• October 30, 2024

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಒಂದು ಸಾವಿರ ಹಿಂದುತ್ವನಿಷ್ಠರಿಂದ ಉತ್ಸಾಹದ ಪಾಲ್ಗೊಳ್ಳುವಿಕೆ!

 ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಒಂದು ಸಾವಿರ ಹಿಂದುತ್ವನಿಷ್ಠರಿಂದ ಉತ್ಸಾಹದ ಪಾಲ್ಗೊಳ್ಳುವಿಕೆ!

 

ಹಿಂದೂ ಈಕೋಸಿಸ್ಟಮ್ ರಚಿಸಲು ನಾವು ಪ್ರತಿಯೊಂದು ರಾಜ್ಯದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯನ್ನು ರಚಿಸಿ, ಹಿಂದೂಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಜನಾಂದೋಲನವನ್ನು ಪ್ರಾರಂಭಿಸಲಿದ್ದೇವೆ.

  ಪ್ರತಿ ವರ್ಷ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕೆ ದೇಶ-ವಿದೇಶಗಳಿಂದ ಬರುವ ಹಾಗೂ  ‘ಹಿಂದೂ ರಾಷ್ಟ್ರ’ ಸಂಕಲ್ಪನೆಯೊಂದಿಗೆ ಜೋಡಿಸಲ್ಪಟ್ಟ  ಎಲ್ಲ ಹಿಂದೂ ಸಂಘಟನೆಗಳು ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ ಮೂಲಕ ವರ್ಷವಿಡೀ ಕೆಲಸ ಮಾಡಲು ನಿರ್ಧರಿಸಿವೆ. ಈ ಮೂಲಕ ಹಿಂದೂ ‘ಈಕೋ ಸಿಸ್ಟಮ್’ ರಚಿಸಲು ಪ್ರಯತ್ನಿಸಲಾಗುವುದು ಕಾಶ್ಮೀರ, ಬಂಗಾಳ ಮೊದಲಾದ ಪ್ರಾಂತ್ಯಗಳಲ್ಲಿ ಹಿಂದೂಗಳ ಮೇಲಾಗುತ್ತಿದ್ದ  ದೌರ್ಜನ್ಯಗಳು . ಇಂದು ದೇಶಾದ್ಯಂತ ಪ್ರಾರಂಭವಾಗಿದೆ.  ಇದರಿಂದ ಸರಕಾರವು ಹಿಂದೂಗಳ ಸಮಸ್ಯೆಗಳ ಬಗ್ಗೆ ಗಮನಹರಿಸುವಂತೆ ಮಾಡುವ 'ಒತ್ತಡದ ಗುಂಪು' ಕಾರ್ಯನಿರತಗೊಳ್ಳಲಿದೆ.  ಜಾತ್ಯಾತೀತತೆಯ ಹೆಸರಿನಲ್ಲಿ ಮಾಡಲಾಗುವ ಅಲ್ಪಸಂಖ್ಯಾತರ ತುಷ್ಟೀಕರಣ(ಒಲೈಕೆ)ವನ್ನು ನಿಲ್ಲಿಸಬೇಕು ಮತ್ತು ಹಿಂದೂ ಸಮಾಜದ ಮೇಲಾಗುತ್ತಿರುವ ಅನ್ಯಾಯಗಳ ವಿರುದ್ಧ ರಾಷ್ಟ್ರಮಟ್ಟದಲ್ಲಿ ಜನಾಂದೋಲನವನ್ನು ಪ್ರಾರಂಭಿಸಿ, ದೇಶಾದ್ಯಂತ 'ಹಿಂದೂ ರಾಷ್ಟ್ರ ನಿರ್ಮಾಣ' ಕಾರ್ಯಕ್ಕೆ ವೇಗ ನೀಡಲಾಗುವುದು ಎಂದು ‘ *ಹಿಂದೂ ಜನಜಾಗೃತಿ ಸಮಿತಿ’ಯ ಮಹಾರಾಷ್ಟ್ರ ಮತ್ತು ಛತ್ತೀಸಗಡ ರಾಜ್ಯ ಸಂಚಾಲಕ ಶ್ರೀ. ಸುನಿಲ ಘನವಟ* ಅವರು 'ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ'ದ  ಸಮಾರೋಪ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಫೋಂಡಾ (ಗೋವಾ) ದ ಹೋಟೆಲ್ ‘ಪಾನ್ ಅರೋಮಾ’ದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ‘ಗೋಮಾಂತಕ ಮಂದಿರ ಮಹಾಸಂಘ’ದ ರಾಜ್ಯ ಕಾರ್ಯದರ್ಶಿ ಶ್ರೀ. ಜಯೇಶ ಥಳಿ, ‘ಹಿಂದೂ ವಿಧಿಜ್ಞಾ ಪರಿಷತ್ತು’ ಗೋವಾ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ನಾಗೇಶ ಜೋಶಿ ಮತ್ತು ‘ಹಿಂದೂ ಜನಜಾಗೃತಿ ಸಮಿತಿ’ಯ ದಕ್ಷಿಣ ಗೋವಾ ರಾಜ್ಯ ಸಂಯೋಜಕರಾದ ಶ್ರೀ. ಸತ್ಯವಿಜಯ ನಾಯಿಕ ಉಪಸ್ಥಿತರಿದ್ದರು.

