ವಿಟ್ಲ- ಕಬಕ ಸಾಗುವ ರಸ್ತೆಗೆ ಚರಂಡಿ ಕೊರತೆ: ರಸ್ತೆಗೆ ಹರಿದು ಬರುತ್ತಿರುವ ಮಳೆನೀರು: ಪರದಾಡುತ್ತಿರುವ ವಾಹನಸವಾರರು: ಸ್ಥಳೀಯರ ಆಕ್ರೋಶ

ವಿಟ್ಲ: ವಿಟ್ಲದಿಂದ ಕಬಕಕ್ಕೆ ಸಾಗುವ ರಸ್ತೆಯುದ್ದಕ್ಕೂ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಮಳೆನೀರು ರಸ್ತೆ ಯಲ್ಲೇ ಸಾಗುವುದರಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಹಲವು ಭಾರಿ ಇಲ್ಲಿಯ ರಸ್ತೆಯನ್ನು ದುರಸ್ತಿ ಮಾಡಿದರೂ ಸಹ ಕಳಪೆ ಕಾಮಗಾರಿಯಿಂದ ಈ ರಸ್ತೆ ಮೊದಲಿನ ಸ್ಥಿತಿಗೆ ಬರುತ್ತಿರುವುದು ದೌರ್ಭಾಗ್ಯ ಅಲ್ಲದೆ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ನೀರು ಹರಿದು ಹೋಗುತ್ತಿದ್ದು ಚರಂಡಿಯೋ ಅಥವಾ ರಸ್ತೆಯೋ ಎಂಬುದೇ ವಾಹನ ಸವಾರರಲ್ಲಿ ಮೂಡುವಂತಹ ಪ್ರಶ್ನೆ.
ಇನ್ನೂ ಸರಿಯಾಗಿ ಮಳೆ ಆರಂಭವಾಗಿಲ್ಲ ಆದಾಗಲೇ ಇಂತಹ ಪರಿಸ್ಥಿತಿ ನಿರ್ಮಾಣವಾದರೆ ಮುಂದಿನ ದಿನಗಳಲ್ಲಿ ಈ ರಸ್ತೆಯಿಂದ ಸಾಗಬಹುದೇ ಸಾಧ್ಯವೇ ಎಂಬುವುದೇ ಅಲ್ಲಿಯ ಸ್ಥಳೀಯರ ಆಕ್ರೋಶ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