ಜನಸಾಮಾನ್ಯರ ಹಿತದೃಷ್ಟಿಯಿಂದ ಕೂಡಲೇ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಇಳಿಕೆ ಮಾಡಬೇಕು ಎಂದು ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಖಂಡಿಸಿದ್ದಾರೆ. ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಸಾಮಾನ್ಯರ ಜನರ ಬದುಕನ್ನು ಕಸಿದುಕೊಳ್ಳುತ್ತಿದೆ.. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಮಾಡಿರುವ ಕಾಂಗ್ರೆಸ್ ಸರ್ಕಾರ ಅವೈಜ್ಞಾನಿಕ ಗ್ಯಾರೆಂಟಿ ಯೋಜನೆಗಳಿಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹಣ ಸರಿದೂಗಿಸಲು ಹೆಣಗಾಡುತ್ತಿದೆ.. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ ಮೂರು […]
ಬಂದಾರು : ಜೂ 09 ಬಂದಾರು ಗ್ರಾಮದ ಮೈರೋಳ್ತಡ್ಕ 218 ಬೂತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಮೈರೋಳ್ತಡ್ಕ ಬಸ್ ನಿಲ್ದಾಣ ಬಳಿ ಸತತ 3 ನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣವಚನವನ್ನು ನರೇಂದ್ರ ಮೋದಿ ಸ್ವೀಕರಿಸಿದ್ದು, ಹಾಗೂ ಸಚಿವ ಸಂಪುಟ ಸಚಿವರು ಹಾಗೂ ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಭೂತಪೂರ್ವ ಗೆಲುವನ್ನು ಸಾಧಿಸಿದ್ದಾರೆ. ಆ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಜಯಘೋಷ ಕೂಗಿ ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.Read More
ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಭರ್ಜರಿ ಮತಗಳ ಅಂತರದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರಿನಿವಾಸ ಪೂಜಾರಿ 12 ನೇ ಸುತ್ತಿನ ಮತ ಎಣಿಕೆ ಮುಂದುವರಿದಿದ್ದು, ಬ್ರಿಜೇಶ್ ಚೌಟ 4,79,806 ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ 3,65,721 .ಅಂತರ 1,14,085Read More
ಬೆಳ್ತಂಗಡಿ: ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯು ಜೂ 3 ರಂದು ಬೆಳ್ತಂಗಡಿ ತಾಲೂಕು ಕಚೇರಿಯ ಮತದಾನ ಕೇಂದ್ರದಲ್ಲಿ ಆರಂಭಗೊಂಡಿದ್ದು ಒಟ್ಟು 3 ಮತದಾನ ಕೇಂದ್ರದಲ್ಲಿ ಮತದಾನ ನಡೆಯುತ್ತಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 1543 ಮತದಾರರಿದ್ದು ಬೆಳ್ತಂಗಡಿ ಆಡಳಿತ ಸೌಧದ ಎರಡು ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದ್ದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ ಪ್ರತಾಪ್ ಸಿಂಹ ನಾಯಕ್ ಹಾಗೂ ಡಾ ಸ್ವೀಕೃತ ಪೂಂಜ ಸೇರಿದಂತೆ ಮತದಾನ ಮಾಡಿದ್ದಾರೆRead More
ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಏಪ್ರಿಲ್ 26 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಮೇ 7 ರಂದು 2ನೇ ಹಂತದ ಚುನಾವಣೆ ನಡೆಯಲಿದೆ. 26ಕ್ಕೆ ಮೊದಲ ಹಂತದ ಲೋಕ ಮತದಾನ ಹಿನ್ನೆಲೆ, ಮತಗಟ್ಟೆಗಳಲ್ಲಿ ಕೋವಿಡ್ ಹಾಗೂ ಹೀಟ್ ವೇವ್ ಮುನ್ನೆಚ್ಚರಿಕೆ ನೀಡಿದೆ ಆರೋಗ್ಯ ಇಲಾಖೆ. ಕೋವಿಡ್ ಪ್ರಕರಣಗಳು ಹತೋಟಿಯಲ್ಲಿದ್ದರೂ CAB ಅನುಸರಿಸುವಂತೆ ಸೂಚನೆ ನೀಡಿದೆ. ಸದ್ಯ ಹವಾಮಾನದಲ್ಲಿ ತಾಪಮಾನ ಹೆಚ್ಚಿರೋದರಿಂದ ಅಗತ್ಯ ಕ್ರಮವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಮತದಾನದ ದಿನದಂದು ಮತಗಟ್ಟೆಗಳಲ್ಲಿ […]Read More
