ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಇನ್ನುಳಿದ ಕಡೆಗಳಲ್ಲಿ ಪ್ರಸ್ತುತ ಪರಿಸ್ಥಿತಿಗಳನ್ನು ನೋಡಿಕೊಂಡು ರಜೆ ಘೋಷಿಸುವ ಅಧಿಕಾರವನ್ನು ಆಯಾ ತಹಶೀಲ್ದಾರ್ ಗಳಿಗೆ ನೀಡಲಾಗಿದೆ.
ಬೆಳ್ತಂಗಡಿ: ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ಸು ಸೌಲಭ್ಯಗಳು ದೊರಕುತ್ತಿಲ್ಲ.ಬಸ್ಸುಗಳ ಸಂಖ್ಯೆ ಕಡಿಮೆಯಾಗಿದ್ದು, ಬಸ್ಸಿನ ಬಾಗಿಲಿನಲ್ಲಿ ನೇತಾಡಿಕೊಂಡು ಅಪಾಯಕಾರಿಯಾಗಿ ಪ್ರಯಾಣಿಸುವ ಸನ್ನಿವೇಶ ಉಂಟಾಗಿದ್ದು ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸುವವರು ಇಲ್ಲ.ವಿದ್ಯಾರ್ಥಿಗಳು ಎದುರಿಸುತ್ತಿರುವ ಸರ್ಕಾರಿ ಬಸ್ಸುಗಳ ಕೊರತೆಯ ವಿರುದ್ಧ ಇಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ಬಸ್ಸು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಬೆಳಿಗ್ಗೆ 8:30-10:30ರ ವೇಳೆ ಬಸ್ಸುಗಳ ಕಡಿಮೆಯಿದ್ದು ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಬಸ್ಸು ಸೌಲಭ್ಯಗಳು ಸಿಗದೆ ತರಗತಿಗಳು ತಪ್ಪುತ್ತಿವೆ.ಕೊಯ್ಯರು ಬಸ್ಸ್ ನಿಲ್ದಾಣದ ಬಳಿ ಬಸ್ಸುಗಳು ನಿಲ್ಲುಸುತ್ತಿಲ್ಲ.ಬೆಳಾಲು […]Read More
ವಿಟ್ಲ: ವಿಟ್ಲದಿಂದ ಕಬಕಕ್ಕೆ ಸಾಗುವ ರಸ್ತೆಯುದ್ದಕ್ಕೂ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಮಳೆನೀರು ರಸ್ತೆ ಯಲ್ಲೇ ಸಾಗುವುದರಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಲವು ಭಾರಿ ಇಲ್ಲಿಯ ರಸ್ತೆಯನ್ನು ದುರಸ್ತಿ ಮಾಡಿದರೂ ಸಹ ಕಳಪೆ ಕಾಮಗಾರಿಯಿಂದ ಈ ರಸ್ತೆ ಮೊದಲಿನ ಸ್ಥಿತಿಗೆ ಬರುತ್ತಿರುವುದು ದೌರ್ಭಾಗ್ಯ ಅಲ್ಲದೆ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ನೀರು ಹರಿದು ಹೋಗುತ್ತಿದ್ದು ಚರಂಡಿಯೋ ಅಥವಾ ರಸ್ತೆಯೋ ಎಂಬುದೇ ವಾಹನ ಸವಾರರಲ್ಲಿ ಮೂಡುವಂತಹ ಪ್ರಶ್ನೆ. ಇನ್ನೂ ಸರಿಯಾಗಿ ಮಳೆ ಆರಂಭವಾಗಿಲ್ಲ ಆದಾಗಲೇ ಇಂತಹ […]Read More
