ಗುರುವಾಯನಕೆರೆ: ಗುರುವಾಯನಕೆರೆಯಿಂದ ಲಾಯಿಲ(ಬೆಳ್ತಂಗಡಿ)ವರೆಗಿನ ರಾಷ್ಟ್ರೀಯ ಹೆದ್ದಾರಿಯ ಮಾರ್ಗದ ಗುಂಡಿಗಳನ್ನು ಮುಚ್ಚಿಸಿ ಸರಿಪಡಿಸುವಂತೆ ಸೆ.10ರಂದು ಗುರುವಾಯನಕೆರೆ ಬಂಟರ ಭವನ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನು ಮಾಡಲಾಯಿತು. ಮೂರು ದಿನಗೊಳಗಾಗಿ ರಾಷ್ಟ್ರೀಯ ಹೆದ್ದಾರಿಯ ಮಾರ್ಗದ ಗುಂಡಿಗಳನ್ನು ಸರಿಪಡಿಸದೇ ಇದ್ದಲ್ಲಿ ಇಂದು ಅನಿರ್ಧಿಷ್ಟಾವಧಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುವುದಾಗಿ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲ ಇಂಜಿನಿಯರ್ ಗೆ ಬೆಳ್ತಂಗಡಿ ದ್ವಾರಕ ಮೋಟಾರ್ ಡ್ರ್ಐವಿಂಗ್ ಸ್ಕೂಲ್ ಮಾಲಕ ಯಶವಂತ ಆರ್ ಬಾಳಿಗ ಪತ್ರ ಬರೆದಿದ್ದರು ಅದರಂತೆ ಸೆ.10ರಂದು […]
ಬಂದಾರು : ಜಲ ಸಂಪನ್ಮೂಲ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಎಂ. ಕಾರಜೋಳ ಅವರು ಸೆ.1ರಂದು ಬಂದಾರು ಗ್ರಾಮದ ಮೊಗೆರಡ್ಕದಲ್ಲಿ ರೂ. 240 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆ ಸಹಿತ ಆಣೆಕಟ್ಟು ನಿಮಾ೯ಣದ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಶಾಸಕ ಹರೀಶ್ ಪೂಂಜ, ಬಂದಾರು ಗ್ರಾಮ.ಪಂಚಾಯತ್ ಅಧ್ಯಕ್ಷ ಪರಮೇಶ್ವರಿ ಕೆ.ಗೌಡ, ಸದಸ್ಯರಾದ ಬಾಲಕೃಷ್ಣ ಗೌಡ, ಶಿವ ಗೌಡ, ಜಗದೀಶ ಕೊಂಬೇಡಿ, ಮಂಜುಶ್ರೀ, ಶಿವಪ್ರಸಾದ್ ಪಿಡಿಒ ಮೋಹನ್ ಬಂಗೇರ ಹಾಗೂ […]Read More
ಹತ್ಯಡ್ಕ: ಹತ್ಯಡ್ಕ ಗ್ರಾಮದ ಸುದೇಗಂಡಿ ಎಂಬಲ್ಲಿ ರಸ್ತೆಯು ಗುಂಡಿ ಗುರುಪಾಗಿದ್ದು ಹಲವಾರು ದ್ವಿಚಕ್ರ ಸವಾರರು ಅಪಘಾತಕ್ಕೀಡಾಗುವ ಘಟನೆಗಳು ಸಂಭವಿಸುತ್ತಿತ್ತು. ಮಳೆಗಾಲದಲ್ಲಂತೂ ದ್ವಿಚಕ್ರ ವಾಹನ ಸವಾರರಿಗೆ ಆ ಜಾರುವ ರಸ್ತೆಯಲ್ಲಿ ಸಾಗುವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ವಾಹನ ಸವಾರರು, ಪಾದಾಚಾರಿಗಳ ಕಷ್ಟಗಳನ್ನು ಅರಿತ ಕಪಿಲ ಕೇಸರಿ ಯುವಕ ಮಂಡಲದ ಕಾರ್ಯಕರ್ತರು ರಸ್ತೆಗೆ ಚರಳು ಮಣ್ಣು ಹಾಕಿ ತಾತ್ಕಾಲಿಕವಾಗಿ ಸುಗಮ ಪ್ರಯಾಣಕ್ಕೆ ದಾರಿ ಮಾಡಿಕೊಡಲಾಯಿತು. ಇನ್ನೂ ಈ ರಸ್ತೆಗೆ ಮಾಜಿ ಗ್ರಾ.ಪಂ ಸದಸ್ಯರಾದ ರೇವತಿ ತಾಮನ್ಕರ್ ಇವರು ರಸ್ತೆಗೆ […]Read More