ಈ ಹಿಂದೆ ಶಿರೂರು ಸಮುದ್ರದ ಮಧ್ಯದಲ್ಲಿ ಮತದಾನ ಜಾಗೃತಿ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ಇಂತದ್ದೇ ಸೃಜನಾತ್ಮಕ ಶೈಲಿಯಲ್ಲಿ ಬಿಎಂಟಿಸಿ ವತಿಯಿಂದ ಜಾಗೃತಿ ಮಾಡಲಾಗಿದೆ. ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್ ಏಪ್ರಿಲ್ 26 ಮೊದಲ ಹಂತದ ಲೋಕಾಸಭಾ ಚುನಾವಣ ಮತದಾನ ನಡೆಯಲಿದೆ. ಎಲ್ಲೆಡೆ ಮತ ಹಾಕುವಂತೆ ಜಾಗೃತಿ ಮೂಡಿಸಲಾಗ್ತಿದೆ. ಬಿಎಂಟಿಸಿ ಬಸ್ ಸಹ ಜಾಗೃತಿ ಮೂಡಿಸಿದೆ. ಬಿಎಂಟಿಸಿಯಿಂದ ವಿನೂತನ ಜಾಗೃತಿ ಮೂಡಿಸಲಾಗ್ತಿದೆ. ಮತದಾನದ ಸಂಖ್ಯೆ ಹೆಚ್ಚಿಸಲು ಜನರಲ್ಲಿ ಜಾಗೃತಿ ಮೂಡಿಸಲಾಗಿದ್ದು, ಮತದಾನ ಹಾಕುವಂತೆ ಮನವಿ ಮಾಡಲಾಗ್ತಿದೆ. […]Read More
ಕಡಿರುದ್ಯಾವರ: ಲಾಯಿಲ ಮಹಾ ಶಕ್ತಿ ಕೇಂದ್ರದ ಕಡಿರುದ್ಯಾವರ ಗ್ರಾಮದಲ್ಲಿ ಯುವ ಚೌಪಾಲ್ ಕಾರ್ಯಕ್ರಮ
ಕಡಿರುದ್ಯಾವರ: ಲಾಯಿಲ ಮಹಾ ಶಕ್ತಿ ಕೇಂದ್ರದ ಕಡಿರುದ್ಯಾವರ ಗ್ರಾಮದಲ್ಲಿ ಯುವ ಚೌಪಾಲ್ ಕಾರ್ಯಕ್ರಮ ಮಾ.20 ರಂದು ನಡೆಯಿತು. ಕಾರ್ಯಕ್ರಮದ ಬಗ್ಗೆ ಯುವ ಮೋರ್ಚಾ ಉಪಾಧ್ಯಕ್ಷರಾದ ಪ್ರಶಾಂತ್ ಅಂತರ ಇವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಪ್ರಮುಖರಾದ ಸೂರಜ್ ಗೌಡ ವಳಂಬ್ರ, ಪಂಚಾಯತ್ ಅಧ್ಯಕ್ಷರಾದ ರತ್ನಾವತಿ ಬಾಲಕೃಷ್ಣ ಹಾಗೂ ಬೂತ್ ಸಮಿತಿ ಅಧ್ಯಕ್ಷ ಕಾರ್ಯದರ್ಶಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.Read More
ಬೆಳ್ತಂಗಡಿ : ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಇದರ ಮೊದಲ ಕಾರ್ಯಕಾರಣಿ ಸಭೆಯು ಪಕ್ಷದ ಕಚೇರಿಯಲ್ಲಿ ನಡೆಯಿತು. ಮುಂದಿನ ಜವಾಬ್ದಾರಿ ಹಾಗೂ ಮುಂದಿನ ಕಾರ್ಯ ಯೋಜನೆ ಲೋಕಸಭಾ ಚುನಾವಣಾ ತಯಾರಿ, ಕಾರ್ಯಾಚಟುವಟಿಗಳ ಬಗ್ಗೆ ಸವಿಸ್ತಾರವಾಗಿ ಯುವಮೋರ್ಚಾ ಪ್ರಭಾರಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ ವಹಿಸಿ ಯುವ ಚೌಪಾಲ್, ಟೆನ್ ಯೂತ್ ಒನ್ ಗ್ರಾಮ್ , ಗೋಡೆ ಬರಹ,ಪ್ರಧಾನಿ ನರೇಂದ್ರ ಮೋದಿಜಿ ಸಾಧನೆಯ ರೀಲ್ಸ್ […]Read More
ಬಂದಾರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಆಗಿ ದಿನೇಶ್ ಗೌಡ ಖಂಡಿಗ ನೇಮಕ
ಬಂದಾರು: ಭಾರತೀಯ ಜನತಾ ಪಾರ್ಟಿ, ಬಂದಾರು ಗ್ರಾಮದ ನೂತನ ಶಕ್ತಿ ಕೇಂದ್ರ ಪ್ರಮುಖ್ ಆಗಿ ದಿನೇಶ್ ಗೌಡ ಖಂಡಿಗ ಇವರು ನೇಮಕಗೊoಡಿದ್ದಾರೆ . ಇವರು ಪ್ರಸ್ತುತ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದಾರೆ ಹಾಗೂ ಮೈರೋಳ್ತಡ್ಕ ಪ್ರಾಥಮಿಕ ಶಾಲಾ ಎಸ್ ಡಿಎಂಸಿ ಸಮಿತಿ ಅಧ್ಯಕ್ಷರಾಗಿರುತ್ತಾರೆ, ಹಲವಾರು ಸಂಘ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.Read More