ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲಿನಲ್ಲಿ ಉಚಿತ ಯೋಗ ಶಿಬಿರ ಕಾರ್ಯಕ್ರಮ
ಬೆಳಾಲು : ಜೂ 09 ಆಯುಷ್ ಮಂತ್ರಾಲಯ ಭಾರತ ಸರಕಾರ ನವದೆಹಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಉಜಿರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಧರ್ಮಸ್ಥಳ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇವರ ಸಹಯೋಗದೊಂದಿಗೆ 10ನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲು ಇಲ್ಲಿ ಉಚಿತ ಯೋಗ ಶಿಬಿರ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ಅಧ್ಯಕ್ಷರು ಗ್ರಾಮ ಪಂಚಾಯತ್ ಬೆಳಾಲು ಇವರು ನೆರವೇರಿಸಿದರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್ ಗೌಡ ವಕೀಲರು ಶ್ರೀಸೌಧ ಬೆಳಾಲು ಹಾಗೂ ಬೆಳಾಲು ಗ್ರಾಮ ಪಂಚಾಯಿತಿನ ಸದಸ್ಯರಾದ ಸತೀಶ್ ಎಳ್ಳುಗದ್ದೆ ಇವರು ಭಾಗವಹಿಸಿದರು.
ವಿದ್ಯಾರ್ಥಿ ಯೋಗ ತರಬೇತಿದಾರರಾದ ವಿಖ್ಯಾತ್ ಎಂ.ಜಿ ಮಣಿಕಳ, ಅಭಿಜ್ಞಾ ಉರೆಜ್ಜ ಭಾಗವಹಿಸಿದರು ಕಾರ್ಯಕ್ರಮವನ್ನು ಮೋಹನ್ ಗೌಡ ಉರೆಜ್ಜ ಪ್ರಭಾರ ಪ್ರಾಂಶುಪಾಲರು ಪಿಯು ಕಾಲೇಜ್ ಕೊಯ್ಯೂರು ನಿರೂಪಿಸಿ,ಗ್ರೀಷ್ಮ ಉರೆಜ್ಜ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.