ದೀಪಾವಳಿಯ ಪ್ರಯುಕ್ತ ಬೆಳ್ತಂಗಡಿ ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ, ಅ.31 ರಂದು 5ನೇ ವರ್ಷದ ದೀಪಾವಳಿ ದೋಸೆಹಬ್ಬ 2024, ಗೋಪೂಜಾ ಉತ್ಸವ
ಬೆಳ್ತಂಗಡಿ: ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಬೆಳ್ತಂಗಡಿ ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ಅಕ್ಟೋಬರ್ 31 ನೇ ಗುರುವಾರದಂದು 5ನೇ ವರ್ಷದ ದೀಪಾವಳಿ ದೋಸೆಹಬ್ಬ-2024 ಹಾಗೂ ಗೋ ಪೂಜಾ ಉತ್ಸವ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಕಾರ್ಯಕ್ರಮ ನಡೆಯಲಿದೆ.
ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶಾಸಕರಾದ ಹರೀಶ್ ಪೂಂಜ ರವರ ಮಾರ್ಗದರ್ಶನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಳಗ್ಗೆ ಉದ್ಘಾಟನೆ, ದ.ಕ.ಜಿಲ್ಲಾ ಮಟ್ಟದ ಸಾಂಸ್ಕೃತಿಕ ತುಡರ್ ನೃತ್ಯ ಸ್ಪರ್ಧೆ, ಸರಿಗಮಪ ಖ್ಯಾತಿಯ ಕ್ಷಿತಿ ಕೆ ರೈ ಹಾಗೂ ಅನ್ವಿತ್ ಕೊಡಗು ಇವರಿಂದ ಗಾನ ವೈಭವ, ವಿವಿಧ ಭಜನಾ ಮಂಡಳಿಯವರಿಂದ ಕುಣಿತ ಭಜನೆ, ಸಂಜೆ ಗೋ ಪೂಜೆ ಉತ್ಸವ ಹಾಗೂ ಸಹಸ್ರ ಹಣತೆ ಪ್ರಜ್ವಲನೆ, ಸುಡುಮದ್ದು ಪ್ರದರ್ಶನ ರಾತ್ರಿ 8.00 ರಿಂದ ದೇವದಾಸ್ ಕಾಪಿಕಾಡ್ ರಚಿಸಿ ನಿರ್ದೇಶಿಸಿ, ಕಾಪಿಕಾಡು, ವಾಮಂಜೂರ್, ಸಾಯಿ ಅಭಿನಯಿಸಿರುವ ತುಳು ಹಾಸ್ಯಮಯ ನಾಟಕ ಏರ್ಲಾ ಗ್ಯಾರಂಟಿ ಅತ್ ಪ್ರದರ್ಶನ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಶಾಸಕ ಧೀರಜ್ ಮುನಿರಾಜು, ಹಿಂದೂ ಮುಖಂಡರಾದ ಪುನೀತ್ ಕೆರೇಹಳ್ಳಿ, ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ,ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ನಿಕಟಪೂರ್ವ ರಾಜ್ಯಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಹಾಗೂ ಕಿಶೋರ್ ಕುಮಾರ್ ಪುತ್ತೂರು, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ,ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್, ಭಾಗೀರಥಿ ಮುರುಳ್ಯ, ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ನಂದನ್ ಮಲ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆರ್ವರ್ ಹಾಗೂ ಪ್ರೇಮಾನಂದ ಶೆಟ್ಟಿ, ಮಂಡಲ ಅಧ್ಯಕ್ಷರಾದ ಶ್ರೀನಿವಾಸ ರಾವ್, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಜಯಾನಂದ ಗೌಡ, ಯುವ ಮೋರ್ಚಾ ಪ್ರಭಾರಿ ಮಂಡಲ ಅಧ್ಯಕ್ಷರಾದ ಪ್ರಶಾಂತ್ ಪಾರೆಂಕಿ, ಯುವ ಮೋರ್ಚಾ ಮಂಡಲ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ನಡೆಯಲಿದೆಯೆoದು
ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.