ಬೆಳ್ತಂಗಡಿ: ಹರೀಶ್ ಪೂಂಜರಿಗೆ ಪ್ರತ್ಯುತ್ತರ ನೀಡಿದ ಸತ್ಯಜಿತ್ ಸುರತ್ಕಲ್: ಕಾಜೂರಿನ ಮಸೀದಿಗೆ ಒಂದು ವರೆ ಕೋಟಿ ಅನುದಾನ ನೀಡಿದ್ದು ನಿಮ್ಮ ಯಾವ ಹಿಂದುತ್ವ ಸತ್ಯಜಿತ್ ಸುರತ್ಕಲ್ ಆಕ್ರೋಶ

ಬೆಳ್ತಂಗಡಿ: ಬಿಜೆಪಿ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಅವರು ಸತ್ಯಜಿತ್ ಸುರತ್ಕಲ್ ಅವರ ಬಗ್ಗೆ ಹೇಳಿದ ಹೇಳಿಕೆಗೆ ಇಂದು ಸತ್ಯಜಿತ್ ಸುರತ್ಕಲ್ ಪ್ರತ್ಯುತ್ತರವನ್ನು ನೀಡಿದ್ದಾರೆ.
ಅವರು ಇಂದು ಗುರುನಾರಾಯಣ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹರೀಶ್ ಪೂಂಜರೇ ಶಾಸಕರಾದ ಮೇಲೆ ಮುಸಲ್ಮಾನರ ಮತ ಬೇಡ ಅಂದವರು ಇವತ್ತು ಎಲ್ಲರಲ್ಲೂ ಮತ ಕೇಳ್ತಿಲ್ವ. ಹರೀಶ್ ಪೂಂಜರ ಹಿಂದುತ್ವದ ಬಗ್ಗೆ ಈ ಮೊದಲೇ ಹೇಳುತ್ತಿದ್ದೆ. ಇವತ್ತು ನೀವು ಯಾವ ಯಾವ ಹಿಂದುತ್ವದ ಹೋರಾಟದಲ್ಲಿ ಇದ್ದೀರಿ? ನೀವು ಯಾವತ್ತಾದರೂ ಜೈಲಲ್ಲಿ ಕಾರ್ಯಕರ್ತರನ್ನು ನೋಡಲು ಹೋಗಿದ್ದೀರಾ ? ನಮಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಲ್ಲಿರುವವರು ಹಿಂದೂಗಳೆ. ನೀವು ಬಿಲ್ಲವ ಸಮಾಜಕ್ಕೆ ಎಷ್ಟು ಅಪಮಾನ ಮಾಡಿದ್ದೀರಿ ಮುಸಲ್ಮಾನ ಸಮುದಾಯದವರಾದರೂ ಆಗಬಹುದು ಬಿಲ್ಲವ ಸಮುದಾಯವಲ್ಲ ಎಂದು ಹೇಳಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ವೇಣೂರು ಪೆರ್ಮುಡ ಕಂಬಳ ಸಮಿತಿ ಗೌರವಾಧ್ಯಕ್ಷರಾದ ಮಾಜಿ ಶಾಸಕ ವಸಂತ ಬಂಗೇರ ಹಾಗೂ ನಿತಿನ್ ಕೋಟ್ಯಾನ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದರೂ ಇನ್ನೊಂದು ಸಮಿತಿಯನ್ನು ರಚನೆ ಮಾಡಿ ಆ ಮೂಲಕ ಕಂಬಳವನ್ನು ಹೈಜಾಕ್ ಮಾಡುವ ವಿಫಲ ಪ್ರಯತ್ನ ಮಾಡಿದ್ದು ನೀವು. ನಾರಾಯಣ ಗುರುಗಳ ಟ್ಯಾಬ್ಲೋಗೆ ಅವಕಾಶ ನಿರಾಕರಣೆ ಮಾಡುವ ಸಂದರ್ಭದಲ್ಲಿ ಹಾಗೂ ಪಠ್ಯ ಪುಸ್ತಕ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ಯಾಕೆ ನೀಡಿಲ್ಲ? ಕಾಜೂರಿನ ಮಸೀದಿಗೆ ಒಂದು ವರೆ ಕೋಟಿ ಅನುದಾನ ನೀಡಿದ್ದು ನಿಮ್ಮ ಯಾವ ಹಿಂದುತ್ವ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಯನ್ನು ಹಾಕಿದರು