• September 19, 2024

Tags :Bandaru

ಕಾರ್ಯಕ್ರಮ

ಬಂದಾರು ಹಿ. ಪ್ರಾ ಶಾಲೆಯ ಅಕ್ಷರ ದಾಸೋಹ ಕೊಠಡಿಯ ಉದ್ಘಾಟನೆ

ಬಂದಾರು: ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿಯ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅದ್ಯಕ್ಷರಾದ ಪರಮೇಶ್ವರಿ ಗೌಡ ಇವರು ಉದ್ಘಾಟಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ಗಂಗಾಧರ್,ಪಂ. ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಶಾಲಾ ಎಸ್ ಡಿ ಎಂ ಸಿ ಅದ್ಯಕ್ಷ ಉಮೇಶ್ ಗೌಡ, ಉಪಾಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರಾದ ಮಂಜ ನಾಯ್ಕ್ ಹಾಗೂ ಶಿಕ್ಷಕ ವೃಂದ ,ಪೋಷಕರು ಹಾಜರಿದ್ದರು. ಹಾಗೂ ಶಾಲಾ ಪೋಷಕರ ಸಭೆಯನ್ನು ನಡೆಸಲಾಯಿತು.Read More

ಕಾರ್ಯಕ್ರಮ ಜಿಲ್ಲೆ ಸ್ಥಳೀಯ

ಬಂದಾರು : “ರೈತ ಕ್ಷೇತ್ರ ಪಾಠ ಶಾಲೆ ” ಕಾರ್ಯಕ್ರಮದಡಿಯಲ್ಲಿ ತರಕಾರಿ ಕೃಷಿ

ಬಂದಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯದ ಬಂದಾರು ಕಾರ್ಯಕ್ಷೇತ್ರ ದಲ್ಲಿ “ರೈತ ಕ್ಷೇತ್ರ ಪಾಠ ಶಾಲೆ ” ಕಾರ್ಯಕ್ರಮದಡಿಯಲ್ಲಿ ತರಕಾರಿ ಕೃಷಿ ಬಗ್ಗೆ ತರಬೇತಿ ಕಾರ್ಯಕ್ರಮವು ಪುಯಿಲ ಸೇಸಪ್ಪ ಗೌಡರ ಮನೆಯಲ್ಲಿ ಜ.24 ರಂದು ನಡೆಯಿತು. ಯೋಜನಾಧಿಕಾರಿ ಯಶವಂತರವರು ತರಕಾರಿ ಕೃಷಿ ತರಬೇತಿ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಭಾಗದ ಕೇಂದ್ರ ಕಚೇರಿಯ ಯೋಜನಾಧಿಕಾರಿ ಸುಧೀರ್ ಜೈನ್ ರವರು ಲಾಭದಾಯಕ ತರಕಾರಿ ಕೃಷಿ ಮತ್ತು ತರಕಾರಿ […]Read More

ಕ್ರೀಡೆ ಜಿಲ್ಲೆ ಸ್ಥಳೀಯ

ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟ:ಬಂದಾರು ಗ್ರಾ.ಪಂ ಮಹಿಳೆಯರ ಖೋಖೋ‌ ತಂಡ ಪ್ರಥಮ ಸ್ಥಾನ:

ಬಂದಾರು: ಮಂಗಳೂರಿನ ಮಂಗಳಾ ಕ್ರೀಡಾಂಗದಲ್ಲಿ ಜ.6 ರಂದು ನಡೆದ 75ನೇ ಸ್ವಾತಂತ್ರ್ಯದ ಅಮೃತಮಹೋತ್ಸದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ,ಯುವ ಸಬಲೀಕರಣ ಮತ್ತು ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಯೋಗದೊಂದಿಗೆ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾಕೂಟ 2022-23 ಸಾಲಿನ ಮಹಿಳೆಯರ ಖೋ ಖೋ ಪಂದ್ಯಾಟದಲ್ಲಿ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮ ಪಂಚಾಯತ್ ತಂಡ ಅದ್ಬುತ,ರೋಚಕ ಪ್ರದರ್ಶನ ನೀಡಿ ಮಂಗಳೂರು ತಂಡವನ್ನು ಮಣಿಸಿ ಪ್ರಥಮ ಸ್ಥಾನ […]Read More

ಜಿಲ್ಲೆ ಸ್ಥಳೀಯ

ಬಂದಾರು ಗ್ರಾಮದ ನಿರುಂಬುಡ -ನಾವುಳೆ -ಸುಣ್ಣಾನ-ಖಂಡಿಗ ಸಂಪರ್ಕ ರಸ್ತೆಗೆ ರೂ 3.30 ಕೋಟಿ

ಬಂದಾರು: ಬಂದಾರು ಗ್ರಾಮದ ನಿರುಂಬುಡ- ನಾವುಳೆ – ಸುಣ್ಣಾನ ಖಂಡಿಗ ಸಂಪರ್ಕ ರಸ್ತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರೂ 3.30 ಕೋಟಿ ಅನುದಾನ ಬಿಡುಗಡೆಗೊಂಡಿದೆ. ಆ ಪ್ರಯುಕ್ತ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರುಗೆ ಬಂದಾರು ಗ್ರಾಮಸ್ಥರು ಅಭಿನಂದನೆಯನ್ನು ತಿಳಿಸಿದ್ದಾರೆ.Read More

