• October 16, 2024

ಕಲ್ಮಂಜ: ಹತ್ತು ದಿನದಲ್ಲಿ 7 ನಾಯಿಗಳ ಮಾರಣಹೋಮ: ನರಳಿ ನರಳಿ ಜೀವ ಕಳೆದುಕೊಳ್ಳುತ್ತಿರುವ ಸಾಕು ನಾಯಿಗಳು

 ಕಲ್ಮಂಜ: ಹತ್ತು ದಿನದಲ್ಲಿ 7 ನಾಯಿಗಳ ಮಾರಣಹೋಮ: ನರಳಿ ನರಳಿ ಜೀವ ಕಳೆದುಕೊಳ್ಳುತ್ತಿರುವ ಸಾಕು ನಾಯಿಗಳು

 

ಕಲ್ಮಂಜ: ಕಲ್ಮಂಜ ಗ್ರಾಮದ ಅಜಿತ್ ನಗರ ಎಂಬಲ್ಲಿ ದಿನೇ ದಿನೇ ಸಾಕು ನಾಯಿಗಳು ಸಾವನ್ನಪ್ಪುತ್ತಿದ್ದು, ಯಾರೋ ಕಿಡಿಗೇಡಿಗಳು ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ.

ಆಹಾರ ಹುಡುಕುತ್ತಾ ರಸ್ತೆಗೆ ಬರುವ ಸಾಕುನಾಯಿಗಳು , ಮನೆಗೆ ಬಾರದೆ ಸಾವನ್ನಪ್ಪುತ್ತಿರುವುದು ಅಲ್ಲಿಯ ಸ್ಥಳಿಯರಲ್ಲಿ ಸಂಶಯ ಮೂಡಿದ್ದು , ತನಿಖೆ ನಡೆಸುವಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹತ್ತು ದಿನಗಳಿಂದ ನಡೆಯುತ್ತಿರುವ ಈ ಘಟನೆಯಲ್ಲಿ ಒಟ್ಟು 7 ಸಾಕು ನಾಯಿಗಳು ಜೀವ ಕಳೆದುಕೊಂಡಿದೆ. ಇನ್ನೂ ಇದೇ ರೀತಿಯಾಗಿ ಮುಂದುವರೆದರೆ ಇನ್ನೂ ಹಲವಾರು ಸಾಕು ನಾಯಿಗಳು ಬಲಿಯಾಗುವ ಸಾಧ್ಯತೆ ಇದ್ದು, ಈ ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ಪತ್ತೆಹಚ್ಚಬೇಕು ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!