ಬೆಳಾಲು:ತೀರ ಬಡತನದಲ್ಲಿರುವ ಲಕ್ಷ್ಮಿ ಎಂಬ ಮಹಿಳೆಯ ನೆರವಿಗೆ ಮುಂದಾದ ಬೆಳ್ತಂಗಡಿ ತಾಲೂಕು, ಮರಾಟಿ ಸಮಾಜ ಸೇವಾ ಸಂಘ (ರಿ.) ಉಜಿರೆ ಬೆಳ್ತಂಗಡಿ ಹಾಗೂ ಮಹಮ್ಮಾಯಿ ಮರಾಟಿ ಸಂರಕ್ಷಣ ಸಂಘ ಬೆಳಾಲು
ಬೆಳಾಲು: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ದಿವಂಗತ ಬೊಮ್ಮಣ್ಣ ನಾಯ್ಕ ಬೊಟ್ಟು ಮನೆ ಇವರ ಮಗಳಾದ ಲಕ್ಷ್ಮಿ ಎಂಬವರ ಮನೆಗೆ ಬೆಳ್ತಂಗಡಿ ತಾಲೂಕು, ಮರಾಟಿ ಸಮಾಜ ಸೇವಾ ಸಂಘ (ರಿ.) ಉಜಿರೆ ಬೆಳ್ತಂಗಡಿ ಹಾಗೂ ಮಹಮ್ಮಾಯಿ ಮರಾಟಿ ಸಂರಕ್ಷಣ ಸಂಘ ಬೆಳಾಲು ಇದರ ಪ್ರಮುಖ ಪದಾಧಿಕಾರಿಗಳು ಭೇಟಿ ನೀಡಿ ಲಕ್ಷ್ಮಿ ಅವರ ಮನೆಯ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿ ಸಾಂತ್ವನ ಹೇಳಿ ಮನೆಯ ಮೇಲ್ಚಾವಣಿ ಯನ್ನು ಕೂಡಲೇ ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘ ಮತ್ತು ಮಹಮ್ಮಾಯಿ ಮರಾಟಿ ಸಂರಕ್ಷಣ ಸಂಘ ಬೆಳಾಲು ಸಮಿತಿ ಸೇರಿ ದುರಸ್ತಿ ಮಾಡುವ ಬಗ್ಗೆ ಪದಾಧಿಕಾರಿಗಳು ಸೇರಿ ತೀರ್ಮಾನ ಮಾಡಿರುತ್ತಾರೆ.
ಆ ಕುಟುಂಬದಲ್ಲಿ ಲಕ್ಷ್ಮಿ ಎಂಬವರ ತಂದೆ ತಾಯಿ ಅಸ್ವಸ್ಥರಾಗಿದ್ದು, ಅವರ ಅಣ್ಣತಮ್ಮ ಕೂಡ ಆಕಸ್ಮಿಕ ಮರಣವನ್ನು ಹೊಂದಿದ್ದಾರೆ ಈಗ ಅವರ ಕುಟುಂಬದಲ್ಲಿ ಮೂರು ಜನ ಹೆಣ್ಣು ಮಕ್ಕಳು ತೀರ ಬಡತನದಲ್ಲಿ ಇದ್ದು ಇದೀಗ ಬೀಡಿ ಕಟ್ಟಿ ಜೀವನವನ್ನು ಸಾಗಿಸುತ್ತಿದ್ದಾರೆ
ಅವರ ಮನೆ ತೀರ ಹದಗೆಟ್ಟಿದ್ದು, ಮನೆಯ ಮೇಲ್ಚಾವಣಿ ಕುಸಿದು ಬೀಳುವ ಹಂತದಲ್ಲಿದೆ.
ಸ್ವಜಾತಿ ಬಾಂಧವರು ತಮ್ಮ ತಮ್ಮಲ್ಲಿ ಆದಷ್ಟು ಆರ್ಥಿಕ ಸಹಾಯಧನ ನೀಡಿ ಹಾಗೂ ದಾನಿಗಳಿಂದ ದೇನಿಗೆ ಪಡೆದು ಅಬಲೆ ಮಹಿಳೆ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯಕ್ರಮದಲ್ಲಿ ತಾವುಗಳು ಕೂಡ ಭಾಗವಹಿಸಿ ತಮ್ಮೊಂದಿಗೆ ಸಹಕರಿಸುವಂತೆ ಸಂತೋಷ್ ನಾಯ್ಕ ಅತ್ತಾಜೆ
ಅಧ್ಯಕ್ಷರು ಮತ್ತು ಪದಾಧಿಕಾರಿಗಳು
ಬೆಳ್ತಂಗಡಿ ತಾಲೂಕು, ಮರಾಟಿ ಸಮಾಜ ಸೇವಾ ಸಂಘ (ರಿ.) ಉಜಿರೆ ಬೆಳ್ತಂಗಡಿ ಹಾಗೂ ಸಂತೋಷ್ ನಾಯ್ಕ ಬೆಳಾಲ್
ಅಧ್ಯಕ್ಷರು ಮತ್ತು ಪದಾಧಿಕಾರಿಗಳು
ಮಹಮ್ಮಾಯಿ ಮರಾಟಿ ಸಂರಕ್ಷಣ ಸಂಘ ಬೆಳಾಲು ಇವರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
ಸಂತೋಷ್ ಬೆಳಾಲು.9480204768
ಸಂತೋಷ್ ಅತ್ತಾಜೆ.9901226257
ಪ್ರಶಾಂತ್ ಉಜಿರೆ.9901732763
ಸತೀಶ್ ಗುರಿಪಳ್ಳ 88617 63461