ನಿಧನ ಸ್ಥಳೀಯ

ಮೈರೋಳ್ತಡ್ಕ: ಬಂದಾರು ಗ್ರಾಮದ ಮೈರೋಳ್ತಡ್ಕ ನಾವುಳೆ ನಿವಾಸಿ ಅಣ್ಣು ಗೌಡ ನಿಧನ

ಮೈರೋಳ್ತಡ್ಕ:ಬಂದಾರು ಗ್ರಾಮದ ಮೈರೋಳ್ತಡ್ಕ ನಾವುಳೆ ನಿವಾಸಿ ಅಣ್ಣು ಗೌಡ(87 ವರ್ಷ) ಇವರು ಅಲ್ಪಕಾಲದ ಅಸೌಖ್ಯದಿಂದ ಡಿ.05 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ನೀಲಮ್ಮ 3 ಗಂಡು,4 ಹೆಣ್ಣು ಮಕ್ಕಳು ,ಸಹೋದರ ,ಸಹೋದರಿಯರು, ಮೊಮ್ಮಕ್ಕಳು ,ಬಂಧು -ಬಳಗ,ಕುಟುಂಬ ವರ್ಗದವರನ್ನು ಅಗಲಿದ್ದಾರೆ.Read More

ಆಯ್ಕೆ ಜಿಲ್ಲೆ ಸ್ಥಳೀಯ

ರಾಜ್ಯ ಮಟ್ಟದ “ಅಕ್ಷರ ಸಿರಿ” ಪ್ರಶಸ್ತಿಗೆ ಭಾಜನರಾದ ಬಂದಾರು ಸ.ಉ.ಹಿ,ಪ್ರಾ ಶಾಲಾ ದೈಹಿಕ

ಬಂದಾರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವಾಲಿಬಾಲ್, ಖೊ-ಖೊ ಪಂದ್ಯಾವಳಿಯಲ್ಲಿ ಹಾಗೂ ಅಥ್ಲೆಟಿಕ್ಸ್ ನಲ್ಲಿ ಬೆಳ್ತಂಗಡಿ ತಾಲೂಕಿನ ಹೆಸರನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುವಂತೆ ಮಾಡಿದ ಸ.ಉ.ಹಿ.ಪ್ರಾ ಶಾಲೆ ಬಂದಾರು ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷರು, ಅಪ್ರತಿಮ ಕ್ರೀಡಾ ಸಾಧಕರಾದ ಪ್ರಶಾಂತ್ ಅವರು ಈ ಬಾರಿಯ ರಾಜ್ಯ ಮಟ್ಟದ “ಅಕ್ಷರ ಸಿರಿ” ಪ್ರಶಸ್ತಿಗೆ ಬಾಜನರಾಗಿದ್ದಾರೆ. ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ರಾಜ್ಯದ ಶಿಕ್ಷಣ ಸಚಿವರಿಂದ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.  ಇವರಿಗೆ ತಾಲೂಕಿನ ಸಮಸ್ತ ಗುರುಬಳಗ ಅಭಿನಂದನೆಯನ್ನು ತಿಳಿಸಿದ್ದಾರೆ.Read More

ಕಾರ್ಯಕ್ರಮ ಕ್ರೀಡೆ ಜಿಲ್ಲೆ ಸ್ಥಳೀಯ

ಕೋಟ ಹೊಳಪು -2022 :ಮಹಿಳೆಯರ ವಿಭಾಗದಲ್ಲಿ ಬಂದಾರು ಗ್ರಾ.ಪಂ ಸದಸ್ಯೆ ವಿಮಲ 100,200

ಬಂದಾರು: ಡಾ| ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ ಮತ್ತು ಕೋಟತಟ್ಟು ಗ್ರಾಮ ಪಂಚಾಯತಿ ವತಿಯಿಂದ ನಡೆದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪಂಚಾಯತ್ ರಾಜ್, ನಗರಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ಮತ್ತು ಸಿಬ್ಬಂದಿಗಳಿಗೆ ನಡೆದ ಹೊಳಪು-2022 ಕ್ರೀಡಾಕೂಟದಲ್ಲಿ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮ ಪಂಚಾಯತ್ ಸದಸ್ಯೆ ವಿಮಲ ಮಹಿಳೆಯರ ವಿಭಾಗದ 100 ಮೀಟರ್, 200 ಮೀಟರ್ ಓಟದಲ್ಲಿ ಪ್ರಥಮ, ಗುಂಡೆಸೆತದಲ್ಲಿ ದ್ವಿತೀಯ ಸ್ವಾನ ಪಡೆದಿರುತ್ತಾರೆ.ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ […]Read More