ಜೂನ್ 24 ರಿಂದ 30, 2024 ರ ಈ ಕಾಲಾವಧಿಯಲ್ಲಿ ಶ್ರೀ ರಾಮನಾಥ ದೇವಸ್ಥಾನ, ಫೋಂಡಾ, ಗೋವಾದಲ್ಲಿ ನಡೆದ 7 ದಿನಗಳ ಹಿಂದೂ ಅಧಿವೇಶನದಲ್ಲಿ ಅಮೇರಿಕಾ, ಸಿಂಗಾಪುರ, ಘಾನಾ (ದಕ್ಷಿಣ ಆಫ್ರಿಕಾ), ಇಂಡೋನೇಶಿಯಾ ಮತ್ತು ನೇಪಾಳ ಸೇರಿದಂತೆ ಭಾರತದ 26 ರಾಜ್ಯಗಳಿಂದ 1000 ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಇದರಲ್ಲಿ ಪ್ರಮುಖವಾಗಿ ವಿವಿಧ ಕ್ಷೇತ್ರಗಳ ಸಾಧಕರು, ತಜ್ಞರು, ಪತ್ರಕರ್ತರು, ಸಂತರು, ಧರ್ಮಾಚಾರ್ಯರು, ದೇವಸ್ಥಾನದ ವಿಶ್ವಸ್ತರು, ಪುರೋಹಿತರು, ನ್ಯಾಯವಾದಿಗಳು, ಹಿಂದುತ್ವನಿಷ್ಠರು, ಉದ್ಯಮಿಗಳು ಉಪಸ್ಥಿತರಿದ್ದರು.

ಭಾರತವನ್ನು ‘ಹಿಂದೂ ರಾಷ್ಟ್ರ’ವನ್ನಾಗಿ ಮಾಡುವುದರೊಂದಿಗೆ ‘ಕಾಶಿ-ಮಥುರಾ ದೇವಸ್ಥಾನಗಳನ್ನು ಮುಕ್ತಗೊಳಿಸಬೇಕು’ ಎಂಬ ಠರಾವು ಸರ್ವಾನುಮತದಿಂದ ಅನುಮೋದಿಸಲ್ಪಟ್ಟಿತು !

