• July 27, 2024

ತಾಲೂಕಿನ 28 ದೇವಾಲಯಗಳಿಗೆ ರೂ.10.00 ಕೋಟಿ ಅನುದಾನ

 ತಾಲೂಕಿನ 28 ದೇವಾಲಯಗಳಿಗೆ ರೂ.10.00 ಕೋಟಿ ಅನುದಾನ

ಬೆಳ್ತಂಗಡಿ: ನ.24: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 28 ದೇವಸ್ಥಾನಗಳಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಕರ್ನಾಟಕ ಸರಕಾರ 10.00 ಕೋಟಿ ರೂಪಾಯಿಗಳ ಅನುದಾನದ ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು ತಾಲೂಕಿನ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಈ ಮಟ್ಟದ ಅಪಾರ ಪ್ರಮಾಣದಲ್ಲಿ ಅನುದಾನವನ್ನು ಮಂಜೂರಾತಿಗೊಳಿಸಿದ  ಮುಖ್ಯಮಂತ್ರಿಗಳಾದ  ಬಸವರಾಜ್ ಬೊಮ್ಮಾಯಿಯವರಿಗೆ, ಧಾರ್ಮಿಕ ದತ್ತಿ ಇಲಾಖಾ ಸಚಿವರಾದ  ಶಶಿಕಲಾ ಜೊಲ್ಲೆಯವರಿಗೆ, ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ  ನಳಿನ್ ಕುಮಾರ್ ಕಟೀಲ್‌ರವರಿಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್‌ರವರಿಗೆ ತಾಲೂಕಿನ ಜನತೆಯ ಪರವಾಗಿ ಶಾಸಕರಾದ  ಹರೀಶ್ ಪೂಂಜರವರು ಧನ್ಯವಾದಗಳನ್ನು ತಿಳಿಸಿರುತ್ತಾರೆ.

ಬೆಳ್ತಂಗಡಿ ತಾಲೂಕಿನ ವಿವಿಧ ಕಡೆ ಇರುವ 28 ದೇವಾಲಯಗಳಿಗೆ ಸರಕಾರದ ಈ ಯೋಜನೆಯಿಂದ ಮೂಲಭೂತ ಸೌಕರ್ಯ ವೃದ್ಧಿಸಲು ನೆರವಾಗಲಿದ್ದು ಈ ಕೆಳಗಿನ ಶ್ರೀ ಸೂರ್ಯನಾರಾಯಣ ದೇವಸ್ಥಾನ ನಾರಾವಿ, ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಕೊಕ್ಕಡ, ಶ್ರೀ ಸೋಮನಾಥೇಶ್ವರ ದೇವಸ್ಥಾನ ತೋಟತ್ತಾಡಿ, ಕೊರಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಉರುವಾಲು, ಶ್ರೀ ಗೋಪಾಕೃಷ್ಣ ದೇವಸ್ಥಾನ ನಾವೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು, ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಿತ್ತಬಾಗಿಲು, ಶ್ರೀ ಶಿಶಿಲೇಶ್ವರ ದೇವಸ್ಥಾನ ಶಿಶಿಲ, ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನ ಪಜಿರಡ್ಕ ಕಲ್ಮಂಜ, ಶ್ರೀ ಸೂರ್ಯನಾರಾಯಣ ದೇವಸ್ಥಾನ ಹೊಸಂಗಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶಿರ್ಲಾಲು, ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ಹತ್ಯಡ್ಕ ಇದರ ಅಭಿವೃದ್ಧಿ ಕಾರ್ಯಗಳಿಗೆ ತಲಾ ರೂ.೫೦.೦೦ ಲಕ್ಷಹಾಗೂ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪಡಂಗಡಿ, ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನ ಕರಿಮಣೇಲು, ಶ್ರೀ ಅರ್ಧನಾರೀಶ್ವರ ದೇವಸ್ಥಾನ ಇಂದಬೆಟ್ಟು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಬಂದಾರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕರಾಯ, ಶ್ರೀ ಮಹಿಷಮರ್ದಿನಿ ದೇವಸ್ಥಾನ ಪಾರೆಂಕಿ, ಶ್ರೀ ಮಹಾಗಣಪತಿ ದೇವಸ್ಥಾನ ಬಡಗಕಾರಂದೂರು, ಪೆರ್ಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಉಜಿರೆ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕೊಯ್ಯೂರು, ಸನ್ಯಾಸಿಕಟ್ಟೆ ಶ್ರೀ ಪರುಶುರಾಮ ದೇವಸ್ಥಾನ ಮುಂಡಾಜೆ, ಕುರಾಯ ಶ್ರೀ ಸದಾಶಿವೇಶ್ವರ ದೇವಸ್ಥಾನ ಬಂದಾರು, ಪೆರ್ಲ ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಬಂದಾರು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೇಳದಪೇಟೆ ಕಾಶಿಪಟ್ನ, ಶ್ರೀ ಉಮಾಮಹೇಶ್ವರಿ ದೇವಸ್ಥಾನ ಮರೋಡಿ, ಶ್ರೀ ಸದಾಶಿವ ದೇವಸ್ಥಾನ ಕಳೆಂಜ, ಶ್ರೀ ಉಮಾಮಹೇಶ್ವರಿ ದೇವಸ್ಥಾನ ಮೂಡುಕೋಡಿ ಇವುಗಳ ಅಭಿವೃದ್ಧಿ ಕಾರ್ಯಗಳಿಗೆ ತಲಾ ರೂ.25.00 ಲಕ್ಷ ಅನುದಾನ ಮಂಜೂರಾತಿಗೊಂಡಿದೆ ಎಂದು ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!