ಬೆಳ್ತಂಗಡಿ : ಜೆಡಿಎಸ್ ಅಭ್ಯರ್ಥಿಯಾಗಿ ಬೆಳ್ತಂಗಡಿಯ ಪತ್ರಕರ್ತ ಸ್ಪರ್ಧೆ
ಬೆಳ್ತಂಗಡಿ; 2023 ರ ಕರ್ನಾಟಕ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾದಾಳ ಪಕ್ಷದಲ್ಲಿ ವತಿಯಿಂದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಾಲೂಕಿನ ಹಿರಿಯ ಗ್ರಾಮೀಣ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರಿಗೆ ಅವಕಾಶ ಲಭಿಸಿದೆ.
ಏ.20 ರಂದು ಪಕ್ಷದ ಹಿರಿಯರ ಸಮ್ಮುಖ ಅವರಿಗೆ ಅಧಿಕೃರ ‘ಬಿ ಫಾರ್ಮ್’ ಹಸ್ತಾಂತರಿಸಲಾಯಿತು.
ಕಳೆದ 23 ವರ್ಷಗಳಿಂದ ಗ್ರಾಮೀಣ ಪತ್ರಕರ್ತರಾಗಿ, ಅಭಿವೃದ್ಧಿಪರ ಮತ್ತು ಮಾನವೀಯ ಪತ್ರಿಕೋಧ್ಯಮದ ಮೂಲಕ ಅಪಾರ ಜನಮನ್ನಣೆ ಗಳಿಸಿಕೊಂಡಿದ್ದಾರೆ.
ಅತ್ಯುತ್ತಮ ಸಂಘಟಕರೂ ಆಗಿರುವ ಅವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ, ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ, ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಬೆಳ್ತಂಗಡಿ, ಸಮುದಾಯ ಸಂಘಟನೆಗಳಾದ ಎಸ್‌ವೈಎಸ್ ಇದರ ಮುಂಡಾಜೆ ಸರ್ಕಲ್, ಬೆಳ್ತಂಗಡಿ ಝೋನ್ ಮತ್ತು ಈಸ್ಟ್ ಜಿಲ್ಲೆ, ಮಾನವ ಸ್ಪಂದನ ಕೋವಿಡ್ ವಾರಿಯರ್ಸ್ ತಂಡ, ಕರ್ನಾಟಕ ರಾಜ್ಯ ಮುಸ್ಲಿಂ ಲೇಖಕರು ಮತ್ತು ಪತ್ರಕರ್ತರ ಸಂಘ ಬೆಂಗಳೂರು ಮುಂತಾದ ಸಂಘಟನೆಗಳಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.