ಧರ್ಮಸ್ಥಳ: ಡಿಕೆ ಶಿವಕುಮಾರ್ ಆಗಮಿಸಿದ ಹೆಲಿಕಾಪ್ಟರ್ ದಿಢೀರ್ ತಪಾಸಣೆ ನಡೆಸಿದ ಚುನಾವಣಾಧಿಕಾರಿಗಳು: ಖಾಸಗಿ ಹೆಲಿಕಾಪ್ಟರ್ ಪರಿಶೀಲಿಸಲು ಅವಕಾಶವಿಲ್ಲ ಎಂದ ಪೈಲೆಟ್: ಚುನಾವಣಾಧಿಕಾರಿ ಹಾಗೂ ಪೈಲೆಟ್ ನಡುವೆ ಮಾತಿನ ಚಕಮಕಿ
ಧರ್ಮಸ್ಥಳ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಧರ್ಮಸ್ಥಳಕ್ಕೆ ಆಗಮಿಸಿದ ವೇಳೆ ಅವರು ಬಂದಿಳಿದ ಹೆಲಿಕಾಪ್ಟರ್ ಅನ್ನು ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ತಪಾಸಣೆಗೆ ಮುಂದಾದ ಚುನಾವಣಾಧಿಕಾರಿಗಳ ಜೊತೆ ಪೈಲೆಟ್ ಮಾತಿನ ಚಕಮಕಿ ನಡೆಸಿದ್ದು, ಇದು ಖಾಸಗಿ ಹೆಲಿಕಾಪ್ಟರ್ ಪರಿಶೀಲಿಸಲು ಅವಕಾಶವಿಲ್ಲ ಎಂದಿದ್ದಾರೆ ಆದರೆ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದ್ದಾರೆ ಅಲ್ಲದೆ ಡಿಕೆ ಶಿವಕುಮಾರ್ ಅವರ ಬಟ್ಟೆ ಬರೆಗಳಿದ್ದ ಸೂಟ್ ಕೇಸ್ ತಪಾಸಣೆ ನಡೆಸಿದ್ದಾರೆ.