ಬೆಳಾಲು: ರಸ್ತೆಯಲ್ಲಿ ತಿರುಗಾಡುತ್ತಿರುವ ಕಾಡುಕೋಣ:ಗ್ರಾಮಸ್ಥರಿಗೆ ಆತಂಕ
![ಬೆಳಾಲು: ರಸ್ತೆಯಲ್ಲಿ ತಿರುಗಾಡುತ್ತಿರುವ ಕಾಡುಕೋಣ:ಗ್ರಾಮಸ್ಥರಿಗೆ ಆತಂಕ](https://namanachannel.in/wp-content/uploads/2022/07/IMG_20220721_232835-850x552.jpg)
ಬೆಳಾಲು: ಬೆಳಾಲು ಗ್ರಾಮದ ದೊಂಪದಪಲ್ಕೆ-ಪಿಜಕ್ಕಲ ರಸ್ತೆಯ ಭೀಮಂಡೆ ಎಂಬಲ್ಲಿ ರಸ್ತೆ ಬದಿಯಲ್ಲಿ ಇಂದು ಸಂಜೆ ಕಾಡುಕೋಣ ಕಾಣಿಸಿಕೊಂಡಿದ್ದು ಅಲ್ಲಿಯ ಸ್ಥಳೀಯ ರೋರ್ವರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಆ ರಸ್ತೆಯಿಂದಾಗಿ ವಾಹನ ಚಾಲಕರು, ಪಾದಾಚಾರಿಗಳು ಸಂಚರಿಸಲು ಭಯ ಪಡುತ್ತಿದ್ದಾರೆ.
ಹಲವಾರು ಭಾರಿ ಈ ಭಾಗದಲ್ಲಿ ಒಂಟಿ ಕಾಡುಕೋಣ ಕಾಣಿಸಿಕೊಂಡಿದ್ದು, ಈ ಭಾಗದಲ್ಲಿ ಸಂಚರಿಸುವಾಗ ಎಚ್ಚರ ವಹಿಸಬೇಕಾಗಿದೆ.