ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಹೆಸರಿನಲ್ಲಿ ನಕಲಿ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದ್ದು, ಈ ಬಗ್ಗೆ ಸಂದೇಶ ಸೃಷ್ಟಿ ಮಾಡಿದ ಮತ್ತು ಅದನ್ನು ಜಾಲತಾಣಗಳಲ್ಲಿ ಶೇರ್ ಮಾಡಿದ ವ್ಯಕ್ತಿಗಳ ವಿರುದ್ಧ ಇಂದು ಬೆಳ್ತಂಗಡಿ ನಗರ ಠಾಣೆಯಲ್ಲಿ ಶಾಸಕರ ಪರವಾಗಿ ದೂರು ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಪದಾಧಿಕಾರಿಗಳು, ತಾಲೂಕು ಯುವಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ದೂರು ಪಡೆದುಕೊಂಡ ಪೊಲೀಸರು ಸೂಕ್ತ ಕಾನೂನುಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಬೆಳ್ತಂಗಡಿ: ಇಂದು ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಬೆಳ್ತಂಗಡಿ ತಾಲೂಕಿನ ಹಲವು ಕಡೆಗಳಲ್ಲಿ ಹಾನಿಯಾಗಿದೆ. ಬೆಳ್ತಂಗಡಿ ತಾಲೂಕಿನ ಚರ್ಚ್ ರೋಡ್ ಬಳಿ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದಿದ್ದು ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು, ಪಾದಾಚಾರಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಎಲೆಕ್ಷನ್ ಗೆ ಹಾಕಿದ್ದ ಶಾಮಿಯಾನ ರಸ್ತೆಗೆ ಬಿದ್ದಿದ್ದು ವಾಹನ ಸವಾರರು ಪರದಾಡುವಂತಾಯಿತು.Read More
ಗುರುವಾಯನಕೆರೆ: ಧರ್ಮಸ್ಥಳದಿಂದ ಮಂಗಳೂರಿಗೆ ಪ್ರಯಾಣ ಬೆಳಸುವ ಪ್ರಯಾಣಕರು ಸರಿಯಾದ ಸಮಯಕ್ಕೆ ಸರ್ಕಾರಿ ಬಸ್ ಬಾರದೇ ಇದ್ದ ಪರಿಣಾಮ ಗುರುವಾಯನಕೆರೆಯಲ್ಲಿ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ಮೇ.3 ರಂದು ಬೆಳಗ್ಗೆ ನಿರ್ಮಾಣವಾಗಿದೆ. ಬೆಳಗ್ಗೆ 7.30 ರಿಂದ 9.45 ರವರೆಗೂ ಬಸ್ ಬಾರದೇ ಇದ್ದುದರಿಂದ ಕಚೇರಿಗಳಿಗೆ, ಇನ್ನಿತರ ಕೆಲಸಕಾರ್ಯಗಳಿಗೆ ಅಚಣೆಯುಂಟಾಗಿದೆ. ಸುಮಾರು 3 ಗಂಟೆಗಳ ಕಾಲ ಬಸ್ ಗಾಗಿ ಕಾದು ಕೊನೆಗೆ ಆಟೋದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಇದೀಗ ಸುಮಾರು 3 ವರೆ ಗಂಟೆಗಳ ಕಾಲ ಕಳೆದ ನಂತರ ಧರ್ಮಸ್ಥಳಕ್ಕೆ ಮಂಗಳೂರಿಗೆ […]Read More
ಕಳೆಂಜ: ಕಳೆಂಜ ಗ್ರಾಮದ ಕಾಯರ್ತಡ್ಕ ಪಂಜಾಲು, ಕುಡ್ಪಾರು ಸಮೀಪದಲ್ಲಿರುವ ನದಿಗೆ ಯಾರೋ ಕಿಡಿಗೇಡಿಗಳು ವಿಷ ಹಾಕಿದ್ದು, ನೂರಾರು ಜಲಚರಗಳು ಸತ್ತಿರುವ ಘಟನೆ ಏ.26 ರಂದು ವರದಿಯಾಗಿದೆ. ಅಲ್ಲಿಯ ಸ್ಥಳೀಯ ನಿವಾಸಿಗಳು ಅದೇ ನೀರನ್ನು ಕುಡಿಯಲು, ಸ್ನಾನಕ್ಕಾಗಿ ಉಪಯೋಗಿಸುವುದರಿಂದ ಅಲ್ಲಿಯ ಸ್ಥಳೀಯರಲ್ಲಿ ಆತಂಕ ಮೂಡಿದೆ. ಅಲ್ಲಿಯ ನಿವಾಸಿಗಳು ನೀರಿಗಾಗಿ ಆ ನದಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಯಾರು ಈ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿಲ್ಲ.ಮುಂದಿನ ಸೂಕ್ತ ಕ್ರಮ ಕೈಗೊಳ್ಳುವಂತೆ ಕಳೆಂಜ ಗ್ರಾಮದ ಕಾಯರ್ತಡ್ಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, […]Read More
ಮಿತ್ತಬಾಗಿಲು: ತಲೆಗೆ ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿರುವ ಯುವಕನಿಗೆ ಬೇಕಾಗಿದೆ ನೆರವಿನ
ಮಿತ್ತಬಾಗಿಲು: ಮಿತ್ತಬಾಗಿಲು ಗ್ರಾಮದ ಕುಕ್ಕಾವು ನಿವಾಸಿ ಲಕ್ಷ್ಮಣ ಕುಂಬಾರ ಇವರ ಮಗನಾದ ಹರೀಶ್ ಇವರು ಮನೆಯ ಮಹಡಿಯಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿ ಇದೀಗ ಮಂಗಳೂರಿನ ಫಸ್ಟ್ ನೀರೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರ ಚೇತರಿಕೆಗೆ ಸುಮಾರು 6ಲಕ್ಷಕಿಂತ ಹೆಚ್ಚಿನ ಖರ್ಚು ಆಗಬಹುದು ಎಂಬುದಾಗಿ ವೈದ್ಯರು ತಿಳಿಸಿರುತ್ತಾರೆ, ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸಲು ಆಗದೆ ಇವರ ಕುಟುಂಬ ಕಂಗಾಲಾಗಿದೆ ಇವರ ನೋವಿಗೆ ಸ್ಪಂದಿಸಿ ದಾನಿಗಳು, ಸಂಘ ಸಂಸ್ಥೆಗಳು ಸಹಾಯ ನೀಡಬೇಕಾಗಿದೆ. ಸಹಾಯದ […]Read More
ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಹಾರ್ಜಡ್ಡು ನಿವಾಸಿಪ್ರಭು ರವರ ಪತ್ನಿ ಅಶ್ವಿನಿ ಇವರು ವಾರಗಳ ಹಿಂದೆ ಹೆರಿಗೆಗೆಂದು ಕಾರ್ಕಳ ದ ಸರಕಾರಿ ಆಸ್ಪತ್ರೆ ಯಲ್ಲಿ ದಾಖಲಾಗಿ ಅವಳಿ ಮಕ್ಕಳು ಜನಿಸಿರುತ್ತವೆ. ಹೆರಿಗೆಯ ಸಂದರ್ಭದಲ್ಲಿ ಉಂಟಾದ ಸಮಸ್ಯೆ ಯಿಂದ ಕಿಡ್ನಿ ವೈಫಲ್ಯ ಗೊಂಡು ಹೃದಯದ ತೊಂದರೆ ಹಾಗೂ ಫಿಟ್ಸ್ ಗೆ ತುತ್ತಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಮಂಗಳಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರನ್ನು ಪರಿಶೀಲಿಸಿದ ವೈದ್ಯರು ಚಿಕಿತ್ಸಾ ವೆಚ್ಚ ಕ್ಕೆ ಸುಮಾರು 10 ಲಕ್ಷ ರೂಪಾಯಿಗಳು […]Read More
ಬೆಳಾಲು:ತೀರ ಬಡತನದಲ್ಲಿರುವ ಲಕ್ಷ್ಮಿ ಎಂಬ ಮಹಿಳೆಯ ನೆರವಿಗೆ ಮುಂದಾದ ಬೆಳ್ತಂಗಡಿ ತಾಲೂಕು, ಮರಾಟಿ
ಬೆಳಾಲು: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ದಿವಂಗತ ಬೊಮ್ಮಣ್ಣ ನಾಯ್ಕ ಬೊಟ್ಟು ಮನೆ ಇವರ ಮಗಳಾದ ಲಕ್ಷ್ಮಿ ಎಂಬವರ ಮನೆಗೆ ಬೆಳ್ತಂಗಡಿ ತಾಲೂಕು, ಮರಾಟಿ ಸಮಾಜ ಸೇವಾ ಸಂಘ (ರಿ.) ಉಜಿರೆ ಬೆಳ್ತಂಗಡಿ ಹಾಗೂ ಮಹಮ್ಮಾಯಿ ಮರಾಟಿ ಸಂರಕ್ಷಣ ಸಂಘ ಬೆಳಾಲು ಇದರ ಪ್ರಮುಖ ಪದಾಧಿಕಾರಿಗಳು ಭೇಟಿ ನೀಡಿ ಲಕ್ಷ್ಮಿ ಅವರ ಮನೆಯ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿ ಸಾಂತ್ವನ ಹೇಳಿ ಮನೆಯ ಮೇಲ್ಚಾವಣಿ ಯನ್ನು ಕೂಡಲೇ ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘ ಮತ್ತು […]Read More
ಧರ್ಮಸ್ಥಳದಿಂದ ಕೊಟ್ಟಿಗೆ ಹಾರದ ಕಡೆಗೆ ಸಾಗುತ್ತಿದ್ದ ಪ್ರವಾಸಿಗರ ಕಾರನ್ನು ಪೊಲೀಸರು ತಪಾಸಣೆ ಮಾಡುವ ವೇಳೆ 1 ಲಕ್ಷ ರೂಪಾಯಿ ಪತ್ತೆಯಾಗಿದ್ದು ಅದನ್ನು ವಶ ಪಡಿಸಿಕೊಂಡ ಘಟನೆ ಮಾ.31 ರಂದು ನಡೆದಿದೆ. ದಾಖಲೆಯಿಲ್ಲದೆ 1 ಲಕ್ಷ ರೂಪಾಯಿಯನ್ನು ಸಾಗಿಸುತ್ತಿದ್ದ ಮಾಹಿತಿ ತಿಳಿದ ಪೊಲೀಸರು ಕಾರು ಹಾಗೂ ಹಣವನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣೆ ಉದ್ದೇಶಕ್ಕೆ ಹಣ ಸಾಗಿಸುವವರ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳಲಿ. ಆದರೆ ಯಾತ್ರಾಸ್ಥಳಕ್ಕೆ ಬರುವ ಪ್ರವಾಸಿಗರು ಪ್ರವಾಸ ಖರ್ಚಿಗೆ ಹಣ ಇಟ್ಟುಕೊಂಡು ಬಂದಿರುತ್ತಾರೆ ಇದನ್ನು ವಶ ಪಡಿಸಿಕೊಂಡಿರುವುದು […]Read More