ಬೆಳ್ತಂಗಡಿ: 2023 ರ ವಿಧಾನ ಸಭಾ ಚುನಾವಣೆಗೆ ದಿನಗಣನೆ ಮಾತ್ರ ಬಾಕಿ ಇದ್ದು ಅಭ್ಯರ್ಥಿಗಳ ಚುನಾವಣಾ ಪ್ರಚಾರ ಭರದಿಂದ ಸಾಗುತ್ತಿದ್ದು ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಹಾಗೂ ಅವರ ಕಾರ್ಯಕರ್ತರು ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂದು ಮನೆ ಮನೆ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದು, ಬಜಿರೆ, ಗುಂಡೂರಿ, ಆರಂಭೋಡಿ, ಹೊಸಂಗಡಿ, ಬಡಕೋಡಿ, ಕಾಶಿಪಟ್ಣ, ಪೆರಾಡಿ, ನಾರಾವಿ, ಕುತ್ಲೂರು, ಕೊಕ್ರಾಡಿ, ಸಾವ್ಯ, ಅಂಡಿಂಜೆ ಗ್ರಾಮಗಳ ಮನೆಗಳಿಗೆ ಭೇಟಿ ನೀಡಿದರು. ಮೊದಲ ದಿನದ ಮನೆ ಭೇಟಿಯ […]
ಉಜಿರೆ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಮತ್ತು ಗ್ರಾಮೀಣ ವತಿಯಿಂದ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಏ. 22 ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಂಗಣದ ಮುಂಭಾಗದ ಬಯಲು ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ಚುನಾವಣಾ ಪ್ರಚಾರ ಸಭೆ ಜರುಗಿತು. ಡಿ. ಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚುನಾವಣಾ ವಾರ್ ರೂಂ ಮುಖ್ಯಸ್ಥ ಎಂ ಜಿ ಹೆಗ್ಡೆ ಪ್ರಧಾನ ಭಾಷಣ […]Read More
ಧರ್ಮಸ್ಥಳ: ಡಿಕೆ ಶಿವಕುಮಾರ್ ಆಗಮಿಸಿದ ಹೆಲಿಕಾಪ್ಟರ್ ದಿಢೀರ್ ತಪಾಸಣೆ ನಡೆಸಿದ ಚುನಾವಣಾಧಿಕಾರಿಗಳು: ಖಾಸಗಿ
ಧರ್ಮಸ್ಥಳ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಧರ್ಮಸ್ಥಳಕ್ಕೆ ಆಗಮಿಸಿದ ವೇಳೆ ಅವರು ಬಂದಿಳಿದ ಹೆಲಿಕಾಪ್ಟರ್ ಅನ್ನು ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದರು. ತಪಾಸಣೆಗೆ ಮುಂದಾದ ಚುನಾವಣಾಧಿಕಾರಿಗಳ ಜೊತೆ ಪೈಲೆಟ್ ಮಾತಿನ ಚಕಮಕಿ ನಡೆಸಿದ್ದು, ಇದು ಖಾಸಗಿ ಹೆಲಿಕಾಪ್ಟರ್ ಪರಿಶೀಲಿಸಲು ಅವಕಾಶವಿಲ್ಲ ಎಂದಿದ್ದಾರೆ ಆದರೆ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದ್ದಾರೆ ಅಲ್ಲದೆ ಡಿಕೆ ಶಿವಕುಮಾರ್ ಅವರ ಬಟ್ಟೆ ಬರೆಗಳಿದ್ದ ಸೂಟ್ ಕೇಸ್ ತಪಾಸಣೆ ನಡೆಸಿದ್ದಾರೆ.Read More
