• July 16, 2024

ದಾಖಲೆಯಿಲ್ಲದೆ 1 ಲಕ್ಷ ರೂ ಸಾಗಿಸುತ್ತಿದ್ದ ಪ್ರವಾಸಿಗರ ಕಾರು: 1 ಲಕ್ಷ ರೂ ಹಾಗೂ ಕಾರನ್ನು ವಶಪಡಿಸಿಕೊಂಡ ಪೊಲೀಸರು: ಧರ್ಮಸ್ಥಳದಿಂದಹಿಂತಿರುಗುತ್ತಿದ್ದ ವೇಳೆ ಘಟನೆ

 ದಾಖಲೆಯಿಲ್ಲದೆ 1 ಲಕ್ಷ ರೂ ಸಾಗಿಸುತ್ತಿದ್ದ ಪ್ರವಾಸಿಗರ ಕಾರು: 1 ಲಕ್ಷ ರೂ ಹಾಗೂ ಕಾರನ್ನು ವಶಪಡಿಸಿಕೊಂಡ ಪೊಲೀಸರು: ಧರ್ಮಸ್ಥಳದಿಂದಹಿಂತಿರುಗುತ್ತಿದ್ದ ವೇಳೆ ಘಟನೆ

ಧರ್ಮಸ್ಥಳದಿಂದ ಕೊಟ್ಟಿಗೆ ಹಾರದ ಕಡೆಗೆ ಸಾಗುತ್ತಿದ್ದ ಪ್ರವಾಸಿಗರ ಕಾರನ್ನು ಪೊಲೀಸರು ತಪಾಸಣೆ ಮಾಡುವ ವೇಳೆ 1 ಲಕ್ಷ ರೂಪಾಯಿ ಪತ್ತೆಯಾಗಿದ್ದು ಅದನ್ನು ವಶ ಪಡಿಸಿಕೊಂಡ ಘಟನೆ ಮಾ.31 ರಂದು ನಡೆದಿದೆ.

ದಾಖಲೆಯಿಲ್ಲದೆ 1 ಲಕ್ಷ ರೂಪಾಯಿಯನ್ನು ಸಾಗಿಸುತ್ತಿದ್ದ ಮಾಹಿತಿ ತಿಳಿದ ಪೊಲೀಸರು ಕಾರು ಹಾಗೂ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಚುನಾವಣೆ ಉದ್ದೇಶಕ್ಕೆ ಹಣ ಸಾಗಿಸುವವರ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳಲಿ. ಆದರೆ ಯಾತ್ರಾಸ್ಥಳಕ್ಕೆ ಬರುವ ಪ್ರವಾಸಿಗರು ಪ್ರವಾಸ ಖರ್ಚಿಗೆ ಹಣ ಇಟ್ಟುಕೊಂಡು ಬಂದಿರುತ್ತಾರೆ ಇದನ್ನು ವಶ ಪಡಿಸಿಕೊಂಡಿರುವುದು ಬೇಸರ ತಂದಿದೆ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!