ಬೆಳ್ತಂಗಡಿ: ಮಾಜಿ ಶಾಸಕರಾದ ಕೆ ವಸಂತ ಬಂಗೇರ ಅವರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು, ಸಿಬ್ಬಂದಿಗಳನ್ನು ನಿಂದಿಸುವುದು , ತಹಶೀಲ್ದಾರ್ ಸಹಿತ ಅಧಿಕಾರಿಗಳ ಮೇಲೆ ಅಧಿಕಾರ ಚಲಾಯಿಸುವುದು ಮತ್ತಿತರ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ಜನಪ್ರತಿನಿಧಿ ಅಲ್ಲದವರು ಅಧಿಕಾರ ಚಲಾಯಿಸುವಾಗ ಅಧಿಕಾರಿಗಳು ಅಸಹಾಯಕರಾಗುತ್ತಾರೆ.ಅಧಿಕಾರಿಗಳಿಗೆ ಅವರದ್ದೇ ಆದ ವೃತ್ತಿ ಗೌರವವಿರುತ್ತದೆ. ಕಾಂಗ್ರೆಸ್ ಸರ್ಕಾರ ಇದೆ ಎಂಬ ಮಾತ್ರಕ್ಕೆ ಅಧಿಕಾರಿಗಳನ್ನ ಬೈಯುವುದು ಸರಿಯಲ್ಲ ಬಯ್ಯುವುದರಿಂದ ಎಲ್ಲವೂ ಸರಿಯಾಗುತ್ತದೆ ಎಂಬುವುದು ಭ್ರಮೆ. ಎಲ್ಲ ದುರಹಂಕಾರಕ್ಕೆ ಕೊನೆ ಇದ್ದೇ ಇದೆ ಸೂಕ್ತ ಸಮಯ […]Read More
ಉಪ್ಪಿನಂಗಡಿ: ಹೆರಿಗೆ ಸಂದರ್ಭದಲ್ಲಿ ಉಂಟಾದ ತೀವ್ರ ರಕ್ತಸ್ರಾವದಿಂದ ಮಗುವಿಗೆ ಜನ್ಮನೀಡಿದ ಬಳಿಕ ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಮೃತಪಟ್ಟ ದಾರುಣ ಘಟನೆ ಜೂ.21 ರಂದು ಬೆಳಗ್ಗೆ ನಡೆದಿದೆ. ಮೃತಪಟ್ಟ ದುರ್ದೈವಿ ಹಿರೇಬಂಡಾಡಿ ಗ್ರಾಮದ ಮುರ ಕಾಲೋನಿ ನಿವಾಸಿ ಭವ್ಯ ಎಂದು ತಿಳಿದುಬಂದಿದೆ. ಮೃತರು ಪತಿ ಬಾಲಕೃಷ್ಣ ಗೌಡ, ಪುತ್ರ ಭವಿಷ್, ಸ್ವಸ್ತಿಕ್ ಮತ್ತು ಹಸುಗೂಸು ಮಗುವನ್ನು ಅಗಲಿದ್ದಾರೆ.Read More
ಮೊಗ್ರು: ಮೊಗ್ರು ಗ್ರಾಮದ ಮುರ ಎಂಬಲ್ಲಿ ಜೂ 18 ರಂದು. ಮಳೆಯಿಂದ ಹಾನಿಯಾದ ಮುಖ್ಯರಸ್ತೆಯನ್ನು ಜೆಸಿಬಿ ಮೂಲಕ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವುದರ ಮೂಲಕ ತಕ್ಷಣ ದುರಸ್ತಿ ಕಾರ್ಯ ಮಾಡಲಾಯಿತು. ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಮoಜುಶ್ರೀ ,ಶಿವಪ್ರಸಾದ್,ಶಿವಣ್ಣ ಗೌಡ ಹೇವ, ಸ್ಥಳಿಯರಾದ ಸತ್ಯಪ್ರಕಾಶ್, ಗಣೇಶ್ ಕಲ್ಚಾರ್ ಸ್ಥಳದಲ್ಲಿ ಉಪಸ್ಥಿತರಿದ್ದರು.Read More