ಹಿಂದೂ ಜನಜಾಗೃತಿ ಸಮಿತಿ’ಯ ಶ್ರೀ. ಸುನಿಲ ಘನವಟ ಅವರು ತಮ್ಮ ಮಾತನ್ನು ಮುಂದುವರಿಸಿ, ಈ ಅಧಿವೇಶನದಲ್ಲಿ ಭಾರತ ಮತ್ತು ನೇಪಾಳವನ್ನು ಹಿಂದೂ ರಾಷ್ಟ್ರಗಳೆಂದು ಘೋಷಿಸುವುದು; ಕಾಶಿ-ಮಥುರಾ ಮೊದಲಾದ ಹಿಂದೂ ದೇವಸ್ಥಾನಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಿ ಹಿಂದೂಗಳಿಗೆ ವಹಿಸಿ ಕೊಡುವುದು; ಮತಾಂತರ ಮತ್ತು ಗೋಹತ್ಯೆಯ ವಿರುದ್ಧ ಕಠಿಣ ಕಾನೂನುಗಳನ್ನು ರಚಿಸುವುದು; ಹಲಾಲ್ ಸರ್ಟಿಫಿಕೇಶನ ನಿರ್ಬಂಧಿಸುವುದು; ಹಿಂದೂ ದೇವಸ್ಥಾನಗಳ ಸರಕಾರೀಕರಣ ರದ್ದುಗೊಳಿಸುವುದು; ಪ್ಲೇಸಸ್ ಆಫ್ ವರ್ಶಿಪ್ ಮತ್ತು ‘ವಕ್ಫ್’ ಕಾನೂನನ್ನು ರದ್ದುಗೊಳಿಸುವುದು; ಜನಸಂಖ್ಯೆ ನಿಯಂತ್ರಣ ಕಾನೂನುಗಳನ್ನು ಜಾರಿಗೊಳಿಸುವುದು; ಕಾಶ್ಮೀರಿ ಹಿಂದೂಗಳ ಪುನರ್ವಸತಿ; ಶ್ರೀರಾಮ ಸೇನೆಯ ಶ್ರೀ. ಪ್ರಮೋದ ಮುತಾಲಿಕ ಇವರ ಮೇಲಿನ ಗೋವಾ ನಿಷೇಧ ತೆರವುಗೊಳಿಸುವುದು; ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಹಾಕುವುದು; ಓಟಿಟಿ ಪ್ಲಾಟಫಾರ್ಮ್ಗಳನ್ನು ಕಾನೂನಿನ ವ್ಯಾಪ್ತಿಯಲ್ಲಿ ತರುವುದು; ಆನ್ಲೈನ್ ರಮ್ಮಿ ನಂತಹ ಜೂಜಿನ ಆಟಗಳನ್ನು ನಿಷೇಧಿಸುವುದು. ಮುಂತಾದ ವಿಷಯಗಳ ಮೇಲಿನ ಠರಾವುಗಳನ್ನು ‘ಹರ ಹರ ಮಹಾದೇವ’ ನಂತಹ ಜಯಘೋಷದೊಂದಿಗೆ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಈ ಠರಾವನ್ನು ಶೀಘ್ರದಲ್ಲೇ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಕಳುಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸತ್ಯವಿಜಯ ನಾಯಿಕ ಮಾತನಾಡಿ, ಈ ಅಧಿವೇಶನದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಲು ಸಮಾನಅಂಶಗಳ ಕಾರ್ಯಕ್ರಮಗಳಡಿ ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’, ‘ಹಿಂದೂ ರಾಷ್ಟ್ರ ಅಧಿವೇಶನ’, ‘ದೇವಸ್ಥಾನಗಳಲ್ಲಿ ಪ್ರಬೋಧನ ಸಭೆ’, ‘ ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ರಾಜ್ಯ ಮಟ್ಟದ ಮಂದಿರ ಪರಿಷತ್ತು ಆಯೋಜಿಸುವುದು’, ಲವ್ ಜಿಹಾದ’ ಹಾಗೆಯೇಹಲಾಲ ಜಿಹಾದ’ ಸಂದರ್ಭದಲ್ಲಿ ಜನಜಾಗೃತಿ ಸಭೆಗಳು ಮತ್ತು ಆಂದೋಲನಗಳು ಮುಂತಾದ ವಿವಿಧ ಉಪಕ್ರಮಗಳನ್ನು ಮುಂಬರುವ ವರ್ಷದಲ್ಲಿ ನಡೆಸಲು ಅಧಿವೇಶನದಲ್ಲಿ ನಿರ್ಧರಿಸಲಾಗಿದೆ. ಹಿಂದೂ ಧರ್ಮದ ಮೇಲೆ ನಾಟಕ, ಚಲನಚಿತ್ರ ಅಥವಾ ಇನ್ನಿತರ ಯಾವುದೇ ಮಾಧ್ಯಮದ ಮೂಲಕ ದಾಳಿ ನಡೆಸಿದರೆ ಅದನ್ನು ತೀವ್ರವಾಗಿ ವಿರೋಧಿಸಲಾಗುವುದು.

