• October 14, 2024

ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಜಿಲ್ಲಾ ಪ್ರಥಮ ಪ್ರಶಸ್ತಿಯ ಗರಿ: ಬೆಳ್ತಂಗಡಿ; ಸುವರ್ಣ ಮಹೋತ್ಸವ ವರ್ಷ ಆಚರಿಸುತ್ತಿರುವ ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ 2023-24 ನೇ ಸಾಲಿನ ಲಯನ್ಸ್ ಜಿಲ್ಲಾ ಪ್ರಥಮ ಪ್ರಶಸ್ತಿ ಘೋಷಣೆ

 ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಜಿಲ್ಲಾ ಪ್ರಥಮ ಪ್ರಶಸ್ತಿಯ ಗರಿ: ಬೆಳ್ತಂಗಡಿ; ಸುವರ್ಣ ಮಹೋತ್ಸವ ವರ್ಷ ಆಚರಿಸುತ್ತಿರುವ ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ 2023-24 ನೇ ಸಾಲಿನ ಲಯನ್ಸ್ ಜಿಲ್ಲಾ ಪ್ರಥಮ ಪ್ರಶಸ್ತಿ ಘೋಷಣೆ

 

‘ಸೇವೆ’ ಮತ್ತು ‘ಸಾಂಗತ್ಯ’ ಪರಿಕಲ್ಪನೆಯಲ್ಲಿ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಲಯನ್ಸ್ ಕ್ಲಬ್ ಪ್ರಶಸ್ತಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾಗಿದೆ.


3 ಕಂದಾಯ ಜಿಲ್ಲೆಗಳಾದ ದ.ಕ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆಯಲ್ಲಿ ಒಟ್ಟು 118 ಕ್ಲಬ್ಬುಗಳಿದ್ದು ಈ ಪೈಕಿ ಆಡಳಿತ‌ ಮತ್ತು ಸೇವಾ ವಿಭಾಗದಲ್ಲಿ ಮುಂಚೂಣಿ ಕಾಯ್ದುಕೊಂಡು ಬಂದಿದ್ದ ಬೆಳ್ತಂಗಡಿ ಲಯನ್ಸ್ ಕ್ಲಬ್ ಜೂನ್ ಕೊನೆಯ ವೇಳೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿತು.


ಲ.‌ಉಮೇಶ್ ಶೆಟ್ಟಿ ಅಧ್ಯಕ್ಷರಾಗಿ, ಲ. ಅನಂತಕೃಷ್ಣ ಕಾರ್ಯದರ್ಶಿಯಾಗಿ ಮತ್ತು ಲ.‌ಸುಭಾಷಿಣಿ ಕೋಶಾಧಿಕಾರಿಯಾಗಿ ನಾಯಕತ್ವ ನೀಡುತ್ತಿರುವ ಲಯನ್ಸ್ ಕ್ಲಬ್ 2023-24 ನೇ ಸಾಲಿನಲ್ಲಿ 100 ಸದಸ್ಯರ ಗುರಿ ದಾಟಿರುವುದು, ಅರ್ಹ 4 ಕುಟುಂಬಗಳಿಗೆ ಮನೆ ನಿರ್ಮಾಣ, 4 ಕಡೆ ಪ್ರಯಾಣಿಕರ ತಂಗುದಾಣ ರಚನೆ, ‘ಸುವರ್ಣ ವಿದ್ಯಾನಿಧಿ’ ಹೆಸರಿನಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ‘ಸುವರ್ಣ ಆರೋಗ್ಯ ನಿಧಿ’ ಎಂಬ ಹೆಸರಿನಲ್ಲಿ ಅನಾರೋಗ್ಯ ಪೀಡಿತರ ಮನೆ ಮನೆಗೆ ತೆರಳಿ ಧನಸಹಾಯ, ಸರಕಾರಿ ಶಾಲೆಗಳಿಗೆ ಪುಸ್ತಕ, ಪೀಠೋಪಕರಣ ಮತ್ತು ಕುಡಿಯುವ ನೀರಿನ ಘಟಕ, ವೃದ್ದಾಶ್ರಮಕ್ಕೆ ಆಹಾರ ವಸ್ತುಗಳ ಕೊಡುಗೆ, ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಧ್ವಜ ಕಟ್ಟೆ ಕೊಡುಗೆ, ವರ್ಷಪೂರ್ತಿ ಎಲ್ಲಾ ಪಾಕ್ಷಿಕ ಸಭೆಗಳಲ್ಲಿ ಸೇವಾ ಚಟುವಟಿಕೆಗಳ ಆಯೋಜನೆ ಸೇರಿದಂತೆ ಸುಮಾರು‌ 500 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಿಸಿದೆ. ಅಲ್ಲದೆ ಬೆಳ್ತಂಗಡಿ ಕ್ಲಬ್ಬಿನ 5 ಮಂದಿ ಸದಸ್ಯರು ಎಂಜೆಎಫ್ ಮೂಲಕ ಅಂತಾರಾಷ್ಟ್ರೀಯ ಫಂಡ್ (ಎಲ್.ಸಿ.ಐ.ಎಫ್) ಗೆ 4.50 ಲಕ್ಷ ದಷ್ಟು ಕೊಡುಗೆ ನೀಡಿರುವುದನ್ನು ಜಿಲ್ಲೆ ಗಣನೀಯವಾಗಿ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆಗೊಳಿಸಿದೆ.


ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ಇತಿಹಾಸದಲ್ಲಿ 2014-15 ನೇ ಸಾಲಿನಲ್ಲಿ ಎನ್ ಎ ಗೋಪಾಲ ಶೆಟ್ಟಿ ಅವರು ಅಧ್ಯಕ್ಷರಾಗಿದ್ದಾಗ ಒಂದು ಬಾರಿ ಮಾತ್ರ ಜಿಲ್ಲಾ ಪ್ರಥಮ ಪ್ರಶಸ್ತಿ ಲಭಿಸಿತ್ತು. ಇದೀಗ ಎರಡನೇ ಬಾರಿಗೆ ‌ಲ. ಉಮೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಶಸ್ತಿ ಬಂದಿರುವುದು ಅವಿಸ್ಮರಣೀಯ ದಾಖಲೆಯಾಗಿದೆ. ಈ ಪ್ರಶಸ್ತಿಗೆ ಉಭಯ ಜಿಲ್ಲೆಗಳಿಂದ ಪ್ರೋತ್ಸಾಹದ ಸುರಿಮಳೆಯೇ ಬಂದಿದೆ.

Related post

Leave a Reply

Your email address will not be published. Required fields are marked *

error: Content is protected !!