ಸಾಧಕರ ಸಮಾವೇಶದ ಮಾಹಿತಿಯನ್ನು ಒಳಗೊಂಡ “ಮೋದಿಜಿಯವರ ಸಮರ್ಥ ಆಡಳಿತದ 8ನೇ ವರ್ಷದ ಸಂಭ್ರಮಾಚರಣೆ @ ಬೆಳ್ತಂಗಡಿ” ಎನ್ನುವ ಕಿರು ಹೊತ್ತಗೆಯ ಪ್ರತಿ ವಿತರಣೆ

ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿ 8 ವರ್ಷಗಳ ಸಮರ್ಥ ಆಡಳಿತವನ್ನು ಪೂರೈಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ, ಬೆಳ್ತಂಗಡಿ ಮಂಡಲದಲ್ಲಿ ನಡೆದ ‘ಸೇವೆ’ ‘ಸುಶಾಸನ’ ‘ ಬಡವರ ಕಲ್ಯಾಣ’ ಎಂಬ ವಿಶಿಷ್ಟ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಸಾಧಕರ ಸಮಾವೇಶದ ಮಾಹಿತಿಯನ್ನು ಒಳಗೊಂಡ “ಮೋದಿಜಿಯವರ ಸಮರ್ಥ ಆಡಳಿತದ 8ನೇ ವರ್ಷದ ಸಂಭ್ರಮಾಚರಣೆ @ ಬೆಳ್ತಂಗಡಿ” ಎನ್ನುವ ಕಿರು ಹೊತ್ತಗೆಯನ್ನು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಸಂತೋಷ್ ಜೀ ಅವರನ್ನು ಭೇಟಿಯಾಗಿ ನೀಡಲಾಯಿತು, ಜೊತೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಪ್ರಹ್ಲಾದ ಜೋಶಿಯವರಿಗೆ,ಬಿಜೆಪಿ ರಾಜ್ಯ ಅಧ್ಯಕ್ಷರೂ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರಿಗೆ, ಕೇಂದ್ರ ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರಿಗೆ,ಕೇಂದ್ರ ಕೃಷಿ ಮತ್ತು ತೋಟಗಾರಿಕೆ ರಾಜ್ಯ ಸಚಿವರಾದ ಶ್ರೀ ಶೋಭಾ ಕರಂದ್ಲಾಜೆ ಅವರಿಗೆ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಶ್ರೀ ಭಗವಂತ ಖೂಭಾ ಅವರಿಗೆ ” ಮೋದಿಜಿಯವರ ಸಮರ್ಥ ಆಡಳಿತದ 8ನೇ ವರ್ಷದ ಸಂಭ್ರಮಾಚರಣೆ @ ಬೆಳ್ತಂಗಡಿ” ಕಾರ್ಯಕ್ರಮದ ಹೊತ್ತಗೆಯ ಪ್ರತಿಗಳನ್ನು ನೀಡಲಾಯಿತು.ಈ ಸಂಧರ್ಬದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷರಾದ ಶ್ರೀ ಜಯಂತ್ ಕೋಟ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗಣೇಶ್ ಗೌಡ ನವೂರ್, ಶ್ರೀ ಶ್ರೀನಿವಾಸ ರಾವ್ ಧರ್ಮಸ್ಥಳ ಜೊತೆಗಿದ್ದರು.