• September 13, 2024

ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ರಕ್ತದಾನಿಗಳ ದಿನದ ಆಚರಣೆ

 ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ರಕ್ತದಾನಿಗಳ ದಿನದ ಆಚರಣೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ರಕ್ತದಾನಿಗಳ ದಿನದ ಆಚರಣೆಯನ್ನು ಇಂದು ಮಾಡಲಾಯಿತು.

ಈ ದಿನದ ಮುಖ್ಯ ಅತಿಥಿಗಳಾಗಿ ನಿವೃತ್ತ ವಾಯುಪಡೆಯ ಫೈಟರ್ ಪೈಲಟ್, ಅಮೃತ ಕಾಲ ಇದರಲ್ಲಿ ಸೇವೆ ಸಲ್ಲಿಸುತ್ತಿರುವ ವಿಕ್ರಂ ದೀಶ್ ಅವರು ಯುವ ಜನರ ಆಶೋತ್ತರ ,ಮುಂದಿನ ಸಮಾಜದ ಭವಿಷ್ಯ ಹಾಗೂ ಮುಂದಿನ ಪ್ರಕೃತಿಯ ಭವಿಷ್ಯ ಯುವಜನರ ಕೆಲಸ,ಕನಸು ನನಸು ಮಾಡುವ ವಿವಿಧ ರೀತಿ ಹಾಗೂ ಜೊತೆಯಲ್ಲಿರುವವರನ್ನು ಸಂತಸದಿಂದ ಕಾಣುವಂತೆ ಮಾಡುವ ರೀತಿ ವಿವರಿಸಿದರು.

ತದನಂತರ ಧರ್ಮಸ್ಥಳ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀ.ಶ್ರೀನಿವಾಸ್ ರಾವ್ ವಿದ್ಯಾರ್ಥಿಗಳಿಗೆ ತಾಳ್ಮೆಯ,ಜೀವನದಲ್ಲಿ ಕಾಣಬೇಕಾದ ಕನಸು, ಅಗತ್ಯ,ರಕ್ತದಾನದ ಮಹತ್ವ,ವಿದ್ಯಾರ್ಥಿಗಳಲ್ಲಿ ಇರಬೇಕಾದ ಶಿಸ್ತು ಇತ್ಯಾದಿಗಳನ್ನು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿರುವ ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಶಾಲಾ ಸಹಶಿಕ್ಷಕಿ ಶ್ರೀಮತಿ ಆಶಾ ಮಾತನಾಡಿ ರಕ್ತದಾನ ಮಹತ್ವ ,ಅದರ ಕುರಿತಾಗಿರುವ ತಪ್ಪು ಅಭಿಪ್ರಾಯ ಹಾಗೂ ರಕ್ತದಾನಿಗಳ ದಿನದ ಉದಯ ಹಾಗೂ ಅದರ ಅಗತ್ಯಗಳನ್ನು ವಿವರಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.

ಶಾಲಾ ಸಹ ಶಿಕ್ಷಕಿ ಶ್ರೀಮತಿ ಶಿಭಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀಮತಿ ದಿವ್ಯಾ ಎನ್ ಅತಿಥಿಗಳ ಕಿರುಪರಿಚಯ ನೀಡಿ ಶ್ರೀಮತಿ ರಮಾರಾಜೇಶ್ ವಂದಿಸಿದರು.

Related post

Leave a Reply

Your email address will not be published. Required fields are marked *

error: Content is protected !!