ಕರಾವಳಿ ಭಾಗದಲ್ಲಿ ವೈರಲ್ ಜ್ವರ:ಜಾಗ್ರತೆ ವಹಿಸುವಂತೆ ಎಚ್ಚರಿಕೆ ನೀಡಿದ ವೈದ್ಯರು

ಕರಾವಳಿ ಭಾಗದಲ್ಲಿ ಅಲ್ಲಲ್ಲಿ ವೈರಲ್ ಜ್ವರ(Infectious Disease) ಕಂಡುಬರುತ್ತಿದ್ದು, 2023ರ ಮೇ ಅಂತ್ಯಕ್ಕೆ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ 22 ಡೆಂಗೆ ಪ್ರಕರಣ, 13 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ. ಮಂಗಳೂರು ಗ್ರಾಮಾಂತರದಲ್ಲಿ 14 ಡೆಂಗೆ, 5 ಮಲೇರಿಯಾ ಪ್ರಕರಣ, ಬಂಟ್ವಾಳದಲ್ಲಿ 8 ಡೆಂಗೆ ಪ್ರಕರಣ ಪತ್ತೆಯಾಗಿದೆ.
ದಕ್ಷಿಣ ಕನ್ನಡದಲ್ಲಿ ಒಟ್ಟು 48 ಡೆಂಗೆ ಪ್ರಕರಣ, 20 ಮಲೇರಿಯಾ ಪ್ರಕರಣ ಪತ್ತೆಯಾಗಿವೆ.ಮಂಗಳೂರು ನಗರದಲ್ಲಿ ಮಲೇರಿಯಾ ಹಾಗೂ ಡೆಂಗೆ ಪ್ರಕರಣಗಳು ಕಳೆದ 3-4 ವರ್ಷಗಳಿಂದ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಬೆಂಗಳೂರು, ಶಿವಮೊಗ್ಗ, ಮೈಸೂರು ಭಾಗದಲ್ಲಿ ಡೆಂಗೆ ಹೆಚ್ಚು ಕಾನ್ಬೆಂಗಳೂರು ನಗರ ಭಾಗದಲ್ಲಿ 800 ಪ್ರಕರಣಗಳು ಪತ್ತೆಯಾಗಿವೆ.
ಮಳೆಗಾಲ ಶುರುವಾಗುತ್ತಿದ್ದಂತೆ ಕಾಯಿಲೆಗಳು ಹೆಚ್ಚಾಗುವುದು ಸಹಜ. ಅದೇ ರೀತಿ, ಮಲೇರಿಯಾ, ಡೆಂಗೆ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವ ಆಯುರ್ವೇದ ಔಷಧಗಳನ್ನು ಬಳಕೆ ಮಾಡಬಹುದು. ಡೆಂಗೆ, ಮಲೇರಿಯಾ ಬಂದಾಗ ಅವರಿಗೆ ಆಯುರ್ವೇದ ಪದ್ಧತಿಯ ಔಷಧಗಳಾದ ಅಮೃತಾರಿಷ್ಟ, ಒಂದು ಟೀ ಸ್ಪೂನ್ ಪಪ್ಪಾಯಿ ಎಲೆಯ ರಸವನ್ನು ಅರ್ಧ ಚಮಚ ಜೇನು ತುಪ್ಪದ ಜತೆ ಸೇವಿಸುವ ಮೂಲಕ ರಕ್ತದ ಪ್ಲೇಟ್‌ಲೆಟ್‌ಗಳು ಕಡಿಮೆಯಾಗದಂತೆ ತಡೆಯಲು ವೈದ್ಯರು ಸಲಹೆ ನೀಡಿದ್ದಾರೆ.
ಮನೆಯ ಅಕ್ಕಪಕ್ಕದಲ್ಲಿ ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗಿ, ಆ ಸೊಳ್ಳೆ ಮನುಷ್ಯನಿಗೆ ಕಚ್ಚಿ ಡೆಂಗ್ಯೂ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಜನರು ಡೆಂಗೆ, ಮಲೇರಿಯಾ ಕುರಿತು ಜಾಗ್ರತೆಯಿಂದಿರುವುದು ಉತ್ತಮವೆಂದು ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್ ಎಚ್ಚರಿಕೆ ನೀಡಿದ್ದಾರೆ.