• October 14, 2024

ಅಲೆಕ್ಕಿ ಪರಿಸರದಲ್ಲಿ 8 ನೇ ವರ್ಷದ ವನಮಹೋತ್ಸವ

 ಅಲೆಕ್ಕಿ ಪರಿಸರದಲ್ಲಿ 8 ನೇ ವರ್ಷದ  ವನಮಹೋತ್ಸವ

 

ಮೊಗ್ರು:*ಜು.31 ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಅಲೆಕ್ಕಿ- ಮುಗೇರಡ್ಕ,* ಮೊಗ್ರು, ಬೆಳ್ತಂಗಡಿ ತಾಲೂಕು ಇವರ ವತಿಯಿಂದ ಮತ್ತು*ಅರಣ್ಯ ಇಲಾಖೆ, ಉಪ್ಪಿನಂಗಡಿ ವಲಯ ಇದರ* ಸಹಬಾಗಿತ್ವದಲ್ಲಿ *8 ನೇ ವರ್ಷದ ವನಮಹೋತ್ಸವ ಗಿಡ ನೆಡುವ* ಕಾರ್ಯಕ್ರಮ ಅಲೆಕ್ಕಿ ಪರಿಸರದಲ್ಲಿ ನಡೆಯಿತು..

ಕಾರ್ಯಕ್ರಮದ ಉದ್ಘಾಟನೆಯನ್ನು ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಕೆಕೆ‌.ಜನಾರ್ಧನ ಗೌಡ ನೆರವೇರಿಸಿದರು… ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ರಿ. ಇದರ ಅಧ್ಯಕ್ಷರಾದ ಶ್ರೀ ಪ್ರವೀಣ್ ಮತ್ತಿಲಾರು ವಹಿಸಿದರು.. ಮುಖ್ಯ ಅತಿಥಿಗಳಾಗಿ ಉಪ ವಲಯ ಅರಣ್ಯಾಧಿಕಾರಿ ಬಂದಾರು ಶಾಖೆಯ ಶ್ರೀ ಬಿ. ಜೆರಾಲ್ಡ್ ಡಿಸೋಜ ಹಾಗೂ ಅರಣ್ಯ ರಕ್ಷಕರು ಗಸ್ತು ಶ್ರೀ ಕೆ ಎನ್. ಜಗದೀಶ್ ಮತ್ತು ಗ್ರಾ.ಪಂ ಉಪಾಧ್ಯಕ್ಷರಾದ ಶ್ರೀ ಗಂಗಾಧರ ಪೂಜಾರಿ ಹಾಗೂ ಕೊಯ್ಯೂರು ಅರಣ್ಯ ರಕ್ಷಕರಾದ ಶ್ರೀ ಜಗದೀಶ್ ಇವರು ಉಪಸ್ಥಿತರಿದ್ದರು…

ಕಾರ್ಯಕ್ರಮವನ್ನ ಶ್ರೀ ರಮೇಶ್ ಏನ್. ಇವರು ಸ್ವಾಗತಿಸಿ /ನಿರೂಪಣೆಮಾಡಿದರು ನೇಮಿಚಂದ್ರ ಇವರು ಅಭಿನಂದಿಸಿದರು… ಈ ಕಾರ್ಯಕ್ರಮದ್ಲಲಿ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ರಿ. ಇದರ ಸದಸ್ಯರು ಮತ್ತು ಪದಾಧಿಕಾರಿಗಳು ಮತ್ತು ಊರಿನ ಹಿರಿಯರು ಭಾಗವಹಿಸಿದರು… ಅಲೆಕ್ಕಿ ಮತ್ತು ಎರ್ಮಾಲ ಪರಿಸರದಲ್ಲಿ ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ 150 ವಿವಿಧ ಬಗೆಯ ಗಿಡಗಳನ್ನು ನೆಡಲಾಯಿತು…

Related post

Leave a Reply

Your email address will not be published. Required fields are marked *

error: Content is protected !!