ಹಿಂದೂ ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸಲಾಗುವುದು!

ಈ ಸಮಯದಲ್ಲಿ ‘ ಗೋಮಾಂತಕ ಮಂದಿರ ಮಹಾಸಂಘ’ದ ಕಾರ್ಯದರ್ಶಿ ಶ್ರೀ. ಜಯೇಶ ಥಳಿ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಅಧಿವೇಶನದ ಮೂಲಕ ‘ಮಂದಿರ ಸಂಸ್ಕೃತಿ ರಕ್ಷಾ ಅಭಿಯಾನ ನಡೆಸಲಾಗಿದೆ. ಈ ಮೂಲಕ 710 ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದ್ದು, ಇನ್ನುಳಿದ ದೇವಸ್ಥಾನಗಳಲ್ಲೂ ವಸ್ತ್ರ ಸಂಹಿತೆ ಜಾರಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಮಂದಿರ ಮಹಾಸಂಘದ ವತಿಯಿಂದ ದೇಶಾದ್ಯಂತ 14 ಸಾವಿರ ದೇವಸ್ಥಾನಗಳ ಸಂಘಟನೆಯಾಗಿದೆ. ಈ ಸಂಘಟನೆಯನ್ನು ವಿಸ್ತರಿಸಲು ದೇಶದಾದ್ಯಂತ ಇರುವ ಚಿಕ್ಕ ದೊಡ್ಡ ದೇವಸ್ಥಾನಗಳನ್ನು ಕೂಡ ಇದರಲ್ಲಿ ಸಹಭಾಗಿತ್ವ ಮಾಡಿಕೊಳ್ಳಲಾಗುವುದು. ಇದರಿಂದ ದೇವಸ್ಥಾನಗಳ ರಕ್ಷಣೆ, ಅಭಿವೃದ್ಧಿಯೊಂದಿಗೆ ದೇವಸ್ಥಾನಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದಂತಹ ಇತರ ರಾಜ್ಯಗಳಲ್ಲಿ ದೇವಸ್ಥಾನಗಳನ್ನು ಸಂಘಟಿಸಲು, ಮಂದಿರ ಮಹಾಸಂಘದ ವತಿಯಿಂದ ಅನೇಕ ಸ್ಥಳಗಳಲ್ಲಿ ರಾಜ್ಯ ಮಟ್ಟದ ಮಂದಿರ ಪರಿಷತ್ತು ಆಯೋಜಿಸಲಾಗುತ್ತದೆ. ಜಾತ್ಯಾತೀತ’ ಸರಕಾರವು ದೇಶಾದ್ಯಂತ ಇರುವ ನಾಲ್ಕೂವರೆ ಲಕ್ಷಕ್ಕೂ ಅಧಿಕ ಹಿಂದೂ ದೇವಸ್ಥಾನಗಳನ್ನು ಸರಕಾರೀಕರಣಗೊಳಿಸಿದೆ. ಈ ದೇವಸ್ಥಾನಗಳನ್ನು ಸರಕಾರಿ ನಿಯಂತ್ರಣದಿಂದ ಮುಕ್ತಗೊಳಿಸಲು ರಾಷ್ಟ್ರವ್ಯಾಪಿ ಅಭಿಯಾನದಲ್ಲಿ ನಡೆಸಲಾಗುವುದು. ಇದರೊಂದಿಗೆ ದೇವಸ್ಥಾನದ 100 ಮೀಟರ್ ಪ್ರದೇಶದಲ್ಲಿ ಮದ್ಯ, ಮಾಂಸಗಳನ್ನು ನಿಷೇಧಿಸಲು ಸಾಂವಿಧಾನಿಕ ಮಾರ್ಗಗಳ ಮೂಲಕ ಆಂದೋಲನವನ್ನು ಆಯೋಜಿಸಲಾಗುವುದು. ಈ ಸಂದರ್ಭದಲ್ಲಿ , ‘ *ಹಿಂದೂ ವಿಧಿಜ್ಞ ಪರಿಷತ್ತು’ ಗೋವಾ ರಾಜ್ಯ ಕಾರ್ಯದರ್ಶಿ, ನ್ಯಾಯವಾದಿ ನಾಗೇಶ ಜೋಶಿ* ಮಾತನಾಡಿ, ಅಧಿವೇಶನದಲ್ಲಿ ದೇಶಾದ್ಯಂತ 215 ಕ್ಕಿಂತ ಹೆಚ್ಚು ನ್ಯಾಯವಾದಿಗಳು ಭಾಗವಹಿಸಿದ್ದರು. ಕಾಶಿ, ಮಥುರಾ, ಭೋಜಶಾಲಾ ಮುಂತಾದ ಪ್ರಮುಖ ಹಿಂದೂ ದೇವಸ್ಥಾನಗಳ ವಿಮೋಚನೆಗಾಗಿ ಹೋರಾಟ ನಡೆಯುತ್ತಿದೆ. ಪ್ರಸ್ತುತ, ದೇಶಾದ್ಯಂತ ಹಿಂದುತ್ವನಿಷ್ಠರಿಗೆ 'ದ್ವೇಷ-ಭಾಷಣ'ದ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವ ಕೆಲಸವು ನಗರ ನಕ್ಸಲವಾದಿಗಳಿಂದ ಯೋಜಿತ ರೀತಿಯಲ್ಲಿ ಕೆಲಸ ನಡೆಯುತ್ತಿದೆ. ಅನೇಕ ಬಾರಿ ಪ್ರಚಾರ ವ್ಯವಸ್ಥೆ, ಆಡಳಿತ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ಇತ್ಯಾದಿಗಳಲ್ಲಿ ಅನೇಕ ಕಮ್ಯುನಿಸ್ಟ್ ವಿಚಾರಗಳ ಜನರು ತುಂಬಿದ್ದಾರೆ ಎನ್ನುವ ಅನುಭವವಾಗುತ್ತದೆ. ಅವರ ಒಂದುಇಕೊಸಿಸ್ಟಮ್’ ಕಾರ್ಯನಿರತವಾಗಿದ್ದು, ಅದು ಹಿಂದೂ ಧರ್ಮದ ಮೇಲೆ ದಾಳಿ ಮಾಡಲು ಪ್ರಯತ್ನ ಮಾಡುತ್ತಿದೆ. ಈ ಈಕೋ ಸಿಸ್ಟಮ್’ ವಿರುದ್ಧ ಹೋರಾಡಲು ನಾವು ನ್ಯಾಯವಾದಿಗಳ ಸಂಘಟನೆಯನ್ನು ಹೆಚ್ಚಿಸಲಿದ್ದೇವೆ ಎಂದರು. ಈ ಅಧಿವೇಶನದ ನೇರ ಪ್ರಸಾರ ‘ಹಿಂದೂ ಜನಜಾಗೃತಿ ಸಮಿತಿ’ಯ ‘HinduJagruti’ ಈಯು-ಟ್ಯೂಬ’ ಚಾನೆಲ್ ಮತ್ತು facebook.com/hjshindi1 ಈ ಫೇಸಬುಕ್ ಮೂಲಕವೂ ನೇರ ಪ್ರಸಾರ ಮಾಡಲಾಗಿದೆ. ಇದರಿಂದ ಲಕ್ಷಾಂತರ ಜನರು ಈ ಕಾರ್ಯಕ್ರಮವನ್ನು ನೋಡಿದರು.

12ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಅಂದರೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಅಂಗೀಕರಿಸಲಾದ ಠರಾವ್‌ಗಳು :

  1. ಭಾರತದ ಬಹುಸಂಖ್ಯಾತ ಹಿಂದೂಗಳಿಗೆ ನ್ಯಾಯ ನೀಡಲು ಸಂವಿಧಾನದಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಪದಗಳನ್ನು ತೆಗೆದು, ಅಲ್ಲಿ ‘ಆಧ್ಯಾತ್ಮಿಕ’ ಪದವನ್ನು ಸೇರಿಸಿ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು !
  2. ‘ನೇಪಾಳವನ್ನು ಹಿಂದೂ ರಾಷ್ಟ್ರವಾಗಿ ಘೋಷಿಸಬೇಕು’ ಎಂಬ ಬೇಡಿಕೆಗೆ ಈ ಅಧಿವೇಶನದಲ್ಲಿ ಸಂಪೂರ್ಣ ಬೆಂಬಲ ನೀಡಲಾಗಿದೆ.
  3. ಹಿಂದೂಗಳ ಮೂಲಭೂತ ಹಕ್ಕುಗಳನ್ನು ದಮನಿಸುವ ‘ಪ್ಲೇಸೆಸ್ ಆಫ್ ವರ್ಷಿಪ್ ಆಕ್ಟ್ 1991’ ಕಾನೂನನ್ನು ತಕ್ಷಣ ರದ್ದುಗೊಳಿಸಿ, ಕಾಶಿ, ಮಥುರಾ, ತಾಜಮಹಲ್, ಭೋಜಶಾಲಾ ಮುಂತಾದ ಮೊಗಲ್ ಆಕ್ರಮಣಕಾರರು ಕಬಳಿಸಿರುವ ದೇವಸ್ಥಾನಗಳು ಮತ್ತು ಭೂಮಿಯನ್ನು ಪುನಃ ಹಿಂದೂಗಳ ನಿಯಂತ್ರಣಕ್ಕೆ ನೀಡಬೇಕು.
  4. ಸರಕಾರದ ನಿಯಂತ್ರಣದಲ್ಲಿರುವ ದೇಶಾದ್ಯಾಂತದ ಎಲ್ಲಾ ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ ಭಕ್ತರ ಕೈಗೆ ನೀಡಬೇಕು.
