ಬಂದಾರು : “ರೈತ ಕ್ಷೇತ್ರ ಪಾಠ ಶಾಲೆ ” ಕಾರ್ಯಕ್ರಮದಡಿಯಲ್ಲಿ ತರಕಾರಿ ಕೃಷಿ ತರಬೇತಿ ಕಾರ್ಯಕ್ರಮ
ಬಂದಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯದ ಬಂದಾರು ಕಾರ್ಯಕ್ಷೇತ್ರ ದಲ್ಲಿ “ರೈತ ಕ್ಷೇತ್ರ ಪಾಠ ಶಾಲೆ ” ಕಾರ್ಯಕ್ರಮದಡಿಯಲ್ಲಿ ತರಕಾರಿ ಕೃಷಿ ಬಗ್ಗೆ ತರಬೇತಿ ಕಾರ್ಯಕ್ರಮವು ಪುಯಿಲ ಸೇಸಪ್ಪ ಗೌಡರ ಮನೆಯಲ್ಲಿ ಜ.24 ರಂದು ನಡೆಯಿತು.
ಯೋಜನಾಧಿಕಾರಿ ಯಶವಂತರವರು ತರಕಾರಿ ಕೃಷಿ ತರಬೇತಿ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಭಾಗದ ಕೇಂದ್ರ ಕಚೇರಿಯ ಯೋಜನಾಧಿಕಾರಿ ಸುಧೀರ್ ಜೈನ್ ರವರು ಲಾಭದಾಯಕ ತರಕಾರಿ ಕೃಷಿ ಮತ್ತು ತರಕಾರಿ ರೈತೊತ್ಪಾದಕ ಸಹಕಾರಿ ಸಂಘ ದ ಬಗ್ಗೆ ಮಾಹಿತಿ ನೀಡಿದರು.
ಸಿದ್ದವನ ನರ್ಸರಿಯ ವಾಸು ಕುಮಾರ್ ರವರು ಬೀಜಗಳ ಆಯ್ಕೆ ಮತ್ತು ಗಿಡಗಳ ಕಸಿ ಕಟ್ಟುವಿಕೆ ಬಗ್ಗೆ ಮಾಹಿತಿ ನೀಡಿದರು.
ಈ ತರಬೇತಿ ಕಾರ್ಯಕ್ರಮ ದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿ ಕೆ.ಗೌಡ ,ಬಂದಾರು ಹಾಗೂ ಮೈರೋಳ್ತಡ್ಕ ಒಕ್ಕೂಟ ದ ಅಧ್ಯಕ್ಷರಾದ ಶ್ರೀಲತಾ ಮತ್ತು ಕೃಷ್ಣಯ್ಯ ಆಚಾರ್ಯ ,ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಉದಯ ಬಿ. ಕೆ ಹಾಗೂ ಬಂದಾರು ಗ್ರಾಮದ ತರಕಾರಿ ಕೃಷಿ ಬೆಳೆಯುವ ರೈತರು ಉಪಸ್ಥಿತರಿದ್ದರು.
ತಾಲೂಕ್ ಕೃಷಿ ಅಧಿಕಾರಿ ಭಾಸ್ಕರ್ ರವರು ಕಾರ್ಯಕ್ರಮ ನಿರೂಪಿಸಿದರು. ವಲಯದ ಮೇಲ್ವಿಚಾರಕರಾದ ಪ್ರೇಮರವರು ಸ್ವಾಗತಿಸಿ, ಸೇವಾಪ್ರತಿನಿಧಿ ನಿರಂಜನ್ ಧನ್ಯವಾದ ನೀಡಿದರು. ಸೇವಾಪ್ರತಿನಿಧಿ ಶ್ರೀಮತಿ ಚಂದ್ರಕಲಾ ರವರು ಸಹಕರಿಸಿದರು.