ಕ್ರೀಡೆ ಜಿಲ್ಲೆ ಸ್ಥಳೀಯ

ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ಬಂದಾರು ಗ್ರಾಮ ಪಂಚಾಯತು ಮಹಿಳೆಯರ ಖೋ ಖೋ

ಬಂದಾರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ತಾಲುಕು ಪಂಚಾಯತ್ ಬೆಳ್ತಂಗಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳ್ತಂಗಡಿ, ಶಾಲಾ ಮತ್ತು ಸಾಕ್ಷರತಾ ಇಲಾಖೆ ಬೆಳ್ತಂಗಡಿ, ಗ್ರಾ.ಪಂ ನಾವೂರು ಹಾಗೂ ತಾಲೂಕಿನ ಎಲ್ಲಾ ಗ್ರಾ.ಪಂ ಗಳ ನೇತೃತ್ವದಲ್ಲಿ ನವೋದಯ ಯುವಕ ಮಂಡಲ( ರಿ) ನಾವೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವೂರು ಇದರ ಸಹಭಾಗಿತ್ವದಲ್ಲಿ 2022-23 ನೇ ಸಾಲಿನ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ನ. 20 ರಂದು ಸರಕಾರಿ […]Read More

ಜಿಲ್ಲೆ ಸಮಸ್ಯೆ ಸ್ಥಳೀಯ

ಬಂದಾರು: ಇತ್ತೀಚೆಗೆ ಮೃತಪಟ್ಟ ನೇರೋಳ್ದಪಲಿಕೆ ನಿವಾಸಿ ಚಂರ್ಬೆ ಅವರ ಕುಟುಂಬಕ್ಕೆ ಸಹಾಯಹಸ್ತ

ಬಂದಾರು: ಬಂದಾರು ಗ್ರಾಮದ ಬೈಪಾಡಿ ನೇರೋಳ್ದಪಲಿಕೆ (ಪೆರ್ಲ) ಕಾಲೋನಿಯಲ್ಲಿ ಇತ್ತೀಚೆಗೆ ಆಕಸ್ಮಿಕವಾಗಿ ಮೃತರಾದ ಬಾಬು ಅವರ ತಾಯಿ ಚಂರ್ಬೆ ಅವರ ಕುಟುಂಬಕ್ಕೆ  ಶಾಸಕ ಹರೀಶ್ ಪೂಂಜರವರು ನೀಡಿದ ಧನ ಸಹಾಯ ಹಾಗೂ ಗ್ರಾಮಪಂಚಾಯತ್ ವತಿಯಿಂದ ತುರ್ತು ಸಹಾಯದ ನಿಧಿಯ ರೂ 3,000/- ದ ಚೆಕ್ ಬಂದಾರು ಗ್ರಾ.ಪಂ. ಅಧ್ಯಕ್ಷೆ  ಪರಮೇಶ್ವರಿ ಕೆ ಗೌಡ ಹಾಗೂ ಬೂತ್ ಪ್ರಮುಖರಾದ  ಹೊನ್ನಪ್ಪ ಗೌಡ ಅವರು ಮೃತರ ಕುಟುಂಬಕ್ಕೆ  ಹಸ್ತಾಂತರ ಮಾಡಿ, ಸಾಂತ್ವನ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ. ಅಧ್ಯಕ್ಷೆ […]Read More

ಕಾರ್ಯಕ್ರಮ ಸಭೆ

ಬಂದಾರು ಗ್ರಾ.ಪಂ ನ ಪ್ರಥಮ ಹಂತದ ಗ್ರಾಮ ಸಭೆ

ಬಂದಾರು: ಬಂದಾರು ಗ್ರಾ. ಪಂಚಾಯತಿನ 2021-22ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ಅಧ್ಯಕ್ಷೆ ಪರಮೇಶ್ವರಿ ಗೌಡರವರ ಅಧ್ಯಕ್ಷತೆಯಲ್ಲಿ ಅ. 10ರಂದು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜರಗಿತು. ನೋಡಲ್ ಅಧಿಕಾರಿಯಾಗಿ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜ ನಾಯ್ಕ ವಹಿಸಿದ್ದರು. ಪುನರಡ್ಕದಲ್ಲಿ ಬೋರ್ವೆಲ್ ತೆಗೆದಿದ್ದೀರಿ ಪಂಪು ಹಾಕಿದ್ದೀರಿ ಆದರೆ ಅಲ್ಲಿ ನೀರಿಲ್ಲ.ಏನು ವ್ಯವಸ್ಥೆ ಕೈಗೊಂಡಿದ್ದೀರಿ ಎಂದು ಗ್ರಾಮಸ್ಥರು ಕೇಳಿದಾಗ ಅದಕ್ಕೆ ಉತ್ತರಿಸಿದ ಅಭಿವೃದ್ಧಿ ಅಧಿಕಾರಿ ಮೋಹನ್ ಮಾತನಾಡಿ ಅಲ್ಲಿ ಟ್ಯಾಂಕಿ ಮಾಡಲು ನಾವು ಜಾಗ ನೋಡಿದ್ದೇವೆ […]Read More

error: Content is protected !!