  5. ದೇವಸ್ಥಾನಗಳಿರುವ ಪ್ರದೇಶವನ್ನು ‘ಮದ್ಯ-ಮಾಂಸ’ ಮಾರಾಟದಿಂದ ಮುಕ್ತಗೊಳಿಸಬೇಕು.
  6. ಕೇಂದ್ರ ಸರಕಾರವು ದೇಶಾದ್ಯಾಂತ ‘ಗೋಹತ್ಯೆ ನಿಷೇಧ’ ಮತ್ತು ‘ಮತಾಂತರ ನಿಷೇಧ’ ಕಾನೂನುಗಳನ್ನು ಜಾರಿಗೊಳಿಸಬೇಕು. ಮತಾಂತರವನ್ನು ತಡೆಗಟ್ಟಲು ಸಂವಿಧಾನದ ಪರಿಚ್ಛೇದ ೨೫ ರಲ್ಲಿ ಸುಧಾರಣೆ ಮಾಡಿ ಅದರಲ್ಲಿ ಧರ್ಮದ ಪ್ರಚಾರ (Propagate) ಶಬ್ದವನ್ನು ತೆಗೆಯಬೇಕು
  7. ಧಾರ್ಮಿಕತೆಯ ಆಧಾರದ ಮೇಲೆ ‘ಹಲಾಲ್ ಪ್ರಮಾಣಪತ್ರ’ ತಕ್ಷಣ ನಿಷೇಧಿಸಬೇಕು. ಭಾರತದಲ್ಲಿ ಎಫ್.ಎಸ್.ಎಸ್.ಎ.ಐ. (FSSAI) ಮತ್ತು ಎಫ್.ಡಿ.ಎ. (FDA) ಯಂತಹ ಸರಕಾರಿ ಸಂಸ್ಥೆಗಳಿರುವಾಗಲೂ ಧಾರ್ಮಿಕ ಆಧಾರದಲ್ಲಿ ಸಮಾನಾಂತರ ಅರ್ಥವ್ಯವಸ್ಥೆಯನ್ನು ನಿರ್ಮಾಣ ಮಾಡುವ ‘ಹಲಾಲ ಸರ್ಟಿಫಿಕೇಶನ್’ ನ ಮೇಲೆ ತಕ್ಷಣ ನಿರ್ಬಂಧ ಹೇರಬೇಕು
  8. ವಕ್ಫ್ ಮಂಡಳಿಯ ಕಾನೂನನ್ನು ತಕ್ಷಣ ರದ್ದುಗೊಳಿಸಬೇಕು ಮತ್ತು ಈ ಮಂಡಳಿಯಿಂದ Land Jehad ಮೂಲಕ ಅತಿಕ್ರಮಿಸಿರುವ ಎಲ್ಲಾ ಭೂಮಿಯನ್ನು ವಕ್ಫ್ ಮುಕ್ತಗೊಳಿಸಬೇಕು.
  9. ಭಾರತದ ವಿರುದ್ಧ ಯುದ್ಧಮಾಡಲು ‘ಗಝವಾ-ಎ-ಹಿಂದ್’ ನ ಫತ್ವಾ ಜ್ಯಾರಿಗೊಳಿಸಿದ ‘ದಾರುಲ್ ಉಲೂಮ ದೇವಬಂದ’ ಈ ಸಂಘಟನೆಯನ್ನು ತಕ್ಷಣ ನಿರ್ಬಂಧಿಸಬೇಕು

