿ ಪರಿಸರದಲ್ಲಿ ನಡೆಯಿತು.. ಕಾರ್ಯಕ್ರಮದ ಉದ್ಘಾಟನೆಯನ್ನು ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಕೆಕೆ.ಜನಾರ್ಧನ ಗೌಡ ನೆರವೇರಿಸಿದರು… ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ರಿ. ಇದರ ಅಧ್ಯಕ್ಷರಾದ ಶ್ರೀ ಪ್ರವೀಣ್ ಮತ್ತಿಲಾರು […]Read More
ಬಳಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ, ನಾಲ್ಕೂರು, ತೆಂಕಕಾರಂದೂರು ಇದರ 35 ನೇ ವರ್ಷದ ಆಚರಣಾ ಸಮಿತಿ ಅಧ್ಯಕ್ಷರಾಗಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಾಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ ಆಯ್ಕೆಯಾಗಿದ್ದಾರೆ. ಕಳೆದ 34 ವರ್ಷಗಳಿಂದ ಬಳಂಜ ಸಾರ್ವಜನಿಕ ಶ್ರೀ ಗಣೆಶೋತ್ಸವ ಸಮಿತಿಯಿಂದ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಳದ ವಠಾರದಲ್ಲಿ ನಡೆದ ಸಭೆಯಲ್ಲಿ ಗಣೇಶೋತ್ಸವದ ನೂತನ ಸಮಿತಿ ರಚಿಸಲಾಯಿತು. ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಬಳಂಜ ಗ್ರಾ.ಪಂ […]Read More
ಹುಣ್ಸೆಕಟ್ಟೆ: ಇಲ್ಲಿನ ಶ್ರೀ ರಾಮ ಭಜನಾ ಮಂಡಳಿ(ರಿ) ಇದರ ಆಶ್ರಯದೊಂದಿಗೆ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.31 ರಿಂದ ಸೆ.2 ರವರೆಗೆ ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ಜರುಗಲಿದ್ದು, 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಸಮಿತಿ ರಚನೆಯು ಜು.29ರಂದು ಸಮುದಾಯ ಭವನದಲ್ಲಿ ನಡೆಯಿತು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಲಕ್ಷ್ಮಣ್ ಮೆಸ್ಕಾಂ ಹಾಗೂ ರಾಜೇಶ್ ಕೆ. ಅಧ್ಯಕ್ಷರಾಗಿ ಲಕ್ಷ್ಮಣ್ ಕೆಂಬರ್ಜೆ, ಉಪಾಧ್ಯಕ್ಷರಾಗಿ ಉಲ್ಲಾಸ್, ಸಂತೋಷ್ ನಾಯಕ್. ಕಾರ್ಯದರ್ಶಿ ನಿತೀನ್ ಡಿ ಗೌಡ, ಜೊತೆ ಕಾರ್ಯದರ್ಶಿಯಾಗಿ ಅಶ್ವತ್ ಕೆಂಬರ್ಜೆ […]Read More
ದ.ಕ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡದ ಜಿಲ್ಲೆಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಜೆ 6ರ ವರೆಗೆ ಮುಚ್ಚುವಂತೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ರಾಜೇಂದ್ರ ಕೆ ವಿ ಆದೇಶಿಸಿದ್ದಾರೆ. ಜು.29 ರಿಂದ ಆ.1 ರವರೆಗೆ ಈ ಆದೇಶ ಜಾರಿಯಲ್ಲಿದ್ದು ಬೆಳಗ್ಗೆ 6 ಗಂಟೆಯಿಂದ ಮಾತ್ರ ಅಂಗಡಿ ಮುಂಗಟ್ಟು ತೆರೆಯಲು ಅನುಮತಿಯಿದೆ. ಉಳಿದಂತೆ ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕು ಎಂದು ತಿಳಿಸಿದ್ದಾರೆ.Read More
ಕನ್ಯಾಡಿ : ಪ್ರವೀಣ್ ನೆಟ್ಟಾರ್ ಇವರ ಬರ್ಬರ ಕೊಲೆಯನ್ನು ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಧೀಶರಾದ ಸದ್ಗುರು ಬ್ರಹ್ಮಾನಂದ ಶ್ರೀ ಗಳು ಖಂಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನಬದ್ಧವಾದ ರಾಜ್ಯಾಂಗಗಳು ಸಮರ್ಥವಾಗಿ ಕಠೋರವಾಗಿ ನಿರ್ಣಯಗಳನ್ನು ತೆಗೆದುಕೊಂಡಾಗ ಇಂತಹ ದುಷ್ಕೃತ್ಯಗಳು ನಡೆಯುವುದಿಲ್ಲ. ಯಾವುದೇ ಪಕ್ಷದ ಸರ್ಕಾರಗಳು ನುಡಿದಂತೆ ನಡೆಯದಿದ್ದಾಗ ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತದೆ ಇವತ್ತು ಸರಕಾರಗಳು ಅಥವಾ ಸಂಘ ಸಂಸ್ಥೆಗಳು ಅವರಿಗೆ ಪರಿಹಾರವನ್ನೇನೋ ಘೋಷಿಸಬಹುದು ಆದರೆ ಅವನ ಕುಟುಂಬಕ್ಕೆ ಆದ ನಷ್ಟ ಅಂದ್ರೆ ಅವನ ಹೆಂಡತಿ […]Read More
ಇಂದಬೆಟ್ಟು : ಇಂದಬೆಟ್ಟು ಗ್ರಾಮದ ಬರಮೇಲು ನಿವಾಸಿ ಸುಂದರ ಗೌಡ(ಪೂವಪ್ಪ) ಎಂಬವರು ಅಂಗಡಿಗೆ ಹೋಗಿ ವಾಪಾಸ್ ಮನೆಗೆ ಹಿಂತಿರುಗುವ ಮನೆಯ ಬಳಿ ಇರುವ ತೋಡು ದಾಟುವ ವೇಳೆ ಕಾಲು ಜಾರಿ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜು.27ರಂದು ನಡೆದಿದೆ. ಇವರು ಸುಮಾರು ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆಯಿಂದ ಕಿಲ್ಲೂರು ಅಂಗಡಿಗೆ ಹೋಗಿ ವಾಪಾಸ್ ಮನೆಗೆ ಹೋಗುವಾಗ ಮನೆಯ ತೋಟದ ತೋಡು ದಾಟುವ ವೇಳೆ ಈ ಸಂಭವ ನಡೆದಿದೆ. ಸುಂದರ ಗೌಡ ಅವರು […]Read More
ಬೆಳ್ತಂಗಡಿ: ಸ್ವಾತಂತ್ರ್ಯ ದಿನಾಚರಣೆಯ ವೇಳೆ ಪ್ಲಾಸ್ಟಿಕ್ ಧ್ವಜಗಳ ಮಾರಾಟ ತಡೆಗಟ್ಟುವಂತೆ ಹಿ.ಜ.ಸಮಿತಿಯಿಂದ ಮನವಿ
ಬೆಳ್ತಂಗಡಿ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕಾಗುವ ಅಪಮಾನವನ್ನು ತಡೆಗಟ್ಟಲು, ಪ್ಲಾಸ್ಟಿಕ್ ಧ್ವಜಗಳ ಮಾರಾಟ ಮತ್ತು ರಾಷ್ಟ್ರ ಧ್ವಜಕ್ಕಾಗುವ ಅಪಮಾನವನ್ನು ತಡೆಗಟ್ಟುವ ಉದ್ದೇಶದಿಂದ ಬೆಳ್ತಂಗಡಿಯ ವಿವಿಧೆಡೆಗಳಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಜು.27 ರಂದು ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ರಾದ ಪೃಥ್ವಿ ಸಾನಿಕಂ, ವೃತ್ತ ನಿರೀಕ್ಷಕರಾದ ಶಿವಕುಮಾರ್. ಬಿ , ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರೂಪಾಕ್ಷ , ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಜೇಶ್ ಇವರಿಗೆ ಮನವಿ ನೀಡಲಾಯಿತು. ರಾಷ್ಟ್ರ ಧ್ವಜವು ರಾಷ್ಟ್ರದ ಭಾವೈಕ್ಯದ ಸಂಕೇತವಾಗಿದೆ. ಆಗಸ್ಟ್ 15 ಮತ್ತು ಜನವರಿ […]Read More
ಬೆಳ್ತಂಗಡಿ: ಬೆಳ್ಳಾರೆ ಯಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಪ್ರವೀಣ್ ನೆಟ್ಟಾರು ಕೊಲೆ ಮಾಡಿದ ಕೊಲೆಗಡುಕರನ್ನ ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು,ಪ್ರವೀಣ್ ನೆಟ್ಟಾರು ರವರು ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಇದ್ದರು , ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.ಪ್ರವೀಣ್ ನೆಟ್ಟಾರು ಇವರ ಅಗಲುವಿಕೆಯು ತುಂಬಾ ವಿಷಾದನೀಯ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬದವರಿಗೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ. ಕೊಲ್ಲುವ ರಾಕ್ಷಸಿ ಕೃತ್ಯಕ್ಕೆ ನನ್ನ ಧಿಕ್ಕಾರವಿದೆ. ಕೊಲೆಗಡುಕರನ್ನ […]Read More
ಬೆಳ್ತಂಗಡಿ: ಬೆಳ್ಳಾರೆಗೆ ಆಗಮಿಸುತ್ತಿದ್ದ ಪ್ರವೀಣ್ ಪಾರ್ಥಿವ ಶರೀರದ ಮೆರವಣಿಗೆ ಉದ್ದಕ್ಕೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಸಾಗುತ್ತಿದ್ದಾರೆ. ಇನ್ನೂ ಬೆಳ್ತಂಗಡಿ ಶಾಸಕರಲ್ಲಿ ಶವಯಾತ್ರೆಯ ವೇಳೆ ಕಾರ್ಯಕರ್ತರೋರ್ವರು ಈ ಸಾವಿಗೆ ನ್ಯಾಯ ದೊರಕಿಸಿ ಕೊಡಲು ನಿಮ್ಮಿಂದ ಮಾತ್ರ ಸಾಧ್ಯ. ಎಂದು ಕಾರಿನಲ್ಲಿ ಹೋಗುವಾಗ ಶಾಸಕರಲ್ಲಿ ಹೇಳುವ ವೀಡಿಯೋ ಇದೀಗ ವೈರಲ್ ಆಗಿದೆ.Read More