• June 13, 2024

ಸುದೇಗಂಡಿ ರಸ್ತೆಗಳಲ್ಲಿ ಹೊಂಡವೋ ಹೊಂಡ:ದ್ವಿಚಕ್ರ ವಾಹನ ಸವಾರರ ಪರದಾಟ:ಚರಳು, ಮಣ್ಣುಗಳನ್ನು ಹಾಕಿ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಟ್ಟ ಕಪಿಲ ಕೇಸರಿ ಯುವಕ ಮಂಡಲ

 ಸುದೇಗಂಡಿ ರಸ್ತೆಗಳಲ್ಲಿ ಹೊಂಡವೋ ಹೊಂಡ:ದ್ವಿಚಕ್ರ ವಾಹನ ಸವಾರರ ಪರದಾಟ:ಚರಳು, ಮಣ್ಣುಗಳನ್ನು ಹಾಕಿ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಟ್ಟ ಕಪಿಲ ಕೇಸರಿ ಯುವಕ ಮಂಡಲ

ಹತ್ಯಡ್ಕ: ಹತ್ಯಡ್ಕ ಗ್ರಾಮದ ಸುದೇಗಂಡಿ ಎಂಬಲ್ಲಿ ರಸ್ತೆಯು ಗುಂಡಿ ಗುರುಪಾಗಿದ್ದು ಹಲವಾರು ದ್ವಿಚಕ್ರ ಸವಾರರು ಅಪಘಾತಕ್ಕೀಡಾಗುವ ಘಟನೆಗಳು ಸಂಭವಿಸುತ್ತಿತ್ತು. ಮಳೆಗಾಲದಲ್ಲಂತೂ ದ್ವಿಚಕ್ರ ವಾಹನ ಸವಾರರಿಗೆ ಆ ಜಾರುವ ರಸ್ತೆಯಲ್ಲಿ ಸಾಗುವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ವಾಹನ ಸವಾರರು, ಪಾದಾಚಾರಿಗಳ ಕಷ್ಟಗಳನ್ನು ಅರಿತ ಕಪಿಲ ಕೇಸರಿ ಯುವಕ ಮಂಡಲದ ಕಾರ್ಯಕರ್ತರು ರಸ್ತೆಗೆ ಚರಳು ಮಣ್ಣು ಹಾಕಿ ತಾತ್ಕಾಲಿಕವಾಗಿ ಸುಗಮ ಪ್ರಯಾಣಕ್ಕೆ ದಾರಿ ಮಾಡಿಕೊಡಲಾಯಿತು.

ಇನ್ನೂ ಈ ರಸ್ತೆಗೆ ಮಾಜಿ ಗ್ರಾ.ಪಂ ಸದಸ್ಯರಾದ ರೇವತಿ ತಾಮನ್ಕರ್ ಇವರು ರಸ್ತೆಗೆ ಮಣ್ಣಿನ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಕಪಿಲ ಕೇಸರಿ ಯುವಕ ಮಂಡಲದ ಸದಸ್ಯರು ಭಾಗಿಯಾಗಿದ್ದರು.

Related post

Leave a Reply

Your email address will not be published. Required fields are marked *

error: Content is protected !!