• October 13, 2024

ಕೋಟ ಹೊಳಪು -2022 :ಮಹಿಳೆಯರ ವಿಭಾಗದಲ್ಲಿ ಬಂದಾರು ಗ್ರಾ.ಪಂ ಸದಸ್ಯೆ ವಿಮಲ 100,200 ಮೀಟರ್ ಓಟ ಪ್ರಥಮ ಹಾಗೂ ಗುಂಡೆಸೆತದಲ್ಲಿ ದ್ವಿತೀಯ

 ಕೋಟ ಹೊಳಪು -2022 :ಮಹಿಳೆಯರ ವಿಭಾಗದಲ್ಲಿ ಬಂದಾರು ಗ್ರಾ.ಪಂ  ಸದಸ್ಯೆ  ವಿಮಲ  100,200 ಮೀಟರ್ ಓಟ ಪ್ರಥಮ ಹಾಗೂ ಗುಂಡೆಸೆತದಲ್ಲಿ ದ್ವಿತೀಯ

 

ಬಂದಾರು: ಡಾ| ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ ಮತ್ತು ಕೋಟತಟ್ಟು ಗ್ರಾಮ ಪಂಚಾಯತಿ ವತಿಯಿಂದ ನಡೆದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪಂಚಾಯತ್ ರಾಜ್, ನಗರಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ಮತ್ತು ಸಿಬ್ಬಂದಿಗಳಿಗೆ ನಡೆದ ಹೊಳಪು-2022 ಕ್ರೀಡಾಕೂಟದಲ್ಲಿ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮ ಪಂಚಾಯತ್ ಸದಸ್ಯೆ ವಿಮಲ ಮಹಿಳೆಯರ ವಿಭಾಗದ 100 ಮೀಟರ್, 200 ಮೀಟರ್ ಓಟದಲ್ಲಿ ಪ್ರಥಮ, ಗುಂಡೆಸೆತದಲ್ಲಿ ದ್ವಿತೀಯ ಸ್ವಾನ ಪಡೆದಿರುತ್ತಾರೆ.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ,ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ,ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರಶಸ್ತಿ ವಿತರಿಸಿದರು.


ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪರಮೇಶ್ವರಿ ಕೆ.ಗೌಡ ,ಉಪಾಧ್ಯಕ್ಷರಾದ ಗಂಗಾಧರ ಮೊಗ್ರು ,ಅಭಿವೃದ್ಧಿ ಅಧಿಕಾರಿ ಶ್ರೀ ಮೋಹನ್ ಬಂಗೇರ ನಾವೂರು,ಗ್ರಾ.ಪಂ ಸದಸ್ಯರಾದ ದಿನೇಶ್ ಗೌಡ ಖಂಡಿಗ,ಬಾಲಕೃಷ್ಣ ಗೌಡ ಮುಗೇರಡ್ಕ , ಗ್ರಾ.ಪಂ ಸದಸ್ಯರುಗಳು ಪ್ರಮುಖರಾದ ಪ್ರಶಾಂತ್ ಗೌಡ ನಿರುಂಬುಡ,ಗಿರೀಶ್ ಗೌಡ ಬಿ.ಕೆ , ಗ್ರಾ.ಪಂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!