10.ಗೋವಾದಲ್ಲಿ ‘ಇನ್‍ಕ್ವಿಜಿಷನ್’ ಅಡಿಯಲ್ಲಿ 250 ವರ್ಷಗಳಿಂದ ಗೋಮಂತಕರ ಮೇಲೆ ನಡೆದ ಅಮಾನವೀಯ ಮತ್ತು ಕ್ರೂರ ಅತ್ಯಾಚಾರಗಳ ಕುರಿತು ಕ್ರೈಸ್ತ ಧರ್ಮಗುರು ಪೋಪ್ ಅವರು ಗೋವಾದ ಜನತೆಯಲ್ಲಿ ಕ್ಷಮೆ ಕೇಳಬೇಕು.

  1. ಕಾಶ್ಮೀರ ಕಣಿವೆಯಲ್ಲಿ ‘ಪನುನ್ ಕಾಶ್ಮೀರ’ ಹೆಸರಿನ ಕೇಂದ್ರಾಡಳಿತ ಪ್ರದೇಶವನ್ನು ಸೃಷ್ಟಿಸಿ, ಸ್ಥಳಾಂತರಗೊಂಡಿರುವ ಕಾಶ್ಮೀರಿ ಹಿಂದೂಗಳಿಗೆ ಅಲ್ಲಿ ಪುನರ್ವಸತಿ ಕಲ್ಪಿಸಬೇಕು.
  2. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಹಿಂದೂಗಳ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು ಮತ್ತು ಭಾರತದ ಸರಕಾರವು ವಿಚಾರಣೆ ನಡೆಸಿ, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ಮಾಡಬೇಕು.
  3. ಭಾರತದಲ್ಲಿ ಅಕ್ರಮವಾಗಿ ಪ್ರವೇಶಿಸಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸ್ಲಿಮರನ್ನು ವಾಪಾಸು ಕಳಿಸಲು ಸರಕಾರವು ಕಠಿಣ ಕಾನೂನನ್ನು ಜಾರಿಗೊಳಿಸಬೇಕು. ಪೌರತ್ವ ತಿದ್ದುಪಡಿ ಕಾನೂನನ್ನು ತಕ್ಷಣ ಅನುಷ್ಠಾನಕ್ಕೆ ತರಬೇಕು.
  4. ಕಳೆದ ಕೆಲವು ವರ್ಷಗಳಿಂದ ಅಹಿಂದೂಗಳ ಜನಸಂಖ್ಯೆಯಲ್ಲಾಗುತ್ತಿರುವ ಹೆಚ್ಚಳವನ್ನು ಗಮನದಲ್ಲಿರಿಸಿ ದೇಶದಲ್ಲಿ ಎಲ್ಲ ಧರ್ಮೀಯರ ಸಂಖ್ಯೆಯನ್ನು ಸಂತುಲನ ಗೊಳಿಸಲು ದೇಶದಲ್ಲಿ ತಕ್ಷಣ ‘ಜನಸಂಖ್ಯೆ ನಿಯಂತ್ರಣ ಕಾನೂನು’ ಜಾರಿಗೊಳಿಸಬೇಕು.
  5. ಮಾನವೀಯತೆಯ ದೃಷ್ಟಿಯಿಂದ ಮತ್ತು ಸಂವಿಧಾನಾತ್ಮಕ ಅಧಿಕಾರಗಳ ವಿಚಾರವನ್ನು ಮಾಡಿ ಗೋವಾದ ಮುಖ್ಯಮಂತ್ರಿ ಶ್ರೀ ಪ್ರಮೋದ ಸಾವಂತರು, ಕರ್ನಾಟಕದ ಶ್ರೀರಾಮ ಸೇನೆಯ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ್ ಅವರ ಮೇಲೆ ಗೋವಾ ರಾಜ್ಯವು ಹೇರಿರುವ ಪ್ರವೇಶ ನಿರ್ಬಂಧವನ್ನು ತೆಗೆದುಹಾಕಬೇಕು.
  6. ‘ಒಟಿಟಿ’ ಮತ್ತು ‘ವೆಬ್ ಸೀರೀಸ್’ ಕಾನೂನಿನ ವ್ಯಾಪ್ತಿಗೆ ಸೇರಿಸಿ, ಚಲನಚಿತ್ರ ಸಂಸರ್ ಮಂಡಳಿಯಲ್ಲಿ ಹಿಂದೂ ಮತ್ತು ಆಧ್ಯಾತ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ಸೇರಿಸಬೇಕು.
  7. ಆನ್‍ಲೈನ್ ಮಾಧ್ಯಮಗಳಲ್ಲಿ ‘ರಮಿ ಸರ್ಕಲ್’, ‘ಜುಗಾರ ಜಾಹೀರಾತು’ ಗಳು ಯುವ ಜನತೆಯನ್ನು ತಪ್ಪು ಮಾರ್ಗದಲ್ಲಿ ಸಾಗುವ ತಕ್ಷಣ ನಿಷೇಧಿಸಬೇಕು.

Related post

Leave a Reply

Your email address will not be published. Required fields are marked *

error: Content is protected !!