ಬೆಳ್ತಂಗಡಿ:- ಬೆಳ್ತಂಗಡಿ ತಾಲೂಕಿನ ವಕೀಲರ ಸಂಘಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ, ವಕೀಲರೊಂದಿಗೆ ಕೆಲವು ಸಮಯಗಳ ಕಾಲ ಮಾತುಕತೆ ನಡೆಸಿದ್ರು. ಹೈಕೋರ್ಟ್ ನ ವಕೀಲರು ಆಗಿರುವ ರಕ್ಷಿತ್ ಶಿವರಾಂ ಸಂಘದ ಅಧ್ಯಕ್ಷರು, ಸದಸ್ಯರೊಂದಿಗೆ ಹಳೆಯ ನೆನಪುಗಳನ್ನ ಮೆಲುಕು ಹಾಕಿದ್ರು. ಇದೇ ವೇಳೆ ಪ್ರಸ್ತುತ ಮಹತ್ವದ ವಿಷಯಗಳ ಬಗ್ಗೆ ಚರ್ಚೆನಡೆಸಿ, ಸಂಘದ ಕುಂದು ಕೊರತೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ರು. ವಕೀಲರ ಸಂಘದ ತಾಲೂಕು ಅಧ್ಯಕ್ಷ ಪ್ರಸಾದ್ ಕೆ ಎಸ್, ಪ್ರಧಾನ ಕಾರ್ಯದರ್ಶಿ ಶೈಲೇಶ್ ಟೋಸರ್, […]Read More
ಬೆಳ್ತಂಗಡಿಯಲ್ಲಿ ಚುನಾವಣಾ ಪ್ರಚಾರದಲ್ಲಿ ವಿಭಿನ್ನವಾದ ಬದಲಾವಣೆ ತರಲಿರುವ ಸರ್ವೋದಯ ಕರ್ನಾಟಕ ಪಕ್ಷ: ಸುದ್ದಿಗೋಷ್ಠಿಯಲ್ಲಿ
ಬೆಳ್ತಂಗಡಿ: ಸರ್ವೋದಯ ಕರ್ನಾಟಕ ಪಕ್ಷವು ತಮ್ಮ ಚುನಾವಣಾ ಪ್ರಚಾರದಲ್ಲಿ ವಿಭಿನ್ನವಾದ ಕಲಸಮಾಡುವ ಮೂಲಕ ಬೆಳ್ತಂಗಡಿ ಯಲ್ಲಿ ಕೆಲವು ಬದಲಾವಣೆಗಳನ್ನು ತರಲಿದೆ. ಅಭ್ಯರ್ಥಿ ಆದಿತ್ಯ ಕೊಲ್ಲಾಜೆ ಪ್ರತೀ ಗ್ರಾಮಕ್ಕೆ ಭೇಟಿ ನೀಡಿ ಕಷ್ಟಗಳಿಗೆ ಸ್ಪಂದಿಸಿ ಮತ್ತು ಸಾಮಾನ್ಯ ಜನರ ಸಮಸ್ಯೆಗೆ ಧ್ವನಿ ಎತುವ ಮೂಲಕ ತಳಮಟ್ಟದಲ್ಲಿ ಪಕ್ಷ ಭಿನ್ನತೆಯನ್ನು ತರುತ್ತಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಫೆರ್ನಾಂಡೀಸ್ ಹೇಳಿದರು. ಅವರು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಏ.21 ರಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಮ್ಮ ತಂಡ 25 […]Read More
ಬೆಳ್ತಂಗಡಿ; 2023 ರ ಕರ್ನಾಟಕ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾದಾಳ ಪಕ್ಷದಲ್ಲಿ ವತಿಯಿಂದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಾಲೂಕಿನ ಹಿರಿಯ ಗ್ರಾಮೀಣ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರಿಗೆ ಅವಕಾಶ ಲಭಿಸಿದೆ. ಏ.20 ರಂದು ಪಕ್ಷದ ಹಿರಿಯರ ಸಮ್ಮುಖ ಅವರಿಗೆ ಅಧಿಕೃರ ‘ಬಿ ಫಾರ್ಮ್’ ಹಸ್ತಾಂತರಿಸಲಾಯಿತು. ಕಳೆದ 23 ವರ್ಷಗಳಿಂದ ಗ್ರಾಮೀಣ ಪತ್ರಕರ್ತರಾಗಿ, ಅಭಿವೃದ್ಧಿಪರ ಮತ್ತು ಮಾನವೀಯ ಪತ್ರಿಕೋಧ್ಯಮದ ಮೂಲಕ ಅಪಾರ ಜನಮನ್ನಣೆ ಗಳಿಸಿಕೊಂಡಿದ್ದಾರೆ.ಅತ್ಯುತ್ತಮ ಸಂಘಟಕರೂ ಆಗಿರುವ ಅವರು ಬೆಳ್ತಂಗಡಿ ತಾಲೂಕು ಪತ್ರಕರ್ತರ […]Read More