ಕರಾವಳಿ ಭಾಗದಲ್ಲಿ ಅಲ್ಲಲ್ಲಿ ವೈರಲ್ ಜ್ವರ(Infectious Disease) ಕಂಡುಬರುತ್ತಿದ್ದು, 2023ರ ಮೇ ಅಂತ್ಯಕ್ಕೆ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ 22 ಡೆಂಗೆ ಪ್ರಕರಣ, 13 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ. ಮಂಗಳೂರು ಗ್ರಾಮಾಂತರದಲ್ಲಿ 14 ಡೆಂಗೆ, 5 ಮಲೇರಿಯಾ ಪ್ರಕರಣ, ಬಂಟ್ವಾಳದಲ್ಲಿ 8 ಡೆಂಗೆ ಪ್ರಕರಣ ಪತ್ತೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಒಟ್ಟು 48 ಡೆಂಗೆ ಪ್ರಕರಣ, 20 ಮಲೇರಿಯಾ ಪ್ರಕರಣ ಪತ್ತೆಯಾಗಿವೆ.ಮಂಗಳೂರು ನಗರದಲ್ಲಿ ಮಲೇರಿಯಾ ಹಾಗೂ ಡೆಂಗೆ ಪ್ರಕರಣಗಳು ಕಳೆದ 3-4 ವರ್ಷಗಳಿಂದ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಬೆಂಗಳೂರು, […]Read More
ಬೆಳ್ತಂಗಡಿ: ಕಾಂಗ್ರೆಸ್ ಸರ್ಕಾರದ ವಿದ್ಯುತ್ ಶುಲ್ಕ ಹೆಚ್ಚಳ ವಿರೋಧಿಸಿ ಬಿಜೆಪಿ ಬೆಳ್ತಂಗಡಿ ಮಂಡಲ
ಬೆಳ್ತಂಗಡಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿದ್ಯುತ್ ಶುಲ್ಕ ಹೆಚ್ಚಾಗಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಬೆಳ್ತಂಗಡಿ ಮಿನಿ ವಿಧಾನ ಸಭಾ ಮುಂಭಾಗ ಜೂನ್ 9 ರಂದು ಸಾರ್ವಜನಿಕ ಪ್ರತಿಭಟನೆ ನಡೆಯಿತು. ರಸ್ತೆಯ ಉದ್ದಕ್ಕೂ ಬಿಜೆಪಿ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಎಂ ಎಲ್ ಸಿ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಮೊದಲಾದವರು ಭಾಗಿಯಾಗಿದ್ದರುRead More
ಬೆಳ್ತಂಗಡಿ: ಹರೀಶ್ ಪೂಂಜರಿಗೆ ಪ್ರತ್ಯುತ್ತರ ನೀಡಿದ ಸತ್ಯಜಿತ್ ಸುರತ್ಕಲ್: ಕಾಜೂರಿನ ಮಸೀದಿಗೆ ಒಂದು
ಬೆಳ್ತಂಗಡಿ: ಬಿಜೆಪಿ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಅವರು ಸತ್ಯಜಿತ್ ಸುರತ್ಕಲ್ ಅವರ ಬಗ್ಗೆ ಹೇಳಿದ ಹೇಳಿಕೆಗೆ ಇಂದು ಸತ್ಯಜಿತ್ ಸುರತ್ಕಲ್ ಪ್ರತ್ಯುತ್ತರವನ್ನು ನೀಡಿದ್ದಾರೆ. ಅವರು ಇಂದು ಗುರುನಾರಾಯಣ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹರೀಶ್ ಪೂಂಜರೇ ಶಾಸಕರಾದ ಮೇಲೆ ಮುಸಲ್ಮಾನರ ಮತ ಬೇಡ ಅಂದವರು ಇವತ್ತು ಎಲ್ಲರಲ್ಲೂ ಮತ ಕೇಳ್ತಿಲ್ವ. ಹರೀಶ್ ಪೂಂಜರ ಹಿಂದುತ್ವದ ಬಗ್ಗೆ ಈ ಮೊದಲೇ ಹೇಳುತ್ತಿದ್ದೆ. ಇವತ್ತು ನೀವು ಯಾವ ಯಾವ ಹಿಂದುತ್ವದ ಹೋರಾಟದಲ್ಲಿ ಇದ್ದೀರಿ? ನೀವು ಯಾವತ್ತಾದರೂ […]Read More