ಬಂಟ್ವಾಳ: ಕಾರಿಗೆ ಡಿಕ್ಕಿ ಹೊಡೆದು ಮನೆಗೆ ನುಗ್ಗಿದ ಪಿಕಪ್: ಕೂದಲೆಳೆ ಅಂತರದಲ್ಲಿ ಪಾರಾದ ಮನೆಮಂದಿ
ಬಂಟ್ವಾಳ: ಮಡಂತ್ಯಾರ್ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಪಿಕಪ್ ಹಾಗೂ ಮಂಗಳೂರಿನಿಂದ ಮಡಂತ್ಯಾರ್ ಕಡೆ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು,ಪಿಕಪ್ ವಾಹನ ಮನೆಗೆ ನುಗ್ಗಿದ ಘಟನೆ ನ.26 ರಂದು ಬಂಟ್ವಾಳದಲ್ಲಿ ನಡೆದಿದೆ.
ಪರಿಣಾಮ ಮನೆಗೆ ಅಪಾರ ಹಾನಿಯಾಗಿದ್ದು ಮನೆಯವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಚಾಲಕರಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಭಾರೀ ಅನಾಹುತದಿಂದ ಬಚಾವ್ ಆಗಿದ್ದಾರೆ.