ದ.ಕ, ಉಡುಪಿ ಯಲ್ಲಿಂದು ಬಿಜೆಪಿ, ಕಾಂಗ್ರೆಸ್, ಎಸ್ ಡಿ ಪಿಐ, ಇನ್ನಿತರ ಪಕ್ಷದ ಅಭ್ಯರ್ಥಿಗಳು ಇಂದು ನಾಮಪತ್ರವನ್ನು ಸಲ್ಲಿಸಿದ್ದಾರೆ. ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಮಾಜಿ ಸಚಿವ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕ್ಕೆ ಅವರು ಸಾವಿರಾರು ಕಾರ್ಯಕರ್ತರೊಂದಿಗೆ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಮಂಗಳೂರು ನಗರ ಉತ್ತರ ಕ್ಷೇತ್ರದ ಹಾಲಿ ಶಾಸಕ ಡಾ ಭರತ್ ಶೆಟ್ಟಿ ಮಂಗಳೂರು ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ ಕಾರ್ಕಳ: ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀ […]Read More
ಬೆಳ್ತಂಗಡಿ: 2023 ರ ವಿಧಾನಸಭಾ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದಂತೆ ಅಭ್ಯರ್ಥಿಗಳು ನಾಮಪತ್ರವನ್ನೂ ಸಲ್ಲಿಸುತ್ತಿದ್ದಾರೆ. ಇದೀಗ ಬೆಳ್ತಂಗಡಿ ಕ್ಷೇತ್ರದಲ್ಲಿ ಎಸ್ಡಿಪಿಐ ಯ ಇನ್ನೋರ್ವ ಅಭ್ಯರ್ಥಿ ನವಾಜ್ ಶರೀಫ್ ಕಟ್ಟೆ ಚುನಾವಣಾಧಿಕಾರಿಗೆ ನಾಮಪತ್ರವನ್ನು ಏ. 18 ರಂದು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಹನೀಫ್ ಪುಂಜಾಲಕಟ್ಟೆ, ಸಾಧಿಕ್ ಲಾಯಿಲ, ರಿಯಾಸ್ ಪಣಕ್ಕಾಜೆ, ಸಮೀದ್ ಸುನ್ನತ್ಕೆರೆ ಉಪಸ್ಥಿತರಿದ್ದರು.Read More
ಬೆಳ್ತಂಗಡಿ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಅವರು ಕಾರ್ಯಕರ್ತರೊಂದಿಗೆ ಆಗಮಿಸಿ ಏ.18 ರಂದು ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿ ಸಂತೆಕಟ್ಟೆಯಿಂದ ಮಿನಿ ವಿಧಾನಸೌಧವರೆಗೆ ಕಾಲ್ನಡಿಗೆ ಜಾಥಾದಲ್ಲಿ ಹಲವಾರು ಕಾರ್ಯಕರ್ತರುಭಾಗವಹಿಸಿ, ಬಳಿಕ ಅಕ್ಬರ್ ಬೆಳ್ತಂಗಡಿಯವರು ಚುನಾವಣಾಧಿಕಾರಿಗೆ ನಾಮ ಪತ್ರ ಸಲ್ಲಿಸಲಿದ್ದಾರೆ. ಎಸ್ ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ನವಾಝ್ ಕಟ್ಟೆ ಉಪಸ್ಥಿತರಿದ್ದರು.Read More