ಗೇರುಕಟ್ಟೆ : ಇಲ್ಲಿಯ ಆಟೋ ರಿಕ್ಷಾ ನಿಲ್ದಾಣದ ಪಕ್ಕದಲ್ಲಿ ವಿದ್ಯುತ್ ಕಂಬಕ್ಕೆ ಪೂರೈಕೆ ಮಾಡಲು ಅಳವಡಿಸಿದ ತಂತಿಗಳು ಆಪಾಯಕಾರಿ ಪರಿಸ್ಥಿತಿಯಲ್ಲಿ ಇದೆ. ಇಲ್ಲಿ ಸಾರ್ವಜನಿಕ ಬಸ್ಸ್ ತಂಗುದಾಣವಾಗಿದ್ದು, ಶಾಲಾ ಕಾಲೇಜುಗಳಿಗೆ ಬರುವ ನೂರಾರು ಮಕ್ಕಳು ವಾಹನಗಳಿಗೆ ಹತ್ತುವಾಗ,ಇಳಿಯುವಾಗ ಅಪ್ಪಿ,ತಪ್ಪಿ ಕೈ ತಾಗಿದರೆ ಸಾವು ನಿಶ್ಚಿತ. ಆದುದರಿಂದ ಕಂಬಗಳಿರುವ ತಂತಿಗಳಿಗೆ ಭದ್ರವಾದ ಪೆಟ್ಟಿಗೆ ಅಳವಡಿಸ ಬೇಕು. ಈ ಹಿಂದೆ ಹಲವಾರು ಬಾರಿ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಮುಂದೆ ಆಗುವ ಅನಾಹುತವನ್ನು ತಪ್ಪಿಸುವುದಕ್ಕಾಗಿ […]Read More
ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪುಷ್ಪಗಿರಿ ಬೆಟ್ಟದ ಸಾಲುಗಳಲ್ಲಿ ಜಲಸ್ಫೋಟವಾಗಿ ದಕ್ಷಿಣಕನ್ನಡ ಜಿಲ್ಲೆಯ ಕಟ್ಟಕಡೆಯ ಗ್ರಾಮಗಳಾದ ಸುಳ್ಯ ಮತ್ತು ಕಡಬ ತಾಲೂಕಿನ ಕಲ್ಮಕಾರು, ಕೊಲ್ಲಮೊಗರು, ಬಾಳುಗೋಡು, ಹರಿಹರ, ಐನೇಕಿದು ಗ್ರಾಮಗಳಲ್ಲಿನ ಜನರ ಪಾಡು ತೀರ ಕಷ್ಟಕರವಾಗಿದೆ. ಹಳ್ಳಕೊಳ್ಳಗಳ ಭೋರ್ಗರೆತಕ್ಕೆ ತುತ್ತಾಗಿ ಅನೇಕ ಸೇತುವೆ, ಕಿರುಸೇತುವೆಗಳು ಮನೆಗಳು ಕೊಚ್ಚಿಹೋಗಿ ಗ್ರಾಮವಾಸಿಗಳಿಂದ ಹೊರಜಗತ್ತು ಸಂಪರ್ಕವೇ ಕಡಿದುಕೊಂಡಿದ್ದ ಸಂಧರ್ಭದಲ್ಲಿ “ಸೇವಾ ಹೀ ಸಂಘಟನ್” ಅನ್ನೋ ಧ್ಯೇಯವಿಟ್ಟು ಕಳೆದೊಂದು ವಾರದಿಂದ ರಾತ್ರಿ ಹಗಲು ಎನ್ನದೇ ಯಾವುದೇ ಪ್ರತಿಫ಼ಲಾಪೇಕ್ಷೆ ಇಲ್ಲದೇ […]Read More
ಉಡುಪಿ ವಿಧಾನಸಭಾ ಕ್ಷೇತ್ರದ ನಗರಸಭಾ ವ್ಯಾಪ್ತಿಯ ಕಲ್ಮಾಡಿ ವಾರ್ಡಿನ ಕಲ್ಮಾಡಿ ಚರ್ಚ್ ಬಳಿ ರಸ್ತೆ ಅಭಿವೃದ್ಧಿಗೆ ಉಡುಪಿ ಶಾಸಕ ರಘುಪತಿ ಭಟ್ ಇವರ ಶಿಫಾರಸ್ಸಿನ ಮೇರೆಗೆ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 4 ಲಕ್ಷ ರೂಪಾಯಿ ಮಂಜೂರಾಗಿದ್ದು, ರಸ್ತೆ ಅಭಿವೃದ್ಧಿ ಪಡಿಸುವಲ್ಲಿ ಖಾಸಗಿ ಜಾಗದ ಸಮಸ್ಯೆ ಉಂಟಾಗುತ್ತಿದ್ದು, ಸ್ಥಳೀಯರ ಬೇಡಿಕೆಯಂತೆ ಇಂದು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಶೀಘ್ರದಲ್ಲಿ ಸರ್ವೆ ನಡೆಸಿ ಖಾಸಗಿ ಜಾಗದ ಗಡಿ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ನಗರ ಸಭೆಯ ಸದಸ್ಯರಾದ […]Read More
ಕಲ್ಮಂಜ: ಕಲ್ಮಂಜ ಗ್ರಾಮದ ಅಜಿತ್ ನಗರ ಎಂಬಲ್ಲಿ ದಿನೇ ದಿನೇ ಸಾಕು ನಾಯಿಗಳು ಸಾವನ್ನಪ್ಪುತ್ತಿದ್ದು, ಯಾರೋ ಕಿಡಿಗೇಡಿಗಳು ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಆಹಾರ ಹುಡುಕುತ್ತಾ ರಸ್ತೆಗೆ ಬರುವ ಸಾಕುನಾಯಿಗಳು , ಮನೆಗೆ ಬಾರದೆ ಸಾವನ್ನಪ್ಪುತ್ತಿರುವುದು ಅಲ್ಲಿಯ ಸ್ಥಳಿಯರಲ್ಲಿ ಸಂಶಯ ಮೂಡಿದ್ದು , ತನಿಖೆ ನಡೆಸುವಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹತ್ತು ದಿನಗಳಿಂದ ನಡೆಯುತ್ತಿರುವ ಈ ಘಟನೆಯಲ್ಲಿ ಒಟ್ಟು 7 ಸಾಕು ನಾಯಿಗಳು ಜೀವ ಕಳೆದುಕೊಂಡಿದೆ. ಇನ್ನೂ ಇದೇ ರೀತಿಯಾಗಿ ಮುಂದುವರೆದರೆ ಇನ್ನೂ ಹಲವಾರು ಸಾಕು ನಾಯಿಗಳು […]Read More
ಬೆಳಾಲು: ಬೆಳಾಲು ಗ್ರಾಮದ ದೊಂಪದಪಲ್ಕೆ-ಪಿಜಕ್ಕಲ ರಸ್ತೆಯ ಭೀಮಂಡೆ ಎಂಬಲ್ಲಿ ರಸ್ತೆ ಬದಿಯಲ್ಲಿ ಇಂದು ಸಂಜೆ ಕಾಡುಕೋಣ ಕಾಣಿಸಿಕೊಂಡಿದ್ದು ಅಲ್ಲಿಯ ಸ್ಥಳೀಯ ರೋರ್ವರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಆ ರಸ್ತೆಯಿಂದಾಗಿ ವಾಹನ ಚಾಲಕರು, ಪಾದಾಚಾರಿಗಳು ಸಂಚರಿಸಲು ಭಯ ಪಡುತ್ತಿದ್ದಾರೆ. ಹಲವಾರು ಭಾರಿ ಈ ಭಾಗದಲ್ಲಿ ಒಂಟಿ ಕಾಡುಕೋಣ ಕಾಣಿಸಿಕೊಂಡಿದ್ದು, ಈ ಭಾಗದಲ್ಲಿ ಸಂಚರಿಸುವಾಗ ಎಚ್ಚರ ವಹಿಸಬೇಕಾಗಿದೆ.Read More
ಸೋಣಂದೂರು : ಸೋಣಂದೂರು ಗ್ರಾಮದ ಮುಂಡಾಡಿ ಕಿನ್ಯದಪಲ್ಕೆ ಎಂಬಲ್ಲಿನ ಕುಸುಮಾವತಿಯವರ ವಾಸದ ಮನೆಯು ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಕುಸಿದು ಬಿದ್ದು ಸಂಪೂರ್ಣ ಹಾನಿಗೊಂಡಿದ್ದು ,ಈ ವಿಷಯ ತಿಳಿದ ಶಾಸಕರು ತಕ್ಷಣವೇ ಸ್ಪಂದಿಸಿ ಆಪ್ತರ ಮುಖೇನ ಆರ್ಥಿಕ ನೆರವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೇಬಿ ಸುಸ್ಸಾನ, ಉಪಾಧ್ಯಕ್ಷರಾದ ದಿನೇಶ್ ಕರ್ಕೇರ, ಗ್ರಾಮ ಕರಣಿಕರಾದ ಉಮೇಶ್, ಗ್ರಾಮ ಸಹಾಯಕರಾದ ಗುಣಕರ ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಸರ್ಕಾರದಿಂದ […]Read More