• October 16, 2024

ಇಂದಬೆಟ್ಟು: ವ್ಯಕ್ತಿಯೋರ್ವರು ತೋಡು ದಾಟುವಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವು:

 ಇಂದಬೆಟ್ಟು: ವ್ಯಕ್ತಿಯೋರ್ವರು ತೋಡು ದಾಟುವಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವು:

 

ಇಂದಬೆಟ್ಟು : ಇಂದಬೆಟ್ಟು ಗ್ರಾಮದ ಬರಮೇಲು ನಿವಾಸಿ ಸುಂದರ ಗೌಡ(ಪೂವಪ್ಪ) ಎಂಬವರು ಅಂಗಡಿಗೆ ಹೋಗಿ ವಾಪಾಸ್ ಮನೆಗೆ ಹಿಂತಿರುಗುವ ಮನೆಯ ಬಳಿ ಇರುವ ತೋಡು ದಾಟುವ ವೇಳೆ ಕಾಲು ಜಾರಿ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಜು.27ರಂದು ನಡೆದಿದೆ.

ಇವರು ಸುಮಾರು ಮಧ್ಯಾಹ್ನ   2 ಗಂಟೆ ಸುಮಾರಿಗೆ ಮನೆಯಿಂದ ಕಿಲ್ಲೂರು ಅಂಗಡಿಗೆ ಹೋಗಿ ವಾಪಾಸ್ ಮನೆಗೆ ಹೋಗುವಾಗ ಮನೆಯ ತೋಟದ ತೋಡು ದಾಟುವ ವೇಳೆ ಈ ಸಂಭವ ನಡೆದಿದೆ.

ಸುಂದರ ಗೌಡ ಅವರು ಸಂಜೆಯಾಗಿದ್ದರೂ ವಾಪಾಸ್ ಬರದೆ ಇದ್ದಾಗ ಮನೆಯವರು ಹುಡುಕಾಟ ನಡೆಸಿದ್ದಾರೆ. ರಾತ್ರಿ ಸುಮಾರು 9 ಗಂಟೆಗೆ ತೋಟದ ತೋಡಿನಲ್ಲಿ ಬಿದ್ದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ತರಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!