• January 22, 2025

ಕಳೆಂಜ: ನದಿಯ ನೀರಿಗೆ ವಿಷ ಹಾಕಿದ ಕಿಡಿಗೇಡಿಗಳು: ನೂರಾರು ಜಲಚರಗಳ ಮಾರಣಹೋಮ

 ಕಳೆಂಜ: ನದಿಯ ನೀರಿಗೆ ವಿಷ ಹಾಕಿದ ಕಿಡಿಗೇಡಿಗಳು: ನೂರಾರು ಜಲಚರಗಳ ಮಾರಣಹೋಮ

 

ಕಳೆಂಜ: ಕಳೆಂಜ ಗ್ರಾಮದ ಕಾಯರ್ತಡ್ಕ ಪಂಜಾಲು, ಕುಡ್ಪಾರು ಸಮೀಪದಲ್ಲಿರುವ ನದಿಗೆ ಯಾರೋ ಕಿಡಿಗೇಡಿಗಳು ವಿಷ ಹಾಕಿದ್ದು, ನೂರಾರು ಜಲಚರಗಳು ಸತ್ತಿರುವ ಘಟನೆ ಏ.26 ರಂದು ವರದಿಯಾಗಿದೆ.

ಅಲ್ಲಿಯ ಸ್ಥಳೀಯ ನಿವಾಸಿಗಳು ಅದೇ ನೀರನ್ನು ಕುಡಿಯಲು, ಸ್ನಾನಕ್ಕಾಗಿ ಉಪಯೋಗಿಸುವುದರಿಂದ ಅಲ್ಲಿಯ ಸ್ಥಳೀಯರಲ್ಲಿ ಆತಂಕ ಮೂಡಿದೆ.

ಅಲ್ಲಿಯ ನಿವಾಸಿಗಳು ನೀರಿಗಾಗಿ ಆ ನದಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಯಾರು ಈ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿಲ್ಲ.
ಮುಂದಿನ ಸೂಕ್ತ ಕ್ರಮ ಕೈಗೊಳ್ಳುವಂತೆ ಕಳೆಂಜ ಗ್ರಾಮದ ಕಾಯರ್ತಡ್ಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, ಅಧ್ಯಕ್ಷರಿಗೆ ಪಂಜಾರು ಕುಡ್ಪಾರು ನಿವಾಸಿಗಳು ಮನವಿಯನ್ನು ಮಾಡಿದ್ದಾರೆ

Related post

Leave a Reply

Your email address will not be published. Required fields are marked *

error